ಸಮಯ ಸಾಗಿದ ಹಾಗೆ ಬಣ್ಣದ ಭಾನೆಗಳು ಬದಲಾಗುತಿವೆ,
ವಿಷಯಕ್ಕೆ ತಕ್ಕಂತೆ ಉಳಿದ ಮಾತುಗಳು ಬದಲಾಗುತಿವೆ,
ಬದುಕು ಬದಲಾದಂತೆ ಬದಲಾಗಲೇಬೇಕು ಮನದ ಭಾಷೆ,
ಬದುಕಿನಂಗಳಕೆ ಬೆಳಕಾಗಬೇಕು ಅಂತರಂಗದ ಅಭಿಲಾಷೆ.!!
ನೀಲಿ ಬಾನಿನಲ್ಲಿ ಹಾರಾಡುವ ಹಕ್ಕಿಯ ಕಲರವವಾಗುವಾಸೆ,
ಬಾಳ ಕಡಲಲ್ಲಿ ತೇಲಿ ಮೀಯುವ ಅರಸಂಚೆಯಾಗುವಾಸೆ.
ಮಾಮರದ ಮಡಿಲಲ್ಲಿ ಕುಳಿತ ಕೋಗಿಲೆಯ ಇಂಪಾಗುವಾಸೆ,
ಹಸಿರು ವನಸಿರಿಯು ಜಗಕೆ ಧಾರೆ ಎರೆಯುವ ತಂಪಾಗುವಾಸೆ.!!
ಕಾಣದ ಲೋಕಕ್ಕೆ ಕ್ಷಣದಲ್ಲಿ ಕರೆದೊಯ್ಯುವ ಕಲ್ಪನೆಯಾಗುವಾಸೆ,
ಮೌನ ಸೋತ ಊರಿನಲ್ಲಿ ಕಟ್ಟಿದ ಮಾತಿನ ಮನೆಯಾಗುವಾಸೆ.
ಅನಿಸಿಕೆಗಳಿಗೆ ಬರಹದಲ್ಲಿ ಹೇಳುವಂತಹ ಕವನವಾಗುವಾಸೆ,
ಒಲವ ಪರಿಚಯಿಸಿ ಮನವ ಮೆರೆಸುವ ಭಾವನೆಯಾಗುವಾಸೆ!!
ಸ್ವರಗಳು ಅರಿಯದ ರಾಗವನ್ನು ತರುವ ಸಂಗೀತವಾಗುವಾಸೆ,
ಸುಂದರ ಸ್ವಪ್ನಲೋಕಕ್ಕೆ ಕೊಂಡೊಯ್ಯುವ ಸಂಭ್ರಮವಾಗುವಾಸೆ.
ಕಳೆದುಹೋದ ಕಾಲವನ್ನು ಕರೆದು ಸಾಂತ್ವನ ಹೇಳತ್ತಲೇ,
ನಮಗಾಗಿ ಬರುವ ನಾಳೆಗಳನ್ನು ಖುಷಿಯಿಂದ ಸ್ವಾಗತಿಸುವಾಸೆ.!!
-ಸುನಿಲ್ ಲೇಖಕ್ ಎನ್ ,ಬೆಂಗಳೂರು