ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ 14 ನೇ ವಾರ್ಡ ಡಾ॥ಬಿ.ಆರ್.ಅಂಬೇಡ್ಕರ್ ನಗರದಲ್ಲಿ, ಶ್ರಾವಣ ಮಾಸದ ಕಡೇ ಮಂಗಳವಾರದಂದು ಶ್ರೀ ಮದಗದಾಂಬೆ ದೇವಿಯನ್ನು ವಿಧಿವತ್ತಾಗಿ, ಗಂಗೆ ದರ್ಶನ ಮಾಡಿಸುವ ಧಾರ್ಮಿಕ ಕಾರ್ಯಕ್ರಮ ಜರುಗಿಸಲಾಗಿದೆ. ಅಂಬೇಡ್ಕರ ನಗರದಲ್ಲಿನ ದೇವಸ್ಥಾನದ ಶ್ರೀಮದಗಾಂಭಿಕ ದೇವಿಯನ್ನು ಧಾರ್ಮಿಕ ನಿಯಮಾನುಸಾರ ಹೊಳೆಗೆ ಹೊರಡಿಸುವುದು, ಪುರಾತನ ಕಾಲದಿಂದಲೂ ನಡೆದು ಕೊಂಡು ಬಂದಿರುವ ಧಾರ್ಮಿಕ ಸಂಪ್ರದಾಯವಾಗಿದೆ. ಅಂತೆಯೇ ಡಾ॥ ಬಿ.ಆರ್. ಅಂಬೇಡ್ಕರ್ ನಗರದಲ್ಲಿ, ಆ27ರಂದು ಮಂಗಳವಾರದಂದು ಅಲ್ಲಿಯೇ ನೆಲೆಸಿರುವ ಶ್ರೀಮದಾಂಭಿಕ ದೇವಿಯನ್ನು, ಹೊಳೆಗೆ ಕರೆದೊಯ್ಯುವ ಧಾರ್ಮಿಕ ನೆಲೆಗಟ್ಟಿನ ಉತ್ಸವವಾಗಿದೆ. ಗಂಗೆ ದರ್ಶನ ಮಾಡಿಸುವ ಕಾರ್ಯಕ್ರಮವನ್ನು, ಪ್ರತಿ ವರ್ಷದಂತೆ ಶ್ರಾವಣ ಕಡೇ ಮಂಗಳವಾರದಂದು ಸಾವಿರಾರು ಭಕ್ತಾದಿಗಳ ಸಹಭಾಗಿತ್ವದಲ್ಲಿ ಪಟ್ಟದ ಪೂಜಾರಿ ಬಸವರಾಜ ಹಾಗೂ ಪೂಜಾರಿ ಅಂಜಿನಪ್ಪ ರವರ ಪೌರೋಹಿತ್ವದಲ್ಲಿ ಜರುಗಿತು.ಶ್ರೀಮದಗದಾಂಬೆಯ ಗಂಗೆ ದರ್ಶನ ಉತ್ಸವವು, ಧಾರ್ಮಿಕ ನಿಯಮಾನುಸಾರ ಶ್ರದ್ಧೆ ಭಕ್ತಿ ನಿಷ್ಠೆಯಿಂದ ನಡೆಸಲಾಯಿತು. ಗಂಗೆ ದರ್ಶನದಂದು ಬೆಳಿಗ್ಗೆಯಿಂದ ರಾತ್ರಿ 10:30 ಗಂಟೆಯವರೆಗೂ, ದೇವಿಯ ಧಾರ್ಮಿಕ ಕಾರ್ಯಕ್ರಮಗಳು ವಿಧಿ ವಿದಾನದಂತೆ ನಡೆದವು.
ಮಳೆಗಾಲದಲ್ಲಿ ಸಕಾಲಕ್ಕೆ ಮಳೆ ಇಳೆಗೆ ಬರಲೆಂದು, ಹಾಗೂ ಕೆರೆಗಳು ತುಂಬಿ ಕೋಡಿ ಹರಿಯಲೆಂದು ಆಶೀರ್ವಾದ ಕೋರುವ ಸದುದ್ದೇಶದಿಂದ. ದೈವಸ್ಥರು ಶ್ರೀಮದಗದಾಂಬೆ ದೇವಿಯನ್ನು, ವಿಧಿವಿದಾನದಂತೆ ಹೊಳೆಗೆ ಹೊರಡಿಸಿ ಗಂಗೆ ದರ್ಶನ ಮಾಡಿಸುವುದು ವಾಡಿಕೆಯಾಗಿದೆ. ಇಂತಹ ಸಂದರ್ಭದಲ್ಲಿ ಮಳೆ ಬಂದೇ ಬರುತ್ತದೆ, ದೇವಿಯಲ್ಲಿ ಬೇಡಿದ ಬೇಡಿಕೆ ಕೂಡಲೇ ಈಡೇರಿತು ಪೂಜಾ ಸಂದರ್ಭದಲ್ಲಿಯೇ ಧರೆಗೆ ಮಳೆ ಬಂದೇ ಬರುತ್ತದೆ, ಆ ಭರವಸೆ ಯಾವತ್ತಿಗೂ ಹುಸಿಯಾಗುವುದಿಲ್ಲ ಎಂಬ ನಂಬಿಕೆ ಭಕ್ತರಲ್ಲಿದೆ. ಮಂಗಳವಾರದಂದು ಸಂಜೆ ದೇವಿ ಉತ್ಸವ ಆರಂಭಗೊಂಡಾಗಿನಿಂದ, ಮಳೆ ಸುರಿಯಲು ಪ್ರಾರಂಭಿಸಿದೆ. ಮಧ್ಯ ರಾತ್ರಿಯವರೆಗೂ ಬೆಂಬಿಡದೇ ಮಳೆ ಧಾರಾಕಾರವಾಗಿ ಸುರಿದಿದ್ದು, ಈ ಮೂಲಕ ಭಕ್ತರಲ್ಲಿನ ನಂಬಿಕೆ ಮತ್ತಷ್ಟು ಪುಷ್ಠಿ ನೀಡಿದ ಸನ್ನಿವೇಶ ಜರುಗಿತು. ಈ ಮಹಾದಾಶಯದಂತೆ ಆಯಗಾರರ ನಿರ್ಧೇಶನ ಹಾಗೂ ನೇತೃತ್ವದೊಂದಿಗೆ, ನೂರಾರು ಭಕ್ತರು ದೇವಿಯನ್ನು ಹೊಳೆಗೆ ಹೊರಡಿಸುವ ಕಾರ್ಯ ನೆರವೇರಿಸಲಾಯಿತು.
ಕೂಡ್ಲಿಗಿ ಪಟ್ಟಣದ ಪ್ರಮುಖ ನಾಗರಿಕರು ಹಾಗೂ ಎಲ್ಲಾ ಸಮುದಾಯಗಳ ಆಸ್ಥಿಕರು, ಸಾಂಪ್ರದಾಯಿಕ ಧಾರ್ಮಿಕ ಶ್ರದ್ದಾಳುಗಳು. ದೇವಸ್ಥಾನದ ಭಕ್ತ ಮಂಡಳಿ ಮತ್ತು ಆಯಗಾರರು ಜನಪ್ರತಿನಿಧಿಗಳು ಮುಖಂಡರು ಹಿರಿಯರು, ಮಹಿಳೆಯರು ಮಕ್ಕಳು ಯುವಕರು ವೃದ್ಧರಾಧಿಯಾಗಿ ಸರ್ವರು ಸೌಹಾರ್ಧತೆಯಿಂದ ಧಾರ್ಮಿಕ ಕಾರ್ಯ ನೆರವೇರಿಸಿ ಯಶಸ್ವಿಗೊಳಿಸಿದರು. ಹಲಗೆ ವಾದ್ಯ ಸೇರಿದಂತೆ ವಿವಿದ ಸಾಂಪ್ರದಾಯಿಕ ವಾದ್ಯಗಳು ಮೊಳಗಿದವು, ವಾದ್ಯ ಕಲಾವಿದರು ತಮ್ಮ ಕಲೆಯನ್ನು ಉತ್ವವದಲ್ಲಿ ಉತ್ಸುಕತೆಯಿಂದ ಅನಾವರಣಗೊಳಿಸಿದರು.
