ಯಾದಗಿರಿ/ವಡಗೇರಾ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ರಾಜ್ಯದ ಪ್ರಯಾಣಿಕರಿಗೆ ಉತ್ತಮ ಸೇವೆ ಒಗಿಸಲು ಮತ್ತಷ್ಟು ಯೋಜನೆಗಳನ್ನು ನೀಡುತ್ತಿದೆ. ಹಲವು ಮಾರ್ಗಗಳಲ್ಲಿ ತನ್ನ ಬಸ್‌ಗಳ ವ್ಯವಸ್ಥೆಯನ್ನು ವ್ಯಾಪಿಸುತ್ತಿದೆ. ಸದ್ಯ ವಡಗೇರಾ ದಿಂದ ಕಲಬುರಗಿಗೆ ವಿಶೆಷವಾಗಿ ರಾಜಹಂಸ ಬಸ್‌ನ್ನು ಬಿಡುಗಡೆ ಮಾಡಿದೆ.
ಪ್ರಯಾಣಿಕರ ಬಹು ದಿನಗಳ ಬೇಡಿಕೆಯಂತೆ ತಾಲೂಕ ಕೇಂದ್ರದಿಂದ ಯಾದಗಿರಿ ಮಾರ್ಗವಾಗಿ ಕಲಬುರಗಿಗೆ ನೂತನ ಬಸ್‌ಗೆ ಚಾಲನೆ ನೀಡಲಾಯಿತು.
ಅಗಸಿ ಹತ್ತಿರದ ಬಸ್ ನಿಲ್ದಾಣದಲ್ಲಿ ದಿ-26-8-2024 ರ ಸೋಮವಾರದಂದು ವಡಗೇರಾ-ಯಾದಗಿರಿ-ಕಲಬುರಗಿ ಬಸ್‌ಗೆ ಗ್ರಾಮಸ್ಥರು ಪೂಜೆ ನೆರವೇರಿಸುವ ಮೂಲಕ ನೂತನ ಬಸ್ ಗೆ ಚಾಲನೆ ನೀಡಿದರು.
ಬಸ್ ಮೇಲ್ವಿಚಾರಕರು ಪ್ರಾಸ್ತಾವಿಕವಾಗಿ ಮಾತನಾಡಿ ಈ ಬಸ್ ಬೆಳಿಗ್ಗೆ 7.30 ಗಂಟೆಗೆ ವಡಗೇರಾ ಬಸ್ ನಿಲ್ದಾಣದಿಂದ ಹೊರಡುವುದು ಮತ್ತು ಟಿಕೆಟ್ ದರ 102 ರೂಪಾಯಿ ಇರಲಿದೆ.ಈ ಸಾರಿಗೆ ಸೇವೆಯನ್ನು ಸಾರ್ವಜನಿಕ ಪ್ರಯಾಣಿಕರು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ನಂತರ ಮಾತನಾಡಿದ ಪತ್ರಕರ್ತರಾದ ರಘುಪತಿ ನಾಟೇಕಾರರವರು ವಡಗೇರಾ ತಾಲೂಕ ಕೇಂದ್ರದಿಂದ ಕಲ್ಬುರ್ಗಿಗೆ ತೆರಳಲು ಅನುಕೂಲ ಮಾಡಿರುವ ಮಾನ್ಯ ಕೆಕೆ ಆರ್ ಟಿಸಿ ಮ್ಯಾನೆಜಿಂಗ್ ಡೈರೆಕ್ಟರ್ ರಾದ ರಾಚಪ್ಪ ಸರ್ ಹಾಗು ಯಾದಗಿರಿ ಡಿಟಿಓ ರವರಿಗೆ ವಡಗೇರಾ ತಾಲೂಕಿನ ನಾಗರಿಕರ ಪರವಾಗಿ ಧನ್ಯವಾದಗಳನ್ನು ತಿಳಿಸಿ ವಡಗೇರಾ ತಾಲೂಕ ಕೇಂದ್ರದಿಂದ ಆಸ್ಪತ್ರೆ ತೆರಳುವ ರೋಗಿಗಳಿಗೆ ಹಾಗೂ ಸರ್ಕಾರಿ ಕೆಲಸಕ್ಕೆ ತೆರಳುವ ಸಾರ್ವಜನಿಕರಿಗೆ ತುಂಬಾ ಅನುಕೂಲವಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಈಶಪ್ಪ ಸ್ವಾಮಿ, ಶರಣಯ್ಯಸ್ವಾಮಿ, ಬಸವರಾಜ (ಬುಕ್ ಸ್ಟಾಲ್),ಸಾಬಯ್ಯ ಗುತ್ತೇದಾರ, ಶರಣು ಕುರಿ, ಮಾರ್ಕಂಡೇಯ (ಪಂಪ್ ಆಪರೇಟರ್), ದೇವು ಜೋಗಿ, ಶ್ರೀನಿವಾಸ ಮುಸ್ತಾಜೀರ್, ಸಂಗಣ್ಣ ಸಾಹುಕಾರ, ಸೈಯದ್ ಕುರೇಶಿ, ಸೂಗರಡ್ಡಿಗೌಡ, ರಾಜು ಪೆಂಟರ್, ಚಂದಪ್ಪ, ದೇವಪ್ಪ, ಚಾಲಕರಾದ ಶರಣು ಮಡಿವಾಳ ಹಾಗೂ ಇನ್ನಿತರರು ಇದ್ದರು.
ವರದಿ-ಶಿವರಾಜ ಸಾಹುಕಾರ