ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ನಗರದ ಬಂಕಾಪುರ ರಸ್ತೆಯಲ್ಲಿರುವ ಸಂತ ಶಿಶುನಾಳ ಶರೀಫರ ದೇವಸ್ಥಾನದಲ್ಲಿ ಕರ್ನಾಟಕದ ಮಾಜಿ ಮುಖ್ಯಮಂತ್ರಿ ದಿವಂಗತ ರಾಮಕೃಷ್ಣ ಹೆಗಡೆ ಅವರ 98ನೇಯ ಹುಟ್ಟುಹಬ್ಬ ಕಾರ್ಯಕ್ರಮ ಆಚರಿಸಲಾಯಿತು. ಇದೇ ವೇಳೆ ರಾಮಕೃಷ್ಣ ಹೆಗಡೆ ಅವರ ಆದರ್ಶಗಳನ್ನು ಸ್ಮರಿಸಲಾಯಿತು.
ಕಾರ್ಯಕ್ರಮ ವೇಳೆ ಪೌರ ಕಾರ್ಮಿಕರನ್ನು ಸನ್ಮಾನಿಸಲಾಯಿತು.ಮಾಜಿ ಶಾಸಕ ರಾದ ವಿ ಎಸ್ ಪಾಟೀಲ್, ಹಿರಿಯ ಮುಖಂಡ ಚಿದಾನಂದ ಹರಿಜನ, ಬಸವರಾಜ್ ಓಶೀಮಠ ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜ್ಞಾನದೇವ್ ಗುಡಿಯಾಳ,ದಯಾನಂದ ಕಳಸಾಪುರ ಸೇರಿದಂತೆ ಅನೇಕ ಮುಖಂಡರು ಹಾಜರಿದ್ದರು.
