ಪಾವಗಡ: ವಿದ್ಯಾರ್ಥಿಗಳಲ್ಲಿರುವ ವಿಶೇಷವಾದ ಪ್ರತಿಭೆಗಳನ್ನು ಗುರುತಿಸಿ ಹೊರ ತರಲು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವು ಉಪಯುಕ್ತವಾಗುತ್ತದೆ ಪೋಷಕರು ತಮ್ಮ ಮಕ್ಕಳನ್ನು ಕ್ರೀಡೆ, ಭಾಷಣ, ಚರ್ಚಾ ಹಾಗೂ ವಿವಿಧ ರೀತಿ ಸ್ಪರ್ಧೆಗಳಲ್ಲಿ ಭಾಗವಹಿಸಲು ಪ್ರೋತ್ಸಾಹಿಸಬೇಕೆಂದು ಶಾಲೆಯ ಮುಖ್ಯ ಶಿಕ್ಷಕ ಚಂದ್ರಶೇಖರ ಕೆ.ಎಸ್. ಅಭಿಪ್ರಾಯ ವ್ಯಕ್ತಪಡಿಸಿದರು.
ಮೀನಕುಂಟನಹಳ್ಳಿ ಗ್ರಾಮದಲ್ಲಿ ಶಾಲೆಯ ಆವರಣದಲ್ಲಿ ನಡೆದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಅವರು ಮಾತನಾಡಿದರು.
ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ನಾಗಮಣಿ ಎಂ ಕೆ ನಾರಾಯಣಪ್ಪ ಮಾತನಾಡಿ ವಿದ್ಯಾರ್ಥಿಗಳಿಗೆ ಓದಿನ ಜೊತೆಗೆ ಕ್ರೀಡಾ ಸ್ಪರ್ಧೆಗಳು, ಮನರಂಜನೆ ಮತ್ತು ಮಾನವೀಯ, ನೈತಿಕ ಮೌಲ್ಯಗಳನ್ನು ರೂಡಿಸಿಕೊಳ್ಳಬೇಕೆಂದು ತಿಳಿಸಿದರು.
ಈ ಪ್ರತಿಭಾ ಕಾರಂಜಿಯಲ್ಲಿ ವಿದ್ಯಾರ್ಥಿಗಳ ಜೊತೆ ರಂಗೋಲಿ ಸ್ಪರ್ಧೆ,ನೃತ್ಯ ಪ್ರದರ್ಶನ,ಬೀದಿ ನಾಟಕ, ಗ್ರಾಮದೇವತೆ ವಿವಿಧ ಪ್ರತಿಭೆಗಳಿಗೆ ಬಹುಮಾನವನ್ನು ಕೊಟ್ಟು ಅಭಿನಂದಿಸಿದರು.
ಈ ಕಾರ್ಯಕ್ರಮದಲ್ಲಿ ಪಿ ಎಲ್ ಡಿ ಬ್ಯಾಂಕ್ ಅಧ್ಯಕ್ಷರಾದ ಆರ್.ಪೆದ್ದರೆಡ್ಡಿ,ಗ್ರಾ.ಪಂ ಅಧ್ಯಕ್ಷರಾದ ಸರಿತಾ ಬಾಬು, ಉಪಾಧ್ಯಕ್ಷರಾದ ಮುತ್ಯಾಲಕ್ಕ, ಗ್ರಾ.ಪಂ ಸದಸ್ಯರಾದ ನಾಗರಾಜು,ಅರುಣಾ, ಸುಬ್ಬರೆಡ್ಡಿ,ಮಾಜಿ ಸದಸ್ಯರಾದ ಶಿವಕುಮಾರ್,ನಾರಾಯಣಪ್ಪ,ಎಸ್ ಡಿ ಎಂ ಸಿ ಅಧ್ಯಕ್ಷರಾದ ವಿಜಯಕುಮಾರ್,ಎಡಿಎಂಎಂ ಶಂಕರಪ್ಪ,ಬಿ.ಕೆ.ಹಳ್ಳಿ ಪ್ರೌಢಶಾಲಾ ಮುಖ್ಯ ಶಿಕ್ಷಕರಾದ ಓಂಕಾರಪ್ಪ, ಪ್ರಾ.ಶಾ.ಶಿ.ಸಂಘದ ಕಾರ್ಯದರ್ಶಿ ನಾಗೇಂದ್ರ, ಸಿಆರ್.ಪಿ ಚಂದ್ರಶೇಖರ್, ಬಿ ಆರ್ ಪಿ ಗೀತಾ ರಾಣಿ ಸಹ ಶಿಕ್ಷಕರಾದ ರಾಮಾಂಜನೇಯ ಹಾಗೂ ವಿವಿಧ ಶಾಲೆಗಳ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.
ವರದಿ:ಕೆ. ಮಾರುತಿ ಮುರಳಿ