ವಿಜಯನಗರ ಜಿಲ್ಲೆಯ ಕೂಡ್ಲಿಗಿ ಪಟ್ಟಣದಲ್ಲಿ ಆರೋಗ್ಯ ಇಲಾಖಾ ಸಿಬ್ಬಂದಿಯಿಂದ ಆರೋಗ್ಯ ಜಾಗ್ರತೆ ಅಭಿಯಾನ ಜರುಗಿತು.ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಕಾರ್ಯಕರ್ತರು ಮನೆ ಮನೆಗೆ ತೆರಳಿ ಆರೋಗ್ಯ ತಪಾಸಣೆ ಮಾಡಿದರು ಮತ್ತು ವೈಯಕ್ತಿಕ ಸ್ವಚ್ಚತೆ ಮನೆಯ ಒಳಗೆ ಹೊರಗಡೆ ಸುತ್ತ ಮುತ್ತ ಹಾಗೂ ನೆರ ಹೊರೆಯಲ್ಲೆಡೆಯಲ್ಲಿ, ಪರಿಸರದಲ್ಲಿ ನೈರ್ಮಲ್ಯತೆ ಕಾಪಾಡಿಕೊಳ್ಳುವುದರ ಕುರಿತು ಜಾಗ್ರತೆ ಮೂಡಿಸಿದರು.ಮಾನಸಿಕ ಧೈಹಿಕ ನ್ಯೂನತೆ ಯಾವುದೇ ರೀತಿಯಲ್ಲಿ ಅನಾರೋಗ್ಯಕ್ಕೆ ತುತ್ತಾದವರಿದ್ದಲ್ಲಿ, ಡ್ಯಂಗ್ಯೂ ಮಲೇರಿಯಾ ಟೈಫಾಯ್ಡ್ ಜ್ವರಗಳಂತಹ ಅನಾರೋಗ್ಯಗಳಿಂದ ಬಳಲುತಿದ್ದಲ್ಲಿ ಅಥವಾ ಅಂತಹ ಸೂಚನೆಗಳೊಂದಿಗೆ ಭಾದೆ ಪಡುತ್ತಿದ್ದವರ ಕುರಿತು, ವಿಚಾರಿಸಿ ಅಗತ್ಯ ಮಾಹಿತಿ ಸಂಗ್ರಹಿಸಿದರು ಮತ್ತು ಆರೊಗ್ಯ ತಪಾಸಣೆ ಮಾಡಿದರು. ಪಟ್ಟಣದ ನಿಯೋಜಿತ ವಲಯದಲ್ಲಿನ ಮನೆ ಮನೆಗಳಿಗೆ ತೆರಳಿ, ಕುಟುಂಬದ ಪ್ರತಿಯೊಬ್ಬರ ಆರೋಗ್ಯ ಕುರಿತು ಯೋಗ ಕ್ಷೇಮ ವಿಚಾರಿಸಿ ಅಗತ್ಯ ಮಾಹಿತಿ ಸಂಗ್ರಹಿಸಿದರು. ಅಂತಯೇ ಪಟ್ಟಣದ ಶ್ರೀಕೊತ್ತಲಾಂಜನೇಯ ದೇವಸ್ಥಾನ ಹಾಗೂ ಗ್ರಾಮದೇವತೆ ಶ್ರೀಊರಮ್ಮ ದೇವಿ ದೇವಸ್ಥಾನದ ಸುತ್ತ ಮುತ್ತ ತಿಮ್ಮಲಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ(PHCO)ಸುನಿತ ರವರು, ತಮ್ಮ ಸಹಾಯಕರೊಡಗೂಡಗೂಡಿ. ಮನೆ ಮನೆಗೆ ತೆರಳಿ ಆರೋಗ್ಯ ತಪಾಸಣೆ ಮಾಡಿದರು. ಕುಟುಂಬದ ಪ್ರತಿ ಸದಸ್ಯರ ಕುರಿತು ಮಾಹಿತಿ ಸಂಗ್ರಹಿಸಿದರು, ಅರೋಗ್ಯ ಜಾಗ್ರತೆ ಕುರಿತು ಮಾಹಿತಿ ನೀಡಿ ವೈಯಕ್ತಿಕ ಸ್ವಚ್ಛತೆ ಹೊಂದುವ ಬಗ್ಗೆ ಮತ್ತು ಮನೆ ಒಳ ಹೊರಗೂ ಸ್ವಚ್ಚತೆ ನಿರ್ವಹಿಸುವಂತೆ ಸೂಚಿಸಿದರು, ಪರಿಸರದಲ್ಲಿ ನೈರ್ಮಲ್ಯತೆ ಕಾಪಾಡಿಕೊಳ್ಳುವಂತೆ ಪ್ರತಿಯೊಬ್ಬರಲ್ಲಿ ತಿಳುವಳಿಕೆ ಮೂಡಿಸಿದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.