ಬೆಳಗಾವಿ ಜಿಲ್ಲೆ ರಾಮದುರ್ಗಕ್ಕೆ ಹೊಸ ರೈಲು ಮಾರ್ಗ ಜೋಡಿಸುವಂತೆ ಒತ್ತಾಯಿಸಿ ನ್ಯಾಷನಲ್ ಹ್ಯೂಮನ್ ರೈಟ್ಸ ಸಂಸ್ಥೆಯ ನೇತೃತ್ವದಲ್ಲಿ ಸಾರ್ವಜನಿಕರು ಸಂಸದರಿಗೆ ಹಾಗೂ ತಹಶೀಲ್ದಾರರ ಮೂಲಕ ರೈಲ್ವೆ ಸಚಿವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ನ್ಯಾಷನಲ್ ಹ್ಯೂಮನ್ ರೈಟ್ಸ್ ರಾಜ್ಯಾಧ್ಯಕ್ಷ ಬಿ.ಯು. ಭೈರಕದಾರ ಮಾತನಾಡಿ ಕಳೆದ ೧೫ ವರ್ಷಗಳಿಂದ ನ್ಯಾಷನಲ್ ಹ್ಯೂಮನ್ ರೈಟ್ಸ್ ರಾಮದುರ್ಗ ವತಿಯಿಂದ ರಾಮದುರ್ಗಕ್ಕೆ ಹೊಸ ರೈಲು ಮಾರ್ಗ ಬೇಡಿಕೆಗಾಗಿ ಸಾಕಷ್ಟು ಬಾರಿ ಹೋರಾಟಗಳನ್ನು ಮಾಡಿ ರೈಲ್ವೆ ಸಚಿವರಿಗೆ, ಜಿಲ್ಲಾಧಿಕಾರಿಗಳಿಂದ ಸಂಬಂಧ ಪಟ್ಟ ಅಧಿಕಾರಿಗಳಿಗೆ ಮತ್ತು ಶಾಸಕರುಗಳಿಗೆ ಮನವಿ ಕೊಡಲಾಗಿದ್ದರೂ ಇನ್ನೂವರೆಗೂ ಯಾವುದೇ ಸ್ಪಂದನೆ ಸಿಕ್ಕಿಲ್ಲ. ರಾಮದುರ್ಗ ತಾಲೂಕಿನಲ್ಲಿ ಎರಡು ಸಕ್ಕರೆ ಕಾರ್ಖಾನೆಗಳು ಇದ್ದು, ನೇಕಾರರು ಸೀರೆ ನೇಯುವುದು ಇವೆ. ಅಲ್ಲದೇ ರೈತರು ತಮ್ಮ ಬೆಳೆಗಳನ್ನು ದೂರದ ನಗರಗಳಿಗೆ ಸಾಗಿಸಲು ಮತ್ತು ಇಲ್ಲಿ ಪ್ರವಾಸಿ ಸ್ಥಾನಗಳಾದ ಗೊಡಚಿ ವೀರಭದ್ರೇಶ್ವರ ದೇವಸ್ಥಾನ, ಮುಳ್ಳೂರ ಶಿವನ ಮೂರ್ತಿ, ಶಬರಿ ಕೊಳ್ಳ, ಕಲ್ಲೂರ ಸಿದ್ದೇಶ್ವರ, ಹೂವಿನಕೊಳ್ಳ, ರಾಮೇಶ್ವರ ಕೊಳ್ಳ, ಮೇಗುಂಡೇಶ್ವರ ಕೊಳ್ಳ ಐತಿಹಾಸಿಕ ರಾಮದುರ್ಗ ಕೋಟೆ ನೋಡಲು ಸಾವಿರಾರು ಸಂಖ್ಯೆಯಲ್ಲಿ ಜನ ಪ್ರವಾಸಕ್ಕೆ ಬರುತ್ತಾರೆ. ಜೊತೆಗೆ ಇಲ್ಲಿರುವ ಜನ ಬೇರೆ ರಾಜ್ಯಗಳ ಜೊತೆ ವ್ಯವಹಾರಗಳನ್ನು ಮಾಡುತ್ತಾರೆ ಅದಕ್ಕಾಗಿ ರಾಮದುರ್ಗ ಪಟ್ಟಣಕ್ಕೆ ರೈಲು ಮಾರ್ಗ ಅತಿ ಅವಶ್ಯವಿರುತ್ತದೆ. ಬೇಗನೆ ರಾಮದುರ್ಗಕ್ಕೆ ಹೊಸ ರೈಲು ಮಾರ್ಗ ಮಾಡಿಸಿ ಕೋಡಬೇಕೆಂದು ಮನವಿ ಸಲ್ಲಿಸಿ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಧನಲಕ್ಷ್ಮಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಮಲ್ಲಣ್ಣ ಯಾದವಾಡ, ನ್ಯಾಷನಲ್ ಹ್ಯೂಮನ ರೈಟ್ಸ್ ರಾಜ್ಯಾಧ್ಯಕ್ಷ ಬಿ.ಯು. ಭೈರಕದಾರ, ಬಸವರಾಜ ಗುರೆಡ್ಡಿ, ದಾದಾಪೀರ ಕೆರೂರ, ಸೋಹಿಲ ಭೈರಕದಾರ, ನ್ಯಾಯವಾದಿಗಳಾದ ಎಸ್.ಬಿ. ಪಾಟೀಲ, ಎಂ.ಜಿ. ಸೋರಿ, ಜಿ.ಬಿ. ಅಮಟೂರ, ಸಲೀಂ ಕೆರೂರ, ಸದ್ದಾಂ ಮೋಕಾಶಿ, ಬಿ.ಎಚ್. ಬಣೆನ್ನವರ, ಸಾತಪ್ಪ ಹುರಕಡ್ಲಿ, ಪರವೇಜ ಫಣಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ವರದಿ ಕರಿಯಪ್ಪ ಮಾ ಮಾದರ