ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ಪಟ್ಟಣದ ಮಾನ್ಯ ತಹಸಿಲ್ದಾರ್ ಇವರಿಗೆ,
ಆಧಾರ್ ಕಾರ್ಡ್ ಸೆಂಟರ್ ಲೈಸನ್ಸ್ ರದ್ದುಪಡಿಸಿ ಸಾರ್ವಜನಿಕರಿಗೆ ವಂಚಿಸಿದ ಗುತ್ತಿಗೆದಾರರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವ ಕುರಿತು. ತಹಸೀಲ್ದಾರ್ ರವರಿಗೆ ಮನವಿ ಮಾಡಲಾಯಿತು
ಬಸವನಬಾಗೇವಾಡಿ ಪಟ್ಟಣದಲ್ಲಿ ಬಿಎಸ್ಎನ್ಎಲ್ ಆಫೀಸ್ ಕಚೇರಿಯ ಆವರಣದಲ್ಲಿ ಖಾಸಗಿ ಅವರಿಂದ ಗುತ್ತಿಗೆ ಆಧಾರದ ಮೇಲೆ ಲೈಸೆನ್ಸ್ ಪಡೆದು ಆಧಾರ್ ಕಾರ್ಡ್ ಗಳನ್ನು ತೆಗೆಯುತ್ತಿರುವ ಗುತ್ತಿಗೆದಾರರು ಸಾರ್ವಜನಿಕರಿಂದ ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ಮನಬಂದಂತೆ ಹಣ ವಸೂಲಿ ಮಾಡಿ ಆಧಾರ್ ಕಾರ್ಡ್ ಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಒಂದು ಆಧಾರ್ ಕಾರ್ಡಿಗೆ 2,000 ಗಳಿಂದ 5000 ವರೆಗೆ ಹಣ ವಸೂಲಿ ಮಾಡುತ್ತಿದ್ದಾರೆ. ಯಾರ ಭಯವು ಇಲ್ಲದೆ ಫೋನ್ ಪೆ ಹಾಗೂ ನಗದು ರೂಪದಲ್ಲಿ ಹಣ ಪಡೆದುಕೊಳ್ಳುವುದು ಇವರಿಗೆ ಸಹಜವಾಗಿದೆ. ಸಾಕಷ್ಟು ಬಾರಿ ಭೇಟಿ ನೀಡಿ ತಿಳುವಳಿಕೆ ಹೇಳಿದರು ಕೂಡ ಯಾವುದೇ ರೀತಿ ಪ್ರಯೋಜನ ಆಗುತ್ತಿಲ್ಲ. ಮನಸ್ಸಿಗೆ ಬಂದಂತೆ ವರ್ತಿಸುತ್ತಿದ್ದಾರೆ. ಬಡವರ ಹಾಗೂ ಕೂಲಿ ಕಾರ್ಮಿಕರ ರಕ್ತ ಹೀರುವಂಥ ಕೆಲಸ ಇವರಿಂದಾಗುತ್ತಿದ್ದು ದಯಾಳುಗಳಾದ ತಾವು ಸೂಕ್ತ ತನಿಖೆ ಮಾಡಿ ಸದರಿ ಆಧಾರ್ ಕಾರ್ಡ್ ಸೆಂಟರ್ ಲೈಸೆನ್ಸ್ ರದ್ದುಪಡಿಸಿ ತಪ್ಪಿಸ್ತ ಗುತ್ತಿಗೆದಾರರನ್ನು ಮೋಸ ವಂಚನೆಯ ಪ್ರಕರಣದಡಿಯಲ್ಲಿ ಅವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಈ ಮೂಲಕ ಕರ್ನಾಟಕ ರಾಜ್ಯ ಟಿಪ್ಪು ಸುಲ್ತಾನ್ ಅಭಿಮಾನಿಗಳ ಮಹಾ ವೇದಿಕೆ ಆಗ್ರಹಿಸುತ್ತದೆ.
ಲಾಲಸಾಬ್ ಚಳ್ಳಿಗಿಡದ ಆಶಿಫ್ ಚಳ್ಳಿಗಿಡದ ಜಾಫರ್ ರೂಡಗಿ ಅಲಿ ಹುಬ್ಬಳ್ಳಿ ಮುಂತಾದವರು ಉಪಸ್ಥಿತರಿದ್ದರು.
ವರದಿ : ಉಸ್ಮಾನ ಬಾಗವಾನ