ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಬನಹಟ್ಟಿ ನಗರದಲ್ಲಿ ಶಾಲಾ ಶಿಕ್ಷಣ ಹಾಗೂ ಸಾಕ್ಷರತೆ ಇಲಾಖೆ ಬಾಗಲಕೋಟೆ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳು ಕಾರ್ಯಾಲಯ ಜಮಖಂಡಿ ಹಾಗೂ ಉರ್ದು ಸಮೂಹ ಸಂಪನ್ಮೂಲ ಕೇಂದ್ರ ರಬಕವಿ ಇವರ ಜಂಟಿ ಸಹಯೋಗದೊಂದಿಗೆ ನಗರದ ಉರ್ದು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉರ್ದು ಸಮೂಹ ಸಂಪನ್ಮೂಲ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮ ಅತಿ ಅದ್ದೂರಿಯಾಗಿ ಜರುಗಿತು.
ಈ ಸಂದರ್ಭದಲ್ಲಿ ಮಾತನಾಡಿದ ಎಂ ಎಂ ಸಿಂಧೂರ್ ವಿಶ್ರಾಂತ ಸಹ ನಿರ್ದೇಶಕರು ಸಿಟಿಇ ಬೆಳಗಾವಿ, ಇವರು ಈ ಕಾರ್ಯಕ್ರಮದಲ್ಲಿ ಎಲ್ಲಾ ಶಿಕ್ಷಕರು ಶಿಕ್ಷಕಿಯರು ಈ ನಡೆಯುತ್ತಿದ್ದ ಕಾರ್ಯಕ್ರಮವನ್ನು ನೋಡಿದ ನಂತರ ಮುಂದಿನ ವರ್ಷ ನಮ್ಮ ಶಾಲೆಗಳಲ್ಲಿ ಈ ಕಾರ್ಯಕ್ರಮಕ್ಕಿಂತ ಹೆಚ್ಚು ಚೆನ್ನಾಗಿ ಮಾಡುತ್ತೇವೆ ಎಂದು ಈ ಕಾರ್ಯಕ್ರಮದ ಮುಖಾಂತರ ನೀವು ಕಲಿಯಬೇಕು ಮಕ್ಕಳಿಗೆ ಕೂಡಾ ಪ್ರತಿಭೆಯನ್ನು ತೋರಿಸಲು ಅವಕಾಶ ಕೊಡಬೇಕು ಕೇವಲ ಓದುವುದು ಬರೆಯುವುದು ಅಷ್ಟೇ ಮುಖ್ಯವಲ್ಲ, ಜೊತೆಗೆ ಮಕ್ಕಳ ಪ್ರತಿಭೆಯನ್ನು ಬೆಳೆಸಬೇಕಾದರೆ ಅದಕ್ಕೆ ಹೆಚ್ಚಿನ ಒತ್ತು ಕೊಡಬೇಕು ಜೊತೆಗೆ ನಿಮ್ಮ ಹೆಚ್ಚಿನ ಶ್ರಮವನ್ನು ಕೂಡಾ ಹಾಕಬೇಕು ಒಂದು ವೇಳೆ ನಿಮ್ಮ ಕಡೆಯಿಂದ ಶ್ರಮ ಇಲ್ಲದೆ ಹೋದರೆ ಮಕ್ಕಳಿಗೆ ಪ್ರತಿಬೆ ಬೆಳೆಯಲಿಕ್ಕೆ ಆಗುವುದಿಲ್ಲ ಹಾಗೂ ಪಾಲಕರೂ ಕೂಡಾ ಸಹಕಾರ ನೀಡಬೇಕು ಎಂದು ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ನಗರದ ಖ್ಯಾತ ಉದ್ಯಮಿ ಅಂಜುಮನ್ ಅಧ್ಯಕ್ಷ ಬುಡನ್ ಜಮಾದಾರ್ ಅಲ್ಪಸಂಖ್ಯಾತರ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿಯ ಅಧ್ಯಕ್ಷ ಇರ್ಷಾದ್ ಮೋಮಿನ್, ಶಾನೂರ್ ಕೆಮಲಾಪುರ್ ಹಾಗೂ ಶಾಲಾ ಎಸ್‌ಡಿಎಂಸಿ ಅಧ್ಯಕ್ಷರು, ಸದಸ್ಯರು, ಶಿಕ್ಷಕ- ಶಿಕ್ಷಕಿಯರು, ಶಾಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
ವರದಿ :ಮಹಿಬೂಬ್ ಎಂ.ಬಾರಿಗಡ್ಡಿ