ಬಾಗಲಕೋಟೆ:ಕರ್ನಾಟಕ ಸರ್ಕಾರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಮುದಾಯ ಹಾಗೂ ಅಕ್ಷರ ಫೌಂಡೇಶನ್ ಮತ್ತು ಗ್ರಾಮ ಪಂಚಾಯತಿ ಹಿರೇಮಳಗಾವಿ ಇವರ ಸಂಯುಕ್ತ ಆಶ್ರಯದಲ್ಲಿ ಗ್ರಾಮ ಪಂಚಾಯಿತಿ ಮಟ್ಟದ ಶಾಲಾ ಮಕ್ಕಳ ಗಣಿತ ಸ್ಪರ್ಧೆ ಕಾರ್ಯಕ್ರಮವನ್ನು ಸಸಿಗೆ ನೀರು ಹಾಕುವುದರ ಮೂಲಕ ಶ್ರೀಮತಿ ಬಿ ಬಿ ದೇವದುರ್ಗ ಮುಖ್ಯ ಗುರುಮಾತೆಯರು ಉದ್ಘಾಟಿಸಿದರು.
ಗಣಿತವು ಕಬ್ಬಿಣದ ಕಡಲೆಯಲ್ಲ ಅದು ಸುಲಿದ ಬಾಳೆಯ ಹಣ್ಣಿನಂತೆ ಪ್ರತಿಯೊಬ್ಬ ವಿದ್ಯಾರ್ಥಿಯು ಗಣಿತದಲ್ಲಿ ಆಸಕ್ತಿಯನ್ನು ಹೆಚ್ಚು ಮಾಡಿಕೊಳ್ಳುವುದರ ಮೂಲಕ ತನ್ನ ಉನ್ನತವಾದ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ಶ್ರೀ ಮುತ್ತು ಯ ವಡ್ಡರ ಶಿಕ್ಷಕರು ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕ ನುಡಿಗಳನ್ನು ಹೇಳಿದರು. ಗ್ರಾಮ ಪಂಚಾಯಿತಿ ಮಟ್ಟದ ಗಣಿತ ಸ್ಪರ್ಧೆಗೆ ಹಿರೇಮಳಗಾವಿ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಕೈರವಾಡಗಿ, ಚಿಕ್ಕಮಳಗಾವಿ, ಚಿಕ್ಕಮಾಗಿ ಹಾಗೂ ಪಾಪನಾಥನಾಳ ಶಾಲಾ ಮಕ್ಕಳು ಈ ಗಣಿತ ಸ್ಪರ್ಧೆಯಲ್ಲಿ ಬಹಳ ಉತ್ಸಾಹದಿಂದ ಪಾಲ್ಗೊಂಡಿದ್ದರು.
ಗಣಿತ ಸ್ಪರ್ಧೆಯಲ್ಲಿ ಭಾಗವಹಿಸಿದ ಹಲವಾರು ವಿದ್ಯಾರ್ಥಿಗಳಲ್ಲಿ 4ನೇ ತರಗತಿಯ ಗಣಿತ ಸ್ಪರ್ಧೆಯಲ್ಲಿ ಸೌಭಾಗ್ಯ ಲಕ್ಷ್ಮಿ ಹುಚಕರಿ, ಯಲ್ಲಪ್ಪ ಕಾಗಿಯವರ ಹಾಗೂ ಭೂಮಿಕಾ ಬೆಳಗಲ್ ವಿದ್ಯಾರ್ಥಿಗಳು ಅನುಕ್ರಮವಾಗಿ ಪ್ರಥಮ ದ್ವಿತೀಯ ತೃತೀಯ ಸ್ಥಾನವನ್ನು ಪಡೆದರು.5ನೇ ತರಗತಿಯ ಗಣಿತ ಸ್ಪರ್ಧೆಯಲ್ಲಿ ಅನುಷಾ ಕುಂದರಗಿ, ಆದರ್ಶ ಮಾದರ ಹಾಗೂ ವೀರಭದ್ರಯ್ಯ ಶಿರೂರ ವಿದ್ಯಾರ್ಥಿಗಳು ಅನುಕ್ರಮವಾಗಿ ಪ್ರಥಮ ದ್ವಿತೀಯ ತೃತೀಯ ಸ್ಥಾನವನ್ನು ಪಡೆದರು. 6ನೇ ತರಗತಿಯ ಗಣಿತ ಸ್ಪರ್ಧೆಯಲ್ಲಿ ಸುಪ್ರೀತಾ ಕಾಗಿಯವರ, ಅನಿತಾ ನಾಟೇಕಾರ್ ಹಾಗೂ ಪುನೀತ್ ಅಂಗಡಿ ವಿದ್ಯಾರ್ಥಿಗಳು ಅನುಕ್ರಮವಾಗಿ ಪ್ರಥಮ ದ್ವಿತೀಯ ತ್ರಿತೀಯ ಸ್ಥಾನವನ್ನು ಪಡೆದರು.
ಗ್ರಾಮ ಪಂಚಾಯಿತಿ ಮಟ್ಟದ ಶಾಲಾ ಮಕ್ಕಳ ಗಣಿತ ಸ್ಪರ್ಧೆಯ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಹಾಗೂ ಸದಸ್ಯರು ಭಾಗವಹಿಸಿದ್ದರು. ಗ್ರಾಮ ಪಂಚಾಯಿತಿಯ ಕಾರ್ಯದರ್ಶಿಗಳಾಗಿರುವ ಶ್ರೀ ಡಿ ಬಿ ಹರದೊಳ್ಳಿ ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರಾದ ಶ್ರೀ ಬಿ ಎಂ ಅಂಗಡಿ, ಶ್ರೀ ಎಂ ಹೆಚ್ ಪೂಜಾರಿ, ಶ್ರೀ ಮುತ್ತು ಯ ವಡ್ಡರ, ಶ್ರೀ ಹೆಚ್ ಬಿ ಮಾದರ ಹಾಗೂ ಶ್ರೀಮತಿ ವಿದ್ಯಾ ಕನಕನ್ನವರ ಮತ್ತು ಗ್ರಾಮ ಪಂಚಾಯಿತಿಯ ಸರ್ವ ಸದಸ್ಯರು ಹಾಗೂ ಸಿಬ್ಬಂದಿ ವರ್ಗದವರು ಮತ್ತು ಬೇರೆ ಬೇರೆ ಶಾಲೆಯ ಮುಖ್ಯ ಗುರುಗಳು ಹಾಗೂ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಈ ಗಣಿತ ಸ್ಪರ್ಧೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಿದರು. ಎಲ್ಲಾ ವಿದ್ಯಾರ್ಥಿಗಳು ಬಹಳ ಉತ್ಸಾಹದಿಂದ ಪರೀಕ್ಷೆಯನ್ನು ಬರೆದು ಸಂತಸ ವ್ಯಕ್ತಪಡಿಸಿದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.