ತುಮಕೂರು ಜಿಲ್ಲೆಯ ಪಾವಗಡ ಪಟ್ಟಣದ ಪುರಸಭೆಗೆ ಕಳೆದ 14 ತಿಂಗಳುಗಳಿಂದ ಖಾಲಿಯಾಗಿದ್ದ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸ್ಥಾನಕ್ಕೆ ಇಂದು ಚುನಾವಣೆ ನಡೆದಿದ್ದು ಚುನಾವಣೆ ಆಯೋಗ ಮೀಸಲಾತಿಯನ್ನು ಪ್ರಕಟಿಸಿತ್ತು. ಅಧ್ಯಕ್ಷರಾಗಿ ಪಿ.ಹೆಚ್.ರಾಜೇಶ್ ಮತ್ತು ಉಪಾಧ್ಯಕ್ಷರಾಗಿ ಗೀತಾ ಹನುಮಂತರಾಯಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಎ.ಸಿ.ಗೋಟುರು ಶಿವಪ್ಪ ಘೋಷಿಸಿದ್ದಾರೆ.
ಸಾಮಾನ್ಯ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆ ಮೀಸಲಾಗಿದ್ದು 23 ಸದಸ್ಯರಿದರುವ ಪುರಸಭೆಯಲ್ಲಿ ಕಾಂಗ್ರೇಸ್ 21, ಜೆ.ಡಿಎಸ್-1, ಪಕ್ಷೇತರ-1 ಸದಸ್ಯರಿದ್ದಾರೆ.
ದಿ-೨೮-೮-೨೦೨೪ ರಂದು ಪುರಸಭೆಯಲ್ಲಿ ಚುನಾವಣೆ ನಡೆದಿದ್ದು ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೇಸ್ ಪಕ್ಷದ ಪಿ.ಹೆಚ್. ರಾಜೇಶ್ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಗೀತಾಹನುಮಂತರಾಯಪ್ಪ ನಾಮಪತ್ರ ಸಲ್ಲಿಸಿದರು.
ನೂತನ ಅಧ್ಯಕ್ಷರಾಗಿ 14 ನೇ ವಾರ್ಡಿನ ಪಿ,ಹೆಚ್ ರಾಜೇಶ್ ಹಾಗೂ ಉಪಾಧ್ಯಕ್ಷರಾಗಿ 3ನೇ ವಾರ್ಡಿನ ಗೀತಾ ಹನುಮಂತರಾಯಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಈ ವೇಳೆ ಶಾಸಕ ಹೆಚ್.ವಿ. ವೆಂಕಟೇಶ್ ಮಾತನಾಡಿ ರಾಜೇಶ್ ಪಕ್ಷದ ಪ್ರಮಾಣಿಕ ವ್ಯಕ್ತಿ,ಪುರಸಭೆ ಸದಸ್ಯನಾಗಿ ಮೂರು ಭಾರಿ ಆಯ್ಕೆಯಾಗಿದ್ದಾರೆ.ಈ ಭಾರಿ ಸಾಮಾನ್ಯ ವರ್ಗದಲ್ಲೇ ಗೆದ್ದಿರುವುದರಿಂದ ಅವಕಾಶ ಮಾಡಿಕೊಡಲಾಗಿದೆ.ಪಟ್ಟಣದಲ್ಲಿನ ಸಮಸ್ಯಗಳನ್ನು ಎಲ್ಲಾ ಸದಸ್ಯರನ್ನು ವಿಶ್ವಾಸಕ್ಕೆ ಪಡೆದುಕೊಂಡು ಸರಿಪಡಿಸುವ ನಿಟ್ಟಿನಲ್ಲಿ ಮುನ್ನಡೆಬೇಕಿದೆ ಎಂದರು.
ನೂತನ ಅಧ್ಯಕ್ಷ ಪಿ.ಹೆಚ್. ರಾಜೇಶ್ ಮಾತನಾಡಿ ನಾನು ಮೂರು ಭಾರಿ ಪುರಸಭಾ ಸದಸ್ಯನಾಗಿ, ಈಗ ಅಧ್ಯಕ್ಷನಾಗಿ ಆಯ್ಕೆಯಾಗಲು ಸಹಕರಿಸಿದ ಮಾಜಿ ಸಚಿವ ವೆಂಕಟರವಣಪ್ಪ ಮತ್ತು ಶಾಸಕ ಹೆಚ್,ವಿ ವೆಂಕಟೇಶ್ ಹಾಗೂ ವಾರ್ಡಿನ ಮತದಾರರಿಗೂ ಧನ್ಯವಾದ ಸಲ್ಲಿಸುತ್ತೇನೆ. ಕಾಂಗ್ರೇಸ್ ಪಕ್ಷದ ಕಟ್ಟಾಳು ಅವರ ಮಾರ್ಗದರ್ಶನದಲ್ಲಿ ವಾರ್ಡಗಳ ಚರಮಡಿ, ನೀರು ರಸ್ತೆ ಸಮಸ್ಯೆಗಳು ಹಾಗೂ ಸರ್ಕಾರಿ ಬಸ್ ನಿಲ್ದಾಣ ಮಾಡುವ ಕನಸಿದೆ.ಎಲ್ಲಾ ಸದಸ್ಯರ ಸಹಕಾರದಿಂದ ಪುರಸಭೆಯಲ್ಲಿನ ಸಮಸ್ಯೆಗಳನ್ನು ಬಗೆಹರಿಸುತ್ತೇನೆಂದರು.
ಚುನಾವಣೆ ಪ್ರಕ್ರಿಯೇ ನಡೆದ ನಂತರ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರು ಈ ವೇಳೆ ನೂತನ ಪುರಸಭಾ ಕಟ್ಟಡವನ್ನು ಉದ್ಘಾಟಿಸಿದರು.
ಪಟ್ಟಣದ ಕೋಟೆ ಆಂಜನೇಯಸ್ವಾಮಿ ಮುಖ್ಯ ರಸ್ತೆಯಲ್ಲಿ ರಾಜೇಶ್ ಅಭಿಮಾನಿಗಳಿಂದ ಅದ್ದೂರಿಯಾಗಿ ಮೆರವಣಿಗೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಪುರಸಭಾ ಮುಖ್ಯಾಧಿಕಾರಿ ಜಾಫರ್ ಷರೀಫ,ಆರೋಗ್ಯಾಧಿಕಾರಿ ಷಂಷುದ್ದಾ ಹ, ಕಾಂಗ್ರೇಸ್ ಪಕ್ಷದ ಮುಖಂಡರಾದ ಶಂಕರ ರೆಡ್ಡಿ, ಮಾಜಿ ಪುರಸಭಾ ಆಧ್ಯಕ್ಷ ಗುರ್ರಪ್ಪ, ನಾನಿ, ಕೋಳಿ ಬಾಲಾಜಿ, ಜಿ.ನರಸಿಮಹರೆಡ್ಡಿ, ಸೇವಾ ನಾಯ್ಕ, ಮಾಜಿ ಪುರಸಭಾ ಅಧ್ಯಕ್ಷ ಅನಿಲ್, ಕಾವಲಗೆರೆ ಮೂರ್ತಿ, ಪುರಸಬೆ ಸದಸ್ಯರಾದ ರವಿ, ಬಾಲಸುಬ್ರಮಣ್ಯ,ವಿಜಯ್ ಕುಮಾರ್, ಗೋರ್ತಿ ನಾಗರಾಜು, ಇಮ್ರಾನ್ ಇತರರು ಇದ್ದರು.
ವರದಿ:ಕೆ. ಮಾರುತಿ ಮುರಳಿ