ಬೀದರ್ ಲೋಕಸಭಾ ಮತಕ್ಷೇತ್ರ ವ್ಯಾಪ್ತಿಯ ಕಲ್ಬುರ್ಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಗಾರಂಪಳ್ಳಿ ಗ್ರಾಮದ ಜನರು ನಿತ್ಯ ಸಂಚರಿಸುವ ಸೇತುವೆ ಸಮಸ್ಯೆಗೆ ಇವತ್ತಿಗೂ ಕೂಡಾ ಪರಿಹಾರ ಇಲ್ಲ ? ಬೆಟ್ಟಕ್ಕೆ ಹೋದ ಮೇಕೆ,ದನಕರುಗಳು ತಿರುಗಿ ಮನೆಗೆ ಬರುತ್ತಿರುವಾಗ ನೀರಿನ ಪ್ರವಾಹಕ್ಕೆ ಸೇತುವೆ ಮುಳುಗಡೆ ಹೊಸ ಬಡಾವಣೆಯತ್ತ ಹೋಗಬೇಕೆಂದರೆ ನೀರಿನ ಪ್ರವಾಹಕ್ಕೆ ದನಗಳು ಮತ್ತು ಮೇಕೆಗಳು ದಾಟಲು ಸಮಸ್ಯೆ ಕುರಿಗಾಹಿಗಳಿಗೆ ಎದುರಾಗಿದೆ,ವಿಚಾರ ಮಾಡಿ ಹೀಗಿರುವಾಗ ರಾತ್ರಿ ಹೊತ್ತು ಆರೋಗ್ಯ ಸರಿಯಿಲ್ಲವೆಂದರೆ ತಾಲೂಕು ಆಸ್ಪತ್ರೆಗೆ ಹೋಗುವ ಪರಿಸ್ಥಿತಿ ಹೀಗೆ ,ಶಾಲಾ ಮಕ್ಕಳು ಶಾಲೆಗೆ ಹೋಗುವ ಗಾಡಿಗಳ ವ್ಯವಸ್ಥೆ ಹೇಗೆ? ಕ್ಷೇತ್ರದ ಸಂಸದರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಶಾಶ್ವತವಾಗಿ ಇದನ್ನು ಸಮಸ್ಯೆ ಯಾವಾಗ ಪರಿಹಾರ ಮಾಡ್ತಾರೆ ಎನ್ನುವುದು ಕಾದು ನೋಡೋಣ ?ದನಗಳನ್ನು ಮತ್ತು ಕುರಿ ಮೇಕೆಗಳನ್ನು ಸುರಕ್ಷಿತವಾಗಿ ದಾಟಿಸಲು ಗ್ರಾಮಸ್ಥರು ಗ್ರಾಮದ ಯುವಕರು ಮಾಜಿ ಗ್ರಾಮ ಪಂಚಾಯತ್ ಸದಸ್ಯರು ಮತ್ತು ಧರ್ಮಸ್ಥಳ ಸಂಸ್ಥೆ ಗಾರಂಪಳ್ಳಿ ಗ್ರಾಮದ ಶೌರ್ಯ ತಂಡದ ಎಲ್ಲರ ಜೊತೆಗೂಡಿ ಕೈಯಿಂದ ಕೈಗೆ ಸ್ನೇಹಿತರ ಜೊತೆಗೂಡಿ ಸರಪಳಿಯನ್ನು ಕಟ್ಟಿ ಕುರಿಗಳನ್ನು ದಡ ಸೇರಿಸಿದರು. ಈ ಕಾರ್ಯವನ್ನು ನೋಡಿ ಗ್ರಾಮದ ಜನರು ತುಂಬಾ ಮೆಚ್ಚುಗೆ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಶ್ರೀ ಫಜಲ್ ರೈಮಾನ್,
ಶ್ರೀ ಎಂ.ಡಿ ರಫಿ ,ಶ್ರೀ ರವೀಂದ್ರ ಮಾಳಗಿ, ಶ್ರೀ ಅಜ್ಜು ದುಖಾನ್, ಶ್ರೀ ಅಶೋಕ್ ಮಾಳಗಿ, ಶ್ರೀ ಮೌನೇಶ್ ಮುಸ್ತಾರಿ, ಅನಿಲ್ ಭೋವಿ, ಶ್ರೀ ವಾಸಿಮ್ ಅಕ್ರಮ್, ಶ್ರೀ ಜಗನ್ನಾಥ್ ಮುಸ್ತರಿ,ಶ್ರೀ ಶಿವಕುಮಾರ್ ಪೂಜಾರಿ, ಇನ್ನು ಇತರರ ಜೊತೆಗೂಡಿ ಕುರಿಗಳನ್ನು ದಾಟಲು ಹಸುಗಳನ್ನು ದಾಟಲು ಮಾನವ ಸರಪಳಿ ರೀತಿಯಲ್ಲಿ ಬ್ರಿಡ್ಜ್ ಮೇಲೆ ನಿಂತುಕೊಂಡು ದಾಟಿಸಿ ಮಾನವೀಯತೆ ಮೆರೆದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.