ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಆಗೋಲಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ವಾರ್ಷಿಕ ಸಾಮಾನ್ಯ ಸಭೆಯನ್ನು ಜರುಗಿಸಲಾಯಿತು. ರಾ.ಬ.ಕೋ.ವಿ.ಜಿಲ್ಲೆ ಹಾಲು ಒಕ್ಕೂಟದ ಕೊಪ್ಪಳ ಜಿಲ್ಲಾ ವ್ಯವಸ್ಥಾಪಕರಾದ ಡಾಕ್ಟರ್ ಗಂಗಾಧರ್ ಇವರ ನೇತೃತ್ವದಲ್ಲಿ ದೀಪ ಬೆಳಗಿಸುವ ಮೂಲಕ ಸಾಮಾನ್ಯ ಸಭೆಯನ್ನು, ಸಂಘದ ಕಾರ್ಯದರ್ಶಿಯಾದ ಬಾಲಪ್ಪ ಡ್ಯಾಗಿ ಇವರು 2023-24ನೇಯ ಸಂಘದ ಲೆಕ್ಕ ಪರಿಶೋಧಯನ್ನು ಸಂಘದ ಆಡಳಿತ ಮಂಡಳಿ, ಸಂಘದ ಸರ್ವ ಸದ್ಯಸ್ಯರಿಗೆ,ಸಭೆಯಲ್ಲಿ ಮಂಡಿಸಿ ಸಭೆಯನ್ನು ನೆರವೇರಿಸಿದರು. ನಂತರ ಸಂಘದ ಸಮಾಲೋಚಕರಾದ ಎ.ನಾರಾಯಣ ಇವರು ಮಾತನಾಡಿ ಸಂಘವು ರೈತರ ಒಂದು ಸಮೂಹದ ಮನೆ ಇದ್ದಂತೆ, ಸಂಘದಲ್ಲಿ ಲಾಭ ಅಥವಾ ನಷ್ಟ ಸೇರಿದಂತೆ, ಸಂಘಕ್ಕೆ ಬಂದಂತ ಸೌಲಭ್ಯಗಳನ್ನು ಸುಲಭವಾಗಿ ಪಡೆದುಕೊಳ್ಳಬಹುದು, ರೈತರಿಗೆ ಒಕ್ಕೂಟದಿಂದ, ರಾಸುಗಳ ಜೀವ ವಿಮೆ, ಮ್ಯಾಟುಗಳು, ಹಾಲು ಕೆರೆಯುವ ಯಂತ್ರ, ಆಕಸ್ಮಿಕವಾಗಿ ರೈತರು ಮರಣವೆಂದರೆ ರೈತರಿಗೆ ಒಕ್ಕೂಟದಿಂದ 20,000ಗಳನ್ನು ಸಹಾಯಧನವಾಗಿ ಕೊಡಲಾಗುವುದು, ಒಕ್ಕೂಟದಿಂದ ವೈದ್ಯರಿಂದ ಪಶು ಚಿಕಿತ್ಸೆ ನೀಡಲಾಗುವುದು, ಸಂಘದಲ್ಲಿ ಲಾಬಂಸ ಹೆಚ್ಚಾದರೆ, ಶಿಕ್ಷಣ ನಿಧಿ, ರೈತರ ಸೇವಾ ಟ್ರಸ್ಟ್, ಸಂಘದ ಸಿಬ್ಬಂದಿಯವರಿಗೆ ಜೀವವಿಮೆ, ಇತರೆ ಸಂಘದ ಲಾಭ ಮತ್ತು ನಷ್ಟ, ಸಂಘದ ಸಿಬ್ಬಂದಿಯವರಿಗೆ, ವೇತನ ಹಂಚಿಕೆ ಮಾಡುವ ಮೂಲಕ ರೈತರಿಗೆ ಲಾಭಾಂಶವನ್ನು ಸಂಘ ನೀಡುತ್ತದೆ ಎಂದರು.ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಅಂಬರೀಶ ಕಲ್ಮಂಗಿ, ಉಪಾಧ್ಯಕ್ಷರಾದ ಮುತ್ತಣ್ಣ ಉಪ್ಪಾರ್,, ನಿರ್ದೇಶಕರುಗಳಾದ ರಾಮಣ್ಣ ಜಾಲಿಹಾಳ್, ಹನುಮಂತ ಡ್ಯಾಗಿ,ಶ್ರೀ ರಾಮಣ್ಣ ಮನ್ನಾಪೂರ, ರಾಮಣ್ಣ ಕೆಂಗೇರಿ, ವೀರೇಶ ಕೆಂಗೇರಿ,ಶ್ರೀ ಶರಣಪ್ಪ ಉಚ್ಚಲಕುಂಟಿ , ಶರಣಪ್ಪ ಉಪ್ಪಾರ್, ಶ್ರೀ ಪ್ರಭುದೇವ ಹೇರೂರು,ಶ್ರೀಮತಿ ಲಕ್ಷ್ಮವ್ವ ಬೊಮ್ಮಸಾಗರ, ಶ್ರೀಮತಿ ಈರಮ್ಮ ಗೋಷಿ , ಶ್ರೀಮತಿ ಬಾಲಮ್ಮ,ಸಂಘದ ಕಾರ್ಯದರ್ಶಿಯಾದ ಬಾಲಪ್ಪ ಡ್ಯಗಿ, ಸಹಾಯಕರಾದ, ಎಲ್ಲಪ್ಪ ಗೋಸಿ ಗ್ರಾಮದ ಗುರುಹಿರಿಯರು,ಸಂಘದ ಸರ್ವ ಸದಸ್ಯರು ಭಾಗಿಯಾಗಿದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.