ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಹೂಗ್ಯಂ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಕೃಷಿ ಇಲಾಖೆ 03 ತೋಟಗಾರಿಕೆ ಇಲಾಖೆ 03 ವಲಯ ಅರಣ್ಯ ಇಲಾಖೆ (ವೈಲ್ಡ್ ಲೈಫ್) 05 ಕಾಮಾಗಾರಿ ಸೇರಿದಂತೆ 163 ಕಾಮಾಗಾರಿಗಳನ್ನು ಕೈಗೊಂಡಿದ್ದು 3.35 ಕೋಟಿ ರೂ. ಹಣ ಖಚಾ೯ಗಿದೆ ಎಂದು ತಾಲ್ಲೂಕು ಸಂಯೋಜಕ ನಾರಾಯಣ್ ಹೇಳಿದರು.
ಗ್ರಾಮ ಪಂಚಾಯ್ತಿ ಆವರಣ ಆಯೋಜಿಸಿದ್ದ 2023-24ನೇ ಸಾಲಿನ ನರೇಗಾ ಯೋಜನೆ ಸಾಮಾಜಿಕ ಪರಿಶೋಧನೆ ಮತ್ತು 15ನೇ ಹಣಕಾಸು ಯೋಜನೆ ಗ್ರಾಮಸಭೆಯಲ್ಲಿ ಮಾತನಾಡಿದ ಅವರು ನರೇಗಾ ಯೋಜನೆ ಮತ್ತು15ನೇ ಹಣಕಾಸು ಕೇಂದ್ರ ಸಕಾ೯ರದ ಯೋಜನೆಯಾಗಿದೆ. ನರೇಗಾ ಯೋಜನೆಯಡಿ ಕೂಲಿ ಕಾಮಿ೯ಕರಿಗೆ ಉಧ್ಯೋಗ ಒದಗಿಸುವ ನಿಟ್ಟಿನಲ್ಲಿ ಗ್ರಾಮೀಣ ಭಾಗದಲ್ಲಿ ಜನರು ಗುಳೆ ಹೋಗುವುದನ್ನು ತಪ್ಪಿಸುವ ಉದ್ದೇಶ ಹೊಂದಿರುತ್ತದೆ.
ಹಾಗೆಯೇ ಕಳೆದ ಒಂದು ವಷ೯ದಲ್ಲಿ ಅರಣ್ಯ ತೋಟಗಾರಿಕೆ ಇಲಾಖೆ ಸೇರಿದಂತೆ 163 ಕಾಮಾಗಾರಿ ಕೈಗೆತ್ತಿಕೊಂಡಿದ್ದು ಕೂಲಿ ಬಾಬ್ತು 1,55,37,089/- ಕೋಟಿ ರೂ. ಸಾಮಾಗ್ರಿ ಬಾಬ್ತು 1,80,35,151/- ಕೋಟಿ ರೂ. ಒಟ್ಟು 3,35,72,240/- ಕೋಟಿ ರೂ ಖಚಾ೯ಗಿದೆ. ಕಾಮಾಗಾರಿ ಸ್ಥಳ ಪರಿಶೀಲನೆ ಕೂಲಿ ಕಾಮಿ೯ಕರ ಮನೆಗಳಿಗೆ ಬೇಟಿ ನೀಡಿ ಮಾಹಿತಿ ಪಡೆಯಲಾಗಿದೆ. ಮತ್ತು ಈ ಬಗ್ಗೆ ಸಭೆಯಲ್ಲಿ ಮಾಹಿತಿ ಮಂಡನೆ ಮಾಡಿದ್ದು ನಡೆದಿರುವ ಕೆಲಸದ ಬಗ್ಗೆ ಲೋಪ ದೋಷಗಳು ಇದ್ದರೆ ಸಾವ೯ಜನಿಕರು ಆಕ್ಷೇಪಣೆ ಸಲ್ಲಿಸಬಹುದು ಎಂದರು.
ಪಿಡಿಓ ಪುಷ್ಪಲತಾ ಮಾತನಾಡಿ ನರೇಗಾ ಯೋಜನೆಯಡಿ ಸಮುದಾಯ ಮತ್ತು ವೈಯಕ್ತಿಕ ಕಾಮಗಾರಿಗಳನ್ನು ನಿರ್ವಹಿಸಿಕೊಳ್ಳಲು ಅವಕಾಶವಿರುತ್ತದೆ ಕೆರೆಕಟ್ಟೆಗಳು ಚೆಕ್ ಡ್ಯಾಮ್ ಆಟದ ಮೈದಾನ ಜಮೀನು ರಸ್ತೆಗಳು ನೀರಿನ ಪಟ್ಟಿ ಇನ್ನಿತರ ಸಮುದಾಯ ಕೆಲಸವಾಗಿರುತ್ತೇನೆ. ಮನೆ ಕೊಟ್ಟಿಗೆ ಕೋಳಿ ಶೆಡ್ಡು ಬಚ್ಚಲ ಗುಂಡಿ ಕೃಷಿ ಹೊಂಡಾ ನಿರ್ಮಾಣ ಮಾಡಲು ಅವಕಾಶ ಇರುತ್ತದೆ ಇದನ್ನು ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳುವಂತೆ ತಿಳಿಸಿದರು.
15ನೇ ಹಣಕಾಸು ಯೋಜನೆ ಪಂಚಾಯ್ತಿ ಭೌಗೋಳಿಕ ವಿಸ್ತರಣೆ ಮತ್ತು ಜನ ಸಂಖ್ಯೆ ಆಧಾರದ ಮೇಲೆ ಅನುಗುಣವಾಗಿ ಅನುಧಾನ ನೀಡಲಾಗುತ್ತದೆ. ಇದರಲ್ಲಿ ಗ್ರಾಮಗಳ ಸ್ವಚ್ಚತೆ ಕುಡಿಯುವ ನೀರು ಬೀದಿ ದೀಪ ನಿವ೯ಹಣೆ ನೌಕರರ ವೇತನ ಪಾವತಿ ಚರಂಡಿ ಹೂಳು ತೆಗೆಯುವುದು ಇನ್ನಿತರ ಗ್ರಾಮಾಭಿವೃದ್ದಿ ಕೆಲಸಗಳಿಗೆ ಬಳಸಲಾಗುತ್ತದೆ ಎಂದರು
ಈ ವೇಳೆ ನೋಡೆಲ್ ಅಧಿಕಾರಿ ನಕ್ಕುಂಡಿ ಆಶ್ರಮ ಶಾಲೆ ಮುಖ್ಯ ಶಿಕ್ಷಕ ನಾಗರಾಜ್ ಪಿಡಿಓ ಪುಷ್ಪಲತಾ ಕಾರ್ಯದರ್ಶಿ ಮಹಾದೇವ ಅಧ್ಯಕ್ಷೆ ಮುರುಗೇಶ ಉಪಾಧ್ಯಕ್ಷ ರಾಜಮ್ಮಕರ ವಸೂಲಿ ಮಾದೇಶ ಮುರುಗೇಶ ಗಣಕಯಂತ್ರ ಚಾರಿತ ವೆಂಕಟೇಶ್ ಸುರೇಶ್ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಮಹಿಳೆಯರು ಗ್ರಾಮಸ್ಥರು ಮುಖಂಡರುಗಳು ಇದ್ದರು.
ವರದಿ :ಉಸ್ಮಾನ್ ಖಾನ್