ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಗಣೇಶ ಚತುರ್ಥಿ ಹಾಗೂ ಈದ್ ಮಿಲಾದ್ ಹಬ್ಬಗಳ ಹಿನ್ನಲೆಯಲ್ಲಿ ನಾಗರಿಕ ಸೌಹಾರ್ಧ ಸಭೆ

ಹೊನ್ನಾಳಿ:ಸೌಹಾರ್ಧ ಸಭೆಯನ್ನು ಉದ್ದೇಶಿಸಿ ಶಾಂತಿಯುತವಾಗಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಗಣೇಶನ ಹಬ್ಬವನ್ನು ಆಚರಣೆ ಮಾಡಬೇಕು ಎಂದು ಇನ್ಸ್‌ಪೆಕ್ಟರ್ ಸುನಿಲ್ ಕುಮಾರ್ ತಿಳಿಸಿದರು.
ಯಾವುದೇ ಧರ್ಮಗಳ ಹಬ್ಬ, ಆಚರಣೆಗಳ ಉದ್ದೇಶ ಸಮಾಜದಲ್ಲಿ ಪರಸ್ಪರ ಪ್ರೀತಿ, ವಿಶ್ವಾಸದಿಂದ ಸಹ ಬಾಳ್ವೆ ನಡೆಸುವುದಾಗಿದೆ ಎಂದು ತಹಸೀಲ್ದಾರ್‌ ಪಟ್ಟರಾಜ ಗೌಡ ಹೇಳಿದರು.
ಗುರುವಾರ ಪಟ್ಟಣದ ಗುರುಭವನದಲ್ಲಿ ತಾಲೂಕು ಆಡಳಿತ ಮತ್ತು ಪೊಲೀಸ್ ಇಲಾಖೆ ವತಿಯಿಂದ ಗಣೇಶ ಹಾಗೂ ಈದ್ ಮಿಲಾದ್ ಹಬ್ಬಗಳ ಹಿನ್ನಲೆಯಲ್ಲಿ ನಡೆದ ನಾಗರಿಕ ಸೌಹಾರ್ದ ಸಭೆ ಉದ್ದೇಶಿಸಿ ಮಾತನಾಡಿದರು.
ಜೀವನದಲ್ಲಿ ನಾವು ಮಾಡುವ ಕೆಲಸಗಳಲ್ಲಿ ವಿಘ್ನಗಳು ಬಾರದಿರಲಿ ಎಂದು ಹಿಂದುಗಳು ಗಣೇಶನನ್ನು ಪೂಜಿಸಿದರೆ ಮಾನವರಾದ ನಾವೆಲ್ಲರೂ ಕೂಡಾ ಒಂದಾಗಿ ಸೌಹಾರ್ದಯುತವಾಗಿ ಬದುಕಬೇಕು ಎನ್ನುವ ಅರ್ಥದಲ್ಲಿ ಮುಸ್ಲಿಂ ಬಾಂಧವರು ಈದ್- ಮಿಲಾದ್ ಹಬ್ಬ ಆಚರಿಸುತ್ತಾರೆ. ಹೊನ್ನಾಳಿ ಇತಿಹಾಸದಲ್ಲೇ ಇಲ್ಲಿಯವರೆಗೆ ಹಬ್ಬ ಇತರೆ ಆಚರಣೆಗಳು ಅತ್ಯಂತ ಶಾಂತಿಯುತವಾಗಿ ನಡೆಯುವ.ಮೂಲಕ ಶಾಂತಿಯ ನೆಲೆಬೀಡು ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಎಲ್ಲರೂ ತಾಲೂಕು ಅಡಳಿತ, ಪುರಸಭೆ, ಬೆಸ್ಕಾಂ ಹಾಗೂ ಪೊಲೀಸ್‌ ಇಲಾಖೆಗಳ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಸುರಕ್ಷಿತ ಮತ್ತು ಸಂಭ್ರಮದ ಹಬ್ಬ ಅಚರಿಸೋಣ ಎಂದರು.ಬೆಸ್ಕಾಂ ಎ.ಇ.ಇ. ಜಯಪ್ಪ ಮಾತನಾಡಿ ಗಣೇಶ ಹಬ್ಬ ಆಚರಿಸುವ ಸಮಿತಿಗಳು ಅಧಿಕೃತವಾಗಿ ಪೂರ್ವಾನುಮತಿ ಪಡೆದು ಅಧಿಕೃತ ವಿದ್ಯುತ್ ಕೆಲಸಗಾರರ ಮೂಲಕ ಪೆಂಡಾಲ್ ಗಳ ವಿದ್ಯುತ್ ಆಲಂಕಾರ ಮುಂತಾದ ಕೆಲಸಗಳನ್ನು ಮಾಡಿಸಿಕೊಳ್ಳಬೇಕು ಉತ್ತಮ ದರ್ಜೆಯ ವಿದ್ಯುತ್ ಪರಿಕರಗಳನ್ನು ಉಪಯೋಗಿಸಿ ಎಂದು ಸಲಹೆ ನೀಡಿದರು.ಪುರಸಭೆ ಮುಖ್ಯಾಧಿಕಾರಿ ಟಿ.ಲೀಲಾವತಿ ಮಾತನಾಡಿ, ಪಿಒಪಿ ಗಣೇಶ ಮೂರ್ತಿಗಳನ್ನು ನಿಷೇಧಿಸಲಾಗಿದೆ ಇನ್ನು ಗಣಪತಿ ಮೂರ್ತಿಗಳ ವಿಸರ್ಜೆನೆಯನ್ನು ನೇರವಾಗಿ ನದಿಗೆ ಬಿಡದೇ ಪುರಸಭೆ ವತಿಯಿಂದ ನಿರ್ಮಿಸಲಾದ ಹೊಂಡದಲ್ಲಿಯೇ ಗಣೇಶ ವಿಸರ್ಜನೆ ಮಾಡಬೇಕು ಎಂದು ಹೇಳಿದರು.

ಸರ್ಕಲ್ ಇನ್ಸಪೆಕ್ಟರ್‌ ಸುನಿಲ್ ಕುಮಾರ್ ಮಾತನಾಡಿ, ಗಣೇಶ ಮೂರ್ತಿ ಸಾರ್ವಜನಿಕವಾಗಿ ಪ್ರತಿಷ್ಠಾಪಿಸಲು ಸಮಿತಿಯ ವರು ಅನುಮತಿ ಪಡೆಯಬೇಕಾಗಿದ್ದು ಇದಕ್ಕಾಗಿ ಏಕಗವಾಕ್ಷಿ ವ್ಯವಸ್ಥೆ ಮಾಡಲಾಗಿದ್ದು ಈ ಮೂಲಕ ಸಮಿತಿಯ ಹೆಸರು, ವಿಳಾಸ, ದೂರವಾಣಿ ಸಂಖ್ಯೆಗಳ ಸಹಿಕ ಅಧಿಕೃತ ಫಾರಂಗಳನ್ನು ಭರ್ತಿ ಮಾಡಿ ಅನುಮತಿ ಪಡೆಯಬೇಕು ಎಂದ ಅವರು ಇತ್ತೀಚೆಗೆ ಸೈಬರ್‌ ಕ್ರೈಂಗಳು ಹೆಚ್ಚಾಗುತ್ತಿದ್ದು ನೆರವಿಗೆ ಸಹಾಯವಾಣಿ 1930 ಗೆ ಕರೆ ಮಾಡಬಹುದಾಗಿದೆ ಎಂದು ತಿಳಿಸಿದರು.
ಕರೆ ಸಭೆಯಲ್ಲಿ ಮುಖಂಡರಾದ ಎಂ.ಆರ್. ಮಹೇಶ್, ರಾಜು ಕಣಗಣ್ಣಾರ, ದಿಡಗೂರು ತಮ್ಮಣ್ಣ, ಸೂರಟೂರು ಹನುಮಂತಪ್ಪ,ಮಕ್ಖುಲ್ ಆಹಮ್ಮದ್ ವಿನಯ್ ವಗ್ಗರ್ ಮುಂತಾದವರು ಮಾತನಾಡಿ, ಹೊನ್ನಾಳಿಯಲ್ಲಿ ಹಿಂದು-ಮುಸ್ಲಿಂ ಸೇರಿದಂತೆ ಎಲ್ಲಾ ಧರ್ಮೀಯರು ಅತ್ಯಂತ ಸೌಹಾರ್ದಯುತವಾಗಿ ಬದುಕುತ್ತಿದ್ದಾರೆ ಎಂದು ಹೇಳಿದರು.ಸಭೆಯಲ್ಲಿ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಇದ್ದರು.

ವರದಿ ಪ್ರಭಾಕರ.ಡಿ.ಎಮ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ