ಮೈಸೂರು ಜಿಲ್ಲೆಯ ನಂಜನಗೂಡಿನ ದೇವೀರಮ್ಮನಹಳ್ಳಿಯ ಪಾಳ್ಯದ ವಿಶ್ವಗುರು ಲೇ ಔಟ್ ನ ಪರಮೇಶ್ ರವರ ಮಹಾಮನೆಯಲ್ಲಿ ನಂಜನಗೂಡು ತಾಲ್ಲೂಕು ಜಾಗತಿಕ ಲಿಂಗಾಯತ ಮಹಾಸಭಾ ಮತ್ತು ಬಸವ ಭಾರತ ಪ್ರತಿಷ್ಠಾನದ ಮೂಲಕ ಬಸವಾದಿ ಶರಣರ ವಚಗಳಲ್ಲಿ ವ್ಯಕ್ತಿತ್ವ ವಿಕಸನ ಕಾರ್ಯಕ್ರಮ ನಡೆಯಿತು. ಅನುಭಾವ ನೀಡಿದ ನರಸಿಂಹರಾಜಪುರ ಬಸವಕೇಂದ್ರದ ಬಸವಯೋಗಿಪ್ರಭುಗಳು ಬಹಳಷ್ಟು ಕಲಹಗಳು ನಡೆಯುತ್ತಿವೆ ಕಾರಣ ನಾವು ನುಡಿಯುವ ಮಾತಿನಿಂದ ನಾವಾಡುವ ನುಡಿ ದ್ವೇಷ ಅಸೂಯೆಯಿಂದ ಕೂಡಿರಬಾರದು ಭಕ್ತಿ ಮತ್ತು ಪ್ರೀತಿಯಿಂದ ಕೂಡಿರಬೇಕು ಬಸವಣ್ಣನವರು ವಚನದಂತೆ ನುಡಿದರೆ ಮುತ್ತಿನಹಾರದಂತಿರಬೇಕು ಸ್ಪಟಿಕದ ಸಲಾಕೆಯಂತಿರಬೇಕು ಲಿಂಗ ಮೆಚ್ಚಿ ಅಹುದೆನ್ನಬೇಕು. ನಾನೆಂಬ ಅಹಂಕಾರವನ್ನು ಬಿಟ್ಟಾಗ ಮಾತ್ರ ವ್ಯಕ್ತಿತ್ವ ವಿಕಾಸವಾಗುತ್ತದೆ ಇಲ್ಲಂದರೆ ವಿನಾಶವಾಗುತ್ತದೆ.ಸಜ್ಜನರ ಸಂಗದಿಂದ ವಿಕಾಸ ದುರ್ಜನರ ಸಂಗದಿದ ವಿನಾಶ.ಮೂಢನಂಬಿಕೆ ನಮ್ಮನ್ನು ಅಜ್ಞಾನ ಅಂಧಕಾರ ಕಡೆ ನೂಕುತ್ತವೆ
ವಚನಗಳು ನಮಗೆ ಸುಜ್ಞಾನ ನೀಡುತ್ತವೆ ಎಂದು ಹೇಳಿದರು.ಮನಸ್ಸಿನ ಹರಿಯಲು ಬಿಡಬಾರದು ಲಿಂಗ ಧ್ಯಾನದಲ್ಲಿ ನಿರೀಕ್ಷಣೆಯಲ್ಲಿರಿಸಬೇಕು.
ಕುಡಿತ ಜೂಜು ಮಾದಕವಸ್ತುಗಳಿಂದ ದೂರವಿರಬೇಕು ಮಾನವ ಅಜ್ಞಾನದಿಂದ ಸುಜ್ಞಾನದೆಡೆಗೆ, ಕತ್ತಲಿನಿಂದ ಬೆಳಕಿನೆಡೆಗೆ,ಸ್ವಾರ್ಥದಿಂದ ನಿಸ್ವಾರ್ಥದೆಡೆಗೆ ಬಂದು ಬಸವಾದಿ ಶರಣರ ಸತ್ ಚಿಂತನೆಗಳನ್ನು ಅಳವಡಿಸಿ ಕೊಂಡು ವ್ಯಕ್ತಿತ್ವವನ್ನು ವಿಕಸನ ಮಾಡಿಕೊಳ್ಳೋಣ
ಎಂದು ಹೇಳಿದರು.ವೇದಿಕೆಯಲ್ಲಿ ನಂಜನಗೂಡು ಜಾಗತಿಕ ಲಿಂಗಾಯತ ಮಹಾಸಭಾ ಅಧ್ಯಕ್ಷ ದೇವಿರಮ್ಮನಹಳ್ಳಿ ನಂದೀಶ್ ಬಸವ ಭಾರತ ಪ್ರತಿಷ್ಠಾನದ ಅಧ್ಯಕ್ಷ ನಂದೀಶ್ ಮುಖಂಡರಾದ ಮಹೇಶ್ ಬಸವರಾಜು ಮಾಧುಸ್ವಾಮಿ ವಚನ ಶಾಲೆಯ ಮಕ್ಕಳು ಉಪಸ್ಥಿತರಿದ್ದರು.ಅಕ್ಕ ಮಹಾದೇವಿ ವಿದ್ಯಾರ್ಥಿನಿಲಯದ ಮಕ್ಕಳು ವಚನಗಾಯನ ಮಾಡಿದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.