ಕರುನಾಡ ಕಂದ ಪತ್ರಿಕೆಯ ಮೂರನೇ ವಾರ್ಷಿಕೋತ್ಸವದ ಅಂಗವಾಗಿ ಗುಮ್ಮಟ ನಗರಿ ವಿಜಯಪುರದಲ್ಲಿ ದಿ.25-8-2024 ರ ಭಾನುವಾರದಂದು ವರದಿಗಾರರ ಸಭೆಯು ಯಶಸ್ವಿಯಾಗಿ ಜರುಗಿತು.
ಕರ್ನಾಟಕ ರಾಜ್ಯ ನೌಕರರ ಸಂಘ ವಿಜಯಪುರ ಜಿಲ್ಲಾ ನೌಕರರ ಭವನದಲ್ಲಿ ವಿಜಯಪುರ,ಕಲಬುರಗಿ, ಬೀದರ್,ಬೆಳಗಾವಿ, ಬಾಗಲಕೋಟೆ, ಯಾದಗಿರಿ ಜಿಲ್ಲೆಗಳಿಂದ ಆಗಮಿಸಿದ್ದ ಕರುನಾಡ ಕಂದ ವರದಿಗಾರರ ಸಭೆಯು ಅರ್ಥಪೂರ್ಣವಾಗಿ ನಡೆಯಿತು.
ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ ಎಂಬಂತೆ ಕಾರ್ಯಕ್ರಮವನ್ನು ಸಸಿಗೆ ನೀರು ಹಾಕುವುದರ ಮುಖಾಂತರ ಕಾರ್ಯಕ್ರಮದ ಅಧ್ಯಕ್ಷ ಸ್ಥಾನ ವಹಿಸಿದ್ದ ಕರುನಾಡ ಕಂದ ಪ್ರಧಾನ ಸಂಪಾದಕರಾದ ಶ್ರೀ ಬಸವರಾಜ ಬಳಿಗಾರ ರವರು ಉದ್ಘಾಟಿಸಿ ಮಾತನಾಡಿದ ಅವರು “ಪತ್ರಕರ್ತನಿಗೆ ಸಮಸ್ಯೆ ಬಂದರೆ ತಕ್ಷಣಕ್ಕೆ ಸ್ಪಂಧಿಸುವ ಪತ್ರಕರ್ತ ಸಂಘಗಳು ತುಂಬಾ ಕಡಿಮೆ ಇರುವ ಸಂಘಗಳಲ್ಲಿ ನಮಗೆ ಯಾವುದು ಉತ್ತಮವೋ ನಾವೇ ಆರಿಸಿಕೊಳ್ಳಬೇಕು,ಯಾರನ್ನೂ ಪೂರ್ತಿಯಾಗಿ ನಂಬಲು ಆಗುವುದಿಲ್ಲ, ನಮ್ಮ ಜಾಗ್ರತೆಯಲ್ಲಿ ನಾವಿದ್ದು ಕಾರ್ಯ ನಿರ್ವಹಿಸಬೇಕು. ಮುಂದಿನ ದಿನಗಳಲ್ಲಿ ನಮ್ಮ ” ಕರುನಾಡ ಕಂದ “ಬಳಗದ ವತಿಯಿಂದ ಸಂಘಟನೆಯೊಂದು ಕಾರ್ಯೋನ್ಮುಖವಾಗಲಿದೆ.ಆ ಪರ,ಈ ಪರ ಎನ್ನದೆ ನ್ಯಾಯದ ಪರವಾಗಿ ಎಲ್ಲರನ್ನೂ ಒಂದಾಗಿಸಿಕೊಂಡು ಮುಂದೆ ಸಾಗಲಿದೆ ಅತೀ ಶೀಘ್ರದಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡು ತಮ್ಮೆಲ್ಲರ ಸಲಹೆ ಸೂಚನೆಗಳ ಜೊತೆಗೆ ಮುಂದೆ ಸಾಗುತ್ತೇನೆ”ಎಂದು ತಿಳಿಸಿದರು.
ಈ ಕಾರ್ಯಕ್ರಮದ ಇನ್ನೋರ್ವ ಮುಖ್ಯ ಅತಿಥಿಯಾಗಿ ಆಗಮಿಸಿದ ಗದಗ ಜಿಲ್ಲಾ ವಿಶೇಷ ವರದಿಗಾರರು ಶೌಕತ್ ಅಲಿ ನದಾಫ್ ರವರು ಪತ್ರಿಕೆ ಬೆಳೆದು ಬಂದ ದಾರಿ,ಪತ್ರಕರ್ತರ ಕಷ್ಟ- ಸುಃಖ ಹಾಗೂ ಅನುಭವಿಸಿದ ಅನುಭವ,ಸಾಧಿಸಿದ ಸಾಧನೆ,ಹೀಗೆ ಹತ್ತು-ಹಲವು ವಿಚಾರಗಳನ್ನು ಹಂಚಿಕೊಂಡರು.
ಇದೇ ಸಂಧರ್ಭದಲ್ಲಿ ಕ.ಕಾ.ನಿ ಪತ್ರಕರ್ತರ ಹಾಗೂ ಪ್ರಕಾಶಕರ ಸಂಘ.(ರಿ.) ರಾಜ್ಯಾಧ್ಯಕ್ಷರಾದ ಮೌಲಾನ್ ಮಾಲಬಾವಡಿ,ಕರುನಾಡ ಕಂದ ವಿಜಯಪುರ ಜಿಲ್ಲಾ ವರದಿಗಾರರಾದ ಮಲ್ಕಣ್ಣ ಮಳಗೇದ,ಸಂಗಮೇಶ ಛಿದ್ರೆ,ನಬಿ ಪಟೇಲ್ ಮೇಟಿ,ರಜಾಕ ಸಾಬ್ ಹೊರಕೇರಿ,ಉಮಾ ಗೆಣ್ಣೂರು,ರೇವಣಸಿದ್ದಪ್ಪ ವೈದ್ಯ,ಪ್ರಶಾಂತ ಹುಣಸಗಿ,ಆಕಾಶ ಹೂಗಾರ,ಸಿದ್ರಾಮ ನಾಟಿಕಾರ,ಸೋಮನಾಥ ಸ್ವಾಮಿ ಇವರುಗಳು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡ ನಂತರ ವರದಿಗಾರರಿಗೆ ಪತ್ರಿಕೆಯ ಗುರುತಿನ ಚೀಟಿ,ನೇಮಕಾತಿ ಆದೇಶ ಪತ್ರ ವಿತರಣೆ, ಅತಿಥಿಗಳಿಗೆ ಗೌರವ ಸನ್ಮಾನ ನೆರವೇರಿತು.ಪತ್ರಿಕೆಯ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕು ಮುಖ್ಯ ವರದಿಗಾರರಾದ ಚಂದ್ರಶಾಗೌಡ ಮಾಲಿ ಪಾಟೀಲ್ ರವರು ಕಾರ್ಯಕ್ರಮವನ್ನು ನಿರೂಪಿಸಿ,ವಂದಿಸಿದರು.
ವರದಿ: ಚಂದ್ರಶೇಖರ ಎಸ್ ಪಾಟೀಲ್(ಜೇವರ್ಗಿ)