ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ ಕಸಬಾ ಹೋಬಳಿ ವ್ಯಾಪ್ತಿಯ ಬೋಡರಹಳ್ಳಿ ಗ್ರಾಮದ ಸ್ಮಶಾನ ಮತ್ತು ಸ್ಮಶಾನಕ್ಕೆ ದಾರಿ ಬಿಡಿಸಿಕೊಡಿ ಎಂದು ಮೃತ ರಾಮಾಂಜಿನಪ್ಪ (35) ರವರ ಶವದೊಂದಿಗೆ ಗ್ರಾಮಸ್ಥರು ಅಧಿಕಾರಿಗಳ ವಿರುದ್ದ ಪ್ರತಿಭಟಿಸಿರುವ ಘಟನೆ ಬುಧವಾರ ಸಂಜೆ ನಡೆದಿದೆ.
ಗ್ರಾಮದ ಕಾವೇಲಪ್ಪ ಮಾತನಾಡಿ ಖಾಸಗಿ ವ್ಯಕ್ತಿಗಳು ಸ್ಮಶಾನಕ್ಕೆ ಹೋಗುವ ದಾರಿಯನ್ನು ಒತ್ತುವಾರಿ ಮಾಡಿಕೊಂಡಿದ್ದಾರೆ. ಶವ ಸಂಸ್ಕಾರಕ್ಕೆ ಹೋಗಲು ಸ್ಮಶಾನಕ್ಕೆ ದಾರಿ ಇಲ್ಲವೆಂದು ಅನೇಕ ಭಾರಿ ತಹಶಿಲ್ದಾರ್ ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು ಆದರೂ ಸಹ ದಾರಿ ಬಿಡಿಸಿಕೊಡುವಲ್ಲಿ ಅಧಿಕಾರಿ ನಿರ್ಲಕ್ಷ್ಯ ವಹಿಸಿದ್ದಾರೆಂದು ಶವವನ್ನು ಇಟ್ಟುಕೊಂಡು ದಿಕ್ಕಾರ ಕೂಗಿದ್ದಾರೆ.
ಸುಮೂರು 200 ವರ್ಷಗಳಿಂದ ಗ್ರಾಮಸ್ಥರು ಇದೇ ಜಾಗದಲ್ಲಿ ಶವ ಸಂಸ್ಕಾರ ಮಾಡುತ್ತಿದ್ದೇವೆ ಕಳೆದ ಒಂದು ವರ್ಷದ ಹಿಂದೆ 11/07/2023 ಸ್ಮಶಾನ ಮತ್ತು ದಾರಿಯನ್ನು ಸುತ್ತಮುತ್ತಲಿನ ಖಾಸಗಿ ಜಮೀನುದಾರರು ಒತ್ತುವರಿ ಮಾಡಿಕೊಂಡಿದ್ದಾರೆ ಈ ಬಗ್ಗೆ ಅಧಿಕಾರಿಗಳಿಗೆ ಮನವಿ ಪತ್ರಗಳು ಸಲ್ಲಿಸಿ ಸಾಕಾಗಿದೆ ಎಂದು ಗ್ರಾಮಸ್ಥರು ಅಧಿಕಾರಿಗಳ ವಿರುದ್ದ ಪ್ರತಿಭಟನೆ ನಡೆಸಿ ದಾರಿ ಬಿಡಿಸಿಕೊಡುವಂತೆ ಮನವಿ ಮಾಡಿಕೊಂಡಿದ್ದಾರೆ.
ಸ್ಥಳಕ್ಕೆ ಕಸಬಾ ಅರ್.ಐ. ರಾಜಗೋಪಾಲ್, ಗ್ರಾಮ ಲೆಕ್ಕಾಧಿಕಾರಿ ಮಾಗಯ್ಯ, ಪಿ.ಡಿ.ಒ ರಂಗಧಾಮ ಬೇಟಿ ಮಾಡಿ ಸರ್ವೆ ಕಾರ್ಯಮಾಡಿ ಸ್ಮಶಾನ ಮತ್ತು ದಾಯಿಯನ್ಜ ತೆರವುಗೊಳಿಸಕೊಡುತ್ತೇನೆಂದು ತಿಳಿಸಿದ್ದಾರೆ.
ಈ ವೇಳೆ ನಾಗೇ ಗೌಡಣ, ಈರಪ್ಪ, ಕುಮಾರ,ರಾಮಾಂಜಿ, ನಾಗರಾಜಪ್ಪ, ನಾಗರಾಜು,ಕಿರಣ್, ನಾರಾಯಣಪ್ಪ, ಶ್ರೀನಿವಾಸುಲು,ನರಸಿಂಹ,ಹನುಮಂತರಾಯಪ್ಪ, ಬುಡ್ಡಪ್ಪ ನಾಗರಾಜು,ರವಿ ಇನ್ನೂ ಅನೇಕರಿದ್ದರು.
ವರದಿ. ಕೆ. ಮಾರುತಿ ಮುರಳಿ