ರಾಜ್ಯ ಸರ್ಕಾರದ ವಿರುದ್ಧ ಸೆನಸೈ ಮಹೇಂದ್ರ ಕ್ಷೀರಸಾಗರ ಆಕ್ರೋಶ
ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ 2022- 23ನೇ ಸಾಲಿನಲ್ಲಿ ಸರಕಾರಿ ವಸತಿ ಶಾಲೆಗಳಾದ ಮುರಾರ್ಜಿ ದೇಸಾಯಿ ವಸತಿ ಶಾಲೆ ಮತ್ತು ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಹಾಗು ಶ್ರೀಮತಿ ಇಂದಿರಾಗಾಂಧಿ ವಸತಿ ಶಾಲೆಗಳಲ್ಲಿ ವಿದ್ಯಾರ್ಥಿನಿಯರಿಗಾಗಿ ಸ್ವಯಂ ರಕ್ಷಣೆ ಮಾಡಿಕೊಳ್ಳಲು ಲೈಂಗಿಕ ಶೋಷಣೆ,ಅನ್ಯಾಯದ ವಿರುದ್ಧ ಹೋರಾಡಲು, ದುಷ್ಟ ಶಕ್ತಿಯನ್ನು ಧಮನ ಮಾಡಲು, ಶಿಷ್ಟ ಶಕ್ತಿಯನ್ನು ರಕ್ಷಣೆ ಮಾಡಲು ಅಂದಿನ ಸರಕಾರ ವಿದ್ಯಾರ್ಥಿನಿಯರ ಸ್ವಯಂ ರಕ್ಷಣೆಯ ದೃಷ್ಟಿಯಿಂದ 12 ಕೋಟಿ ರೂಪಾಯಿ ಬಿಡುಗಡೆಗೊಳಿಸುವುದಾಗಿ ಭರವಸೆ ನೀಡಿತ್ತು ಕಡ್ಡಾಯವಾಗಿ ಮೂರು ವರ್ಷಗಳವರೆಗೆ ಪ್ರತಿಯೊಬ್ಬ ಹೆಣ್ಣು ಮಕ್ಕಳು ತರಬೇತಿ ಪಡೆದುಕೊಂಡರೆ ಬ್ಲಾಕ್ ಬೆಲ್ಟ್ ಪದವಿ ಪೂರ್ಣಗೊಳಿಸಿದಂತೆ ಆಗುತ್ತದೆ ಎಂದು ಅಂದಿನ ಸಮಾಜ ಕಲ್ಯಾಣ ಇಲಾಖೆಯ ಸಚಿವರಾದ ಕೋಟಾ ಶ್ರೀನಿವಾಸ್ ಪೂಜಾರಿ ಅವರು ಹೇಳಿಕೆ ನೀಡಿದ್ದರು ಆದರೆ ಇಂದಿನ ಸಮಾಜ ಕಲ್ಯಾಣ ಇಲಾಖೆಯ ಸಚಿವರಾದ ಎಚ್ ಸಿ ಮಹದೇವಪ್ಪನವರು ಯಾಕೆ ಮೀನಾ ಮೇಷ ಎಣಿಸುತ್ತಿದ್ದಾರೆ ಎಂಬುವುದು ಗೊತ್ತಾಗುತ್ತಿಲ್ಲ. ಕರಾಟೆ ಶಿಕ್ಷಕರ ಅನುದಾನ ಕೆಲವು ಜಿಲ್ಲೆಗಳಲ್ಲಿ ಶಾಲೆಯ ಖರ್ಚು ವೆಚ್ಚಗಳ ಅನುದಾನದಲ್ಲಿ ಕೊಟ್ಟಿದ್ದಾರೆ ಹಾಗಾದರೆ ಸರ್ಕಾರದ ಖಜಾನೆಯಲ್ಲಿ ದುಡ್ಡಿಲ್ಲವೇ ಅಥವಾ ಸರಕಾರ ದಿವಾಳಿಯಾಗಿದೆಯೇ ಎಂಬುವುದು ಯಕ್ಷ ಪ್ರಶ್ನೆಯಾಗಿದೆ ಈ ಕೂಡಲೆ ಕರಾಟೆ ಶಿಕ್ಷಕರ 2022-23ರ ಅನುದಾನವನ್ನು ಬಿಡುಗಡೆಗೊಳಿಸಬೇಕು ಹಾಗೂ ಸಮಾಜ ಕಲ್ಯಾಣ ಇಲಾಖೆಯ ವಸತಿ ಶಾಲೆಗಳಲ್ಲಿ ಹಾಗೂ ಸರ್ಕಾರಿ ಪ್ರಾಥಮಿಕ ಹಾಗೂ ಮಾಧ್ಯಮಿಕ ಪ್ರೌಢಶಾಲೆಗಳಲ್ಲಿ ಮತ್ತು ವಸತಿ ನಿಲಯಗಳಲ್ಲಿ ಪುನಹ ನೂತನವಾಗಿ ಕರಾಟೆ ಶಿಕ್ಷಣವನ್ನು ಕಡ್ಡಾಯಗೊಳಿಸಬೇಕು ಕೆಲಸಕ್ಕೆ ಬಾರದ ಯೋಜನೆಗಳು ಜಾರಿಗೆ ತರುವ ಮುನ್ನ ಇಂತಹ ಪ್ರಗತಿ ಪೂರ್ವಕ ವಿದ್ಯಾರ್ಥಿನಿಯರ ನೆಚ್ಚಿನ ಮಹಿಳಾ ಸಬಲೀಕರಣ ದೃಷ್ಟಿಯಿಂದ ಕ್ರಾಂತಿಕಾರಕ ಯೋಜನೆಗಳು ಜಾರಿಗೆ ತಂದರೆ ಸರಕಾರಕ್ಕೂ ಶ್ರೇಯಸ್ಸು ಹಾಗೂ ರಾಜ್ಯಕ್ಕೂ ಶ್ರೇಯಸ್ಸು ತಂದಂತಾಗುತ್ತದೆ ಎಂದು ಆಳಂದ ತಾಲೂಕಿನ ತಾಲೂಕ ಪ್ರಗತಿಪರ ಚಿಂತಕರು ವಿಶೇಷ ಕರಾಟೆ ಪರಿಣಿತರು ಸೇನಸೈ ಮಹೇಂದ್ರ ಕ್ಷೀರಸಾಗರ ಅವರು ತಮ್ಮ ಅಭಿಪ್ರಾಯವನ್ನು ಪತ್ರಿಕಾ ಪ್ರಕಟಣೆಯ ಮೂಲಕ ವ್ಯಕ್ತಪಡಿಸಿದ್ದಾರೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಹಲವಾರು ಕರಾಟೆ ಶಿಕ್ಷಕರು ತರಬೇತಿ ನೀಡಿದ್ದಾರೆ ಆದರೆ ಅನುದಾನ ಇದುವರೆಗೆ ಬಿಡುಗಡೆ ಆಗಿಲ್ಲ ಕೂಡಲೇ ಬಿಡುಗಡೆಗೊಳಿಸಬೇಕು ಇಲ್ಲದಿದ್ದರೆ ಮುಂದೆ ಬರುವಂತಹ ದಿನಗಳಲ್ಲಿ ಸರಕಾರದ ವಿರುದ್ಧ ಕರಾಟೆ ಶಿಕ್ಷಕರೊಂದಿಗೆ ಸರ್ಕಾರಿ ವಿರೋಧಿ ಜಾಗೃತಿ ಅಭಿಯಾನ ನಡೆಸಿ ವಿರೋಧ ವ್ಯಕ್ತಪಡಿಸಲಾಗುವುದು ಈ ಕೂಡಲೇ ಇದಕ್ಕೆ ಸಂಬಂಧಪಟ್ಟ ಇಲಾಖೆಯ ಸಚಿವರು ಎಚ್ಚೆತ್ತುಕೊಂಡು ಸ್ಥಗಿತಗೊಂಡ ಕರಾಟೆ ಶಿಕ್ಷಕರ ಅನುದಾನವನ್ನು ಬಿಡುಗಡೆಗೊಳಿಸಬೇಕು ಎಂದು ಆಳಂದ ತಾಲೂಕ ಕರಾಟೆ ಶಿಕ್ಷಕರಾದ ಸೆನಸೈ ಮಹೇಂದ್ರ ಕ್ಷೀರಸಾಗರ್ ರವರು ಪತ್ರಿಕಾ ಪ್ರಕಟಣೆಯಲ್ಲಿ ಸರಕಾರಕ್ಕೆ ಆಗ್ರಹಿಸಿದ್ದಾರೆ.
ವರದಿ:ಚಂದ್ರಶಾಗೌಡ ಮಾಲಿ ಪಾಟೀಲ್