ಮರಿದಾಸನಹಳ್ಳಿಯಲ್ಲಿ ಕನ್ನಡ ಭೋದಕರ ಕಾರ್ಯಾಗಾರ ಉದ್ಘಾಟನೆ
ಪಾವಗಡ:ಮಕ್ಕಳ ಶೈಕ್ಷಣಿಕ ಪ್ರಗತಿಗೆ ಜಾನಪದೀಯ ಕಲೆ ಸಹಕಾರಿಯಾಗಲಿದೆ ಎಂದು ಮಧುಗಿರಿ ಶೈ.ವಿಷಯ ಪರಿವೀಕ್ಷಕ ಚಿತ್ತಪ್ಪ ಅವರು ಅಭಿಪ್ರಾಯಪಟ್ಟರು.
ಗುರುವಾರ ತಾಲ್ಲೂಕಿನ ಮರಿದಾಸನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಜಿಲ್ಲಾ ಶಿಕ್ಷಣ ತರಬೇತಿ ಸಂಸ್ಥೆ, ಉಪನಿರ್ದೇಶಕರ ಶಾಲಾ ಶಿಕ್ಷಣ ಇಲಾಖೆ ಮಧುಗಿರಿ,ಪಾವಗಡ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ,ಕ್ಷೇತ್ರ ಸಂಪನ್ಮೂಲಾಧಿಕಾರಿ ಕಾರ್ಯಾಲಯದ ಸಹಯೋಗದಲ್ಲಿ ಆಯೋಜಿಸಿದ್ದ ತಾಲ್ಲೂಕು ಕನ್ನಡ ಭೋದಕರ ವೇದಿಕೆಯ 2 ನೇ ಪುನಃಶ್ಚೇತನ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಮುಂದುವರೆಯಲು ಶಿಕ್ಷಕರ ಸೃಜನಾತ್ಮಕ ಚಟುವಟಿಕೆಗಳು ಅತ್ಯಗತ್ಯ ಮತ್ತು ಜಾನಪದದ ವಿಷಯಗಳ ಸೈದ್ಧಾಂತಿಕ ಪಠ್ಯ ಅಧ್ಯಯನಕ್ಕೆ ಜಾನಪದೀಯ ಕಲಾ ಪ್ರಕಾರಗಳಾದ ಹಾಡು, ನೃತ್ಯ, ವಿವಿಧ ಜಾನಪದ ಕಲೆಗಳ ಕೌಶಲ್ಯದಿಂದಲೇ ಅವುಗಳನ್ನು ಸಮರ್ಥವಾಗಿ ಬಳಸಿಕೊಂಡು ಭವಿಷ್ಯ ಕಟ್ಟಲು ಸಹಕಾರಿಯಾಗಲಿದೆ.ಜೊತೆಗೆ ನೆನಪಿನ ಶಕ್ತಿ ವೃದ್ಧಿಸಿ ಹತ್ತನೇ ತರಗತಿಯಲ್ಲಿ ಹೆಚ್ಚು ಅಂಕ ಪಡೆಯಲು ಮಕ್ಕಳಿಗೆ ಪೂರಕವಾಗುತ್ತದೆ ಎಂದರು.
ಕ್ರಮಬದ್ಧತೆಯ ಅಧ್ಯಯನದ ರೂಪುರೇಷೆಗಳನ್ನು ಸಿದ್ಧಪಡಿಸಿಕೊಂಡು ಮಕ್ಕಳಲ್ಲಿ ಇನ್ನಷ್ಟು ಕಲಿಕಾಸಕ್ತಿ ಹೆಚ್ಚಿಸುವ ಶ್ರವಮವನ್ನು ಕನ್ನಡ ಭಾಷಾ ಶಿಕ್ಷಕರು ಪಾರದರ್ಶಕವಾಗಿ ಮಾಡಬೇಕು ಎಂದು ಕಿವಿ ಮಾತು ತಿಳಿಸಿದರು.
ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕರಾದ ರಾಜಗೋಪಾಲ,ಕನ್ನಡ ಭಾಷಾ ವೇದಿಕೆಯ ಉಪಾಧ್ಯಕ್ಷರಾದ ಆರ್.ನರಸಿಂಹಮೂರ್ತಿ, ಕನ್ನಡ ಸಾಹಿತ್ಯ ಪರಿಷತ್ ಕಾರ್ಯದರ್ಶಿ ರಂಗಪ್ಪ,ಶಿಕ್ಷಕರಾದ ಕಾಂತರಾಜು,ಅರುಣ.ಪಿ.ಎಸ್ ಉಪಸ್ಥಿತರಿದ್ದರು. ಸಂಪನ್ಮೂಲ ವ್ಯಕ್ತಿಗಳಾದ ಶಿಕ್ಷಕರು ನಾಗರಾಜು ಹಾಗೂ ನರಸೇಗೌಡ ಗಮಕ ವಾಚಕವನ್ನು ನೆರವೇರಿಸಿದರು.
ವರದಿ. ಕೆ. ಮಾರುತಿ ಮುರಳಿ