ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಪಿಜಿ ಮುಗಿಸಿ ಮುಂದೇನು…..!!!

ರಾಯಚೂರು ಜಿಲ್ಲೆಯ ಸಿಂಧನೂರು ಕೆ.ಹೊಸಹಳ್ಳಿಯ ಪುಟ್ಟ ಗ್ರಾಮದವನಾದ ನಾನು ಕಳೆದ ಒಂದು ತಿಂಗಳ ಹಿಂದೆ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ನಾನು ಅತ್ಯಂತ ಸುರಕ್ಷಿತವಾಗಿ ಕಲಿಯುತ್ತಿದ್ದೆ ಯಾವುದೇ ಮುಂದಾಲೋಚನೆ ಇಲ್ಲದೆ ಇದ್ದ ನನಗೆ ಪರೀಕ್ಷೆಯನ್ನ ಮುಗಿಸಿ ಮನೆಗೆ ಬಂದ ಕೂಡಲೇ ಹಲವು ಸಮಸ್ಯೆಗಳು ಕಾಡಲಾರಂಭಿಸಿದವು ಪತ್ರಿಕೋದ್ಯಮದಲ್ಲಿ ಪದವಿ ಮುಗಿಸಿದ್ದೇನೆ. ಸ್ನಾತಕೋತ್ತರ ಪದವಿಯನ್ನು ಮುಗಿಸಿದ್ದೇನೆ ಇನ್ನೇನು ಮಾಡುವುದು ಬಿಎಡ್ ಮಾಡಿದರೆ ಮುಂದೆ ಶಿಕ್ಷಕನಾಗಬಹುದು ಎಂದು ಅದೆಷ್ಟೋ ಬಾರಿ ಗುರುಗಳು ಹೇಳಿದರು ನನ್ನ ಮನಸ್ಸು ಮಾತ್ರ ಮತ್ತೇನನ್ನೋ ಯೋಚಿಸುತ್ತಿತ್ತು.
ಕಾನೂನಿನ ಅರಿವು ನನಗಿರಬೇಕು ಕಾನೂನಿನ ವಿರುದ್ಧವಾಗಿ ನಡೆದುಕೊಳ್ಳುವವರನ್ನ ನಾನು ಪ್ರಶ್ನಿಸಬೇಕು ಇದೆಲ್ಲ ಸಾಧ್ಯವಾಗಬೇಕೆಂದರೆ ನಾನು ಕಾನೂನಿನ ಪದವಿ ಪಡೆಯಬೇಕು ಮುಂದೆ ಉತ್ತಮ ವಕೀಲನಾಗಬೇಕು ಎನ್ನುವ ಆಸಕ್ತಿಯಿಂದ ಬಿಸಿಲ ನಗರಿ ರಾಯಚೂರಿನ ಕೆ ಹೊಸಹಳ್ಳಿ ಎನ್ನುವ ಪುಟ್ಟ ಗ್ರಾಮದಿಂದ ಹೊರಟ ನನ್ನ ಪಯಣ.

ಕೊಪ್ಪಳದ ಡಿ.ಬಿ.ಎಚ್.ಪಿ.ಎಸ್ ಕಾನೂನು ಕಾಲೇಜಿನಲ್ಲಿ ಮೂರು ವರ್ಷದ ಕಾನೂನು ಪದವಿಗೆ ಅರ್ಜಿ ಸಲ್ಲಿಸಿ ಅಲ್ಲಿಂದ ಗದಗ ಹುಬ್ಬಳ್ಳಿ ಧಾರವಾಡ ಶಿವಮೊಗ್ಗ ಮೈಸೂರು ಎಲ್ಲಾ ನಗರಗಳಲ್ಲೂ ಒಂದೊಂದು ಅರ್ಜಿಯನ್ನು ಸಲ್ಲಿಸಿ ಕೊನೆಗೆ ಮಂಗಳೂರಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಕಾಲೇಜಿಗೆ ಬಂದು ತಲುಪಿದೆ ಮಂಗಳೂರು ಎಂದರೆ ನನಗೆ ಮಾತೃಭೂಮಿಗೆ ಬಂದಷ್ಟೇ ಸಮಾಧಾನ ಅಲ್ಲಿ ಎಲ್ಲರ ಒಡನಾಟ ಶಿಕ್ಷಣದ ಮಹತ್ವ ಹಲವು ಭಾಷೆ ಧರ್ಮಗಳ ಸೊಗಡು ಎಲ್ಲವೂ ಒಂದು ವಿಶಿಷ್ಟ ಅನುಭವಗಳನ್ನು ನೀಡುತ್ತಿದ್ದ ನನ್ನ ಪಾಲಿನ ಸ್ವರ್ಗ ತಾಣವೇ ಈ ನಮ್ಮ ಕುಡ್ಲ ಎಂದರೆ ತಪ್ಪಾಗಲಾರದು.

ಎಲ್ಲೋ ಹುಡುಕಿದೆ ಕಾಣದ ದೇವರ ಕಲ್ಲು ಮಣ್ಣಿನ ಗುಡಿಯೊಳಗೆ ಇಲ್ಲೇ ಇರುವ ಪ್ರೀತಿ ಸ್ನೇಹಗಳ
ಗುರುತಿಸದಾದೆನು ನಮ್ಮೊಳಗೆ ಎನ್ನುವ ಜಿ ಎಸ್ ಶಿವರುದ್ರಪ್ಪ ರವರ ಎಲ್ಲಾ ಊರನು ಸುತ್ತಿದ ಮೇಲೆ ನನಗೆ ಮೊದಲಿನಿಂದಲೂ ಶಿಕ್ಷಣ ನೀಡುತ್ತಿರುವ ನಮ್ಮ ಕುಡ್ಲವೇ ನನಗೆ ಶ್ರೇಷ್ಠ ಎಂದು ಈ ಕಾಲೇಜಿನಲ್ಲಿ ಅರ್ಜಿ ಸಲ್ಲಿಸಿದೆ ಎಲ್ಲಾ ಕಾಲೇಜಿನಲ್ಲೂ ಅರ್ಜಿಗಳನ್ನು ಸಲ್ಲಿಸಿದ್ದೇನೆ ಯಾವುದಾದರೂ ಒಂದು ಕಾಲೇಜಿನಲ್ಲಿ ಆಯ್ಕೆಯಾಗಬಹುದು ಎನ್ನುವ ನಿರೀಕ್ಷೆಯೊಂದಿಗೆ ಕಾಯುತ್ತಾ ಕುಳಿತುಕೊಂಡೆ.

ಸ್ನಾತಕೋತ್ತರ ಪದವಿ ಕಲಿಯುತ್ತಿದ್ದಾಗ ಎಲ್ಲರೂ ನನ್ನನ್ನು ಉತ್ತಮ ಮಾತುಗಾರ ಹಾಗೆ ಹೀಗೆ ಎಂದು ಹೊಗಳುತ್ತಿದ್ದರು ಈ ಎಲ್ಲ ಸಂದರ್ಭಗಳಲ್ಲಿ ನನಗನಿಸುತ್ತಿದ್ದದ್ದು ನನ್ನ ಮಾತುಗಳೇ ನನ್ನ ಬಂಡವಾಳವಾಗಬೇಕು ನನ್ನ ಜ್ಞಾನವೇ ನನ್ನ ಬದುಕು ನಡೆಸಲು ಬೇಕಾಗುವ ಹಣವಾಗಬೇಕು ಎಂದುಕೊಂಡವನು ಕಾನೂನು ಪದವಿ ಪಡೆಯಲು ನಿರ್ಧರಿಸಿದ್ದೆ.
ಬಯಲು ಸೀಮೆ ಮಲೆನಾಡು ಮಂಡ್ಯ ಮೈಸೂರ್ ಹಾಸನ ಕರ್ನಾಟಕದಾದ್ಯಂತ ಒಂದು ವಾರಗಳ ಪ್ರಯಾಣ ಬೆಳೆಸಿದ ನನಗನಿಸಿದ್ದು ಎಲ್ಲೆಲ್ಲೂ ಸುತ್ತಿ ಪರಿಚಯವಿಲ್ಲದ ಊರುಗಳಲ್ಲಿ ಹೊಸ ನೆಲೆಯನ್ನು ಕಂಡುಕೊಳ್ಳುವುದಕ್ಕಿಂತ ಕರಾವಳಿಯಲ್ಲಿ ನನಗೆ ಅತ್ಯಂತ ಪ್ರೀತಿ ಮತ್ತು ಶಿಕ್ಷಣವನ್ನು ನೀಡಿ ಬೆಳೆಸಿದ ಮಂಗಳೂರಿನಲ್ಲಿ ಕಲಿಯುವುದು ಉತ್ತಮವೆನಿಸಿತು ಹಾಗಾಗಿ ಏನನ್ನಾದರೂ ಕಲಿಯಬೇಕು ಕಲಿತು ಸಾಧಿಸಬೇಕು ಸಾಧಿಸಿ ಸಮಾಜಕ್ಕೆ ಮಾದರಿಯಾಗಬೇಕು ಎನ್ನುವ ನಿರೀಕ್ಷೆಯೊಂದಿಗೆ ಕಾಯುತ್ತಿದ್ದೇನೆ.

-ಶಂಕರ್ ಓಬಳಬಂಡಿ ,
ಎಸ್ ವಿ ಪಿ ಕನ್ನಡ ಅಧ್ಯಯನ ಸಂಸ್ಥೆ ಮಂಗಳೂರು ವಿವಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ