ಹನೂರು ಪಟ್ಟಣ ಪಂಚಾಯ್ತಿ 2ನೇ ಅವಧಿಗೆ ನೂತನ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಮಮ್ತಾಜ್ ಬಾನು ಉಪಾಧ್ಯಕ್ಷರಾಗಿ ಆನಂದ್ ಕುಮಾರ್ ಆಯ್ಕೆ ನಡೆಯಿತು.
ಚಾಮರಾಜನಗರ ಜಿಲ್ಲೆಯ ಹನೂರಿನ ಪಟ್ಟಣ ಪಂಚಾಯ್ತಿ ಕಛೇರಿ ಸಭಾಂಗಣದಲ್ಲಿ ನಡೆದ ಅಧ್ಯಕ್ಷರು ಉಪಾಧ್ಯಕ್ಷರ ಆಯ್ಕೆ ಚುನಾವಣೆಗೆ ಜೆಡಿಎಸ್ ಬೆಂಬಲಿತ ಅಭ್ಯರ್ಥಿಯಾಗಿ ಒಂದನೇ ವಾರ್ಡಿನ ಸದಸ್ಯೆ ಮಮ್ತಾಜ್ ಭಾನು ಅಧ್ಯಕ್ಷರ ಗಾದೆಗೆ ಉಮೇಧುವಾರಿಕೆ ಸಲ್ಲಿಸಿದರೆ ಉಪಾಧ್ಯಕ್ಷರ ಸ್ಥಾನಕ್ಕೆ 8 ವಾರ್ಡಿನ ಆನಂದ್ ಕುಮಾರ್ ಎಂಬುವವರು ಉಮೇಧುವಾರಿಕೆ ಸಲ್ಲಿಸಿದರು.
ಹನೂರು ಪಂಚಾಯ್ತಿಯಲ್ಲಿ ಜೆಡಿಎಸ್-06 ಕಾಂಗ್ರೆಸ್-05 ಬಿಜೆಪಿ-01 ಸಂಸದರ ಗೈರಿನಲ್ಲಿ ಶಾಸಕರ ಒಂದು ಮತ ಸೇರಿ ಒಟ್ಟು 13 ಸದಸ್ಯರ ಸಂಖ್ಯಾ ಬಲವಿದ್ದು, ಅಧ್ಯಕ್ಷರ ಸ್ಥಾನ ಬಿಸಿಎ ಮಹಿಳೆ ಉಪಾಧ್ಯಕ್ಷರ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾತಿ ನಿಗಧಿಯಾಗಿತ್ತು.
ಚುನಾವಣೆ ಅಧಿಕಾರಿ ತಹಸೀಲ್ದಾರ್ ಗುರುಪ್ರಸಾದ್ ನಿಗಧಿತ ಕಾಲ ಮಿತಿಯೊಳಗೆ ಚುನಾವಣೆ ಪ್ರಕ್ರಿಯೆ ಕೈಗೊಂಡು ಚುನಾವಣೆ ಕಣದಲ್ಲಿದ್ದ ಮಮ್ತಾಜ್ ಭಾನು ವಿರುದ್ದ ಸ್ಪರ್ಧೆಸಲು ಸ್ಪರ್ಧ ಳುಗಳು ಇಲ್ಲದಿದ್ದರಿಂದ ಚುನಾವಣೆಗೆ ಆಗಮಿಸಿದ ಸರ್ವ ಸದಸ್ಯರ ಒಕ್ಕೊರಳಿನ ತೀರ್ಮಾನದಂತೆ ಅಧ್ಯಕ್ಷರಾಗಿ ಮಮ್ತಾಜ್ ಭಾನು ಆವೀರೋಧ ಆಯ್ಕೆ ಎಂದು ಘೋಷಣೆ ಮಾಡಿದರು.
ಹಾಗೂ ಉಪಾಧ್ಯಕ್ಷರ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿತ್ತು. ಜೆಬಿಎಸ್ ಬೆಂಬಲಿತ 8 ನೇ ವಾರ್ಡಿನ ಸದಸ್ಯ ಆನಂದ್ ಕುಮಾರ್ ಕಾಂಗ್ರೆಸ್ ಬೆಂಬಲಿತ 2ನೇ ಸದಸ್ಯ ಸುದೇಶ್ ನಡುವೆ ಸ್ಪರ್ಧೆ ನಡೆಯಿತು. ಸದಸ್ಯರು ಕೈ ಮೇಲೆ ಎತ್ತುವ ಮೂಲಕ ಜೆಡಿಎಸ್ ಬೆಂಬಲಿತ ಆನಂದಿಗೆ 08 ಮತಗಳು ಕಾಂಗ್ರೆಸ್ನ ಸುದೇಶ್ ಗೆ 05 ಮತಗಳು ಬಿದ್ದಿದ್ದು 03 ಮತಗಳ ಅಂತರದಿಂದ ಪರಾಭವಗೊಂಡಿದ್ದು ಆನಂದ್ ಕುಮಾರ್ ರವರನ್ನು ಉಪಾಧ್ಯಕ್ಷರಾಗಿ ಘೋಷಣೆ ಮಾಡಿದರು. ಇವರಿಗೆ ಶಿರಸ್ತೇದಾರ್ ವಿರೂಪಾಕ್ಷ ವಿಷಯ ನಿರ್ವಾಹಕ ಲೋಕೇಶ್ ಪಂಚಾಯ್ತಿ ಮುಖ್ಯಾಧಿಕಾರಿ ಅಶೋಕ್ ಸಾಥ್ ನೀಡಿದರು.
ಶಾಸಕ ಎಂ.ಆರ್. ಮಂಜುನಾಥ್ ಮಾತನಾಡಿ ಪ.ಪಂ.ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಯ ಗೆಲುವನ್ನು ಪಟ್ಟಣ ಹಾಗೂ ಕ್ಷೇತ್ರದ ಜನತೆಗೆ ಅರ್ಪಿಸುತ್ತೇನೆ. ಜೆಡಿಎಸ್ ಮೊದಲ ಬಾರಿಗೆ ಅಧ್ಯಕ್ಷರು ಉಪಾಧ್ಯಕ್ಷರ ಸ್ಥಾನವನ್ನು ಅಲಂಕರಿಸಿದೆ. ಈ ದಿನವನ್ನು ಸುವರ್ಣ ಅಕ್ಷರದಲ್ಲಿ ಬರೆದಿಡುವಂತಾಗಿದೆ.
ಪ.ಪಂ.ಎಲ್ಲಾ ಸದಸ್ಯರ ವಿಶ್ವಾಸ ಪಡೆದು ಪಟ್ಟಣದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಲಾಗುವುದು. ನಗರಾಭಿವೃದ್ಧಿ ಸಚಿವರು ಎಂ.ಡಿ.ಅವರಿಗೆ ಈಗಾಗಲೇ ಅಭಿವೃದ್ಧಿ ಕಾರ್ಯಗಳಿಗೆ ಮನವಿ ಸಲ್ಲಿಸಲಾಗಿದೆ. ಸ್ಥಳೀಯ ಸಂಪನ್ಮೂಲಗಳನ್ನು ಕ್ರೂಢೀಕರಿಸಿ ಅಭಿವೃದ್ಧಿಗೆ ಆದತ್ಯೆ ನೀಡಲಾಗುವುದು. ಕಾವೇರಿ ಕುಡಿಯುವ ನೀರು ಸ್ವಚ್ಚತೆ ಇ-ಸ್ವತ್ತು ಸಮಸ್ಯೆಯನ್ನು ನಿವಾರಿಸಲಾಗುವುದು. ಇ-ಸ್ವತ್ತು ಅರ್ಜಿದಾರರ ಮನೆ ಬಾಗಿಲಿಗೆ ತಲುಪಿಸುವಂತೆ ಕ್ರಮವಹಿಸಲಾಗುವುದು. ಎಂದರು.
ನೂತನ ಅಧ್ಯಕ್ಷ ಮಮ್ತಾಜ್ ಬಾನು ಮಾತನಾಡಿ ಪಟ್ಟಣದ ಸರ್ವತೋಮುಖ ಅಭಿವೃದ್ಧಿಗೆ ಹೆಚ್ಚಿನ ಹೊತ್ತು ನೀಡುವ ಮೂಲಕ ಎಲ್ಲಾ ವಾರ್ಡ್ ಗಳಿಗೂ ಮೂಲಭೂತ ಸೌಕರ್ಯ ಒದಗಿಸಲು ಸರ್ವ ಸದಸ್ಯರು ಆಡಳಿತ ಮಂಡಳಿ ಸಹಕಾರದೊಂದಿಗೆ ಪ್ರಥಮ ಆದ್ಯತೆ ನೀಡಲಾಗುತ್ತದೆ. ಸಾರ್ವಜನಿಕರ ಯಾವುದೇ ಸಮಸ್ಯೆಗಳಿಗೆ ವಾರ್ಡ್ ಸದಸ್ಯರ ಜೊತೆ ಚರ್ಚಿಸಿ ಸಮಸ್ಯೆ ಇತ್ಯರ್ಥಕ್ಕೆ ಸ್ಪಂಧಿಸುವುದಾಗಿ ತಿಳಿಸಿದರು. ಉಪಾಧ್ಯಕ್ಷ ಆನಂದ್ ಮಾತನಾಡಿದರು.
ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮ:
ಇದೆ ಮೊದಲ ಬಾರಿಗೆ ಜೆಡಿಎಸ್ ಅಧ್ಯಕ್ಷರು ಉಪಾಧ್ಯಕ್ಷರಾಗಿ ಆಯ್ಕೆಯಾದ ಹಿನ್ನಲೆಯಲ್ಲಿ ಬಸ್ ನಿಲ್ದಾಣದಲ್ಲಿ ಜೆಡಿಎಸ್ ಕಾರ್ಯಕರ್ತರು ಮುಖಂಡರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.
ಚುನಾವಣೆ ಹಿನ್ನಲೆಯಲ್ಲಿ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಹಾಗೂ ಹನೂರು ಪೊಲೀಸರು ಬಂದೋಬಸ್ತ್ ವ್ಯವಸ್ಥೆಯನ್ನು ಕಲ್ಪಿಸಿದರು.
ಇದೇ ಸಂದರ್ಭದಲ್ಲಿ ನೂತನ ಅಧ್ಯಕ್ಷೆ ಮುಮ್ತಾಜ್ ಬಾನು ಉಪಾಧ್ಯಕ್ಷ ಆನಂದ್ ಕುಮಾರ್ ಜೆಡಿಎಸ್ ಸದಸ್ಯರುಗಳು ಮಮುಖಂಡರಾದ ರಾಜುಗೌಡ ಮಂಜೇಶ್ ಗೌಡ , ಮಾಜಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಶಿವಮೂರ್ತಿ ವೆಂಕಟೇಶ್,ಅಮೀನ್, ಎಸ್.ಆರ್ ಮಹಾದೇವ್, ಭಸರತ್, ಜವಾದ್ ತಸ್ಲಿಮಾ , ವೆಂಕಟೇಶ್ ,ಮುತ್ತರಾಜಮ್ಮ, ಗೋವಿಂದ್, ಶಿವರಾಮ್,ರೈತ ಜೆಸ್ಸಿಂ ಪಾಷಾ,ಮಂಜೇಶ್ ಗೌಡ , ವೆಂಕಟೇಶ್,ಗೋವಿಂದ ಗುರುಸ್ವಾಮಿ, ಶಿವ ಮೂರ್ತಿ ಕಾರ್ಯಕರ್ತರು ಸಾರ್ವಜನಿಕರು ಉಪಸ್ಥಿತರಿದ್ದರು.
ವರದಿ: ಉಸ್ಮಾನ್ ಖಾನ್