ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ದಿಡಗೂರು ಗ್ರಾಮದಲ್ಲಿ ಕೆಲವು ದಿನಗಳಿಂದ ಜಮೀನುಗಳಲ್ಲಿ ಚಿರತೆ ಹೆಜ್ಜೆ ಗುರುತು ಕಂಡು ಬಂದಿದ್ದು ಗ್ರಾಮಸ್ಥರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ
ಸ್ಥಳೀಯ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸ್ಥಳಕ್ಕೆ ಆಗಮಿಸಿ ಹೆಜ್ಜೆ ಗುರುತುಗಳನ್ನು ಪರಿಶೀಲಿಸಿ ಈ ಗುರುತುಗಳು ಚಿರತೆ ಹೆಜ್ಜೆ ಗುರುತು ಎಂದು ಮನದಟ್ಟು ಮಾಡಿ ಜಮೀನುಗಳಿಗೆ ಹೋಗುವಾಗ ಯಾರೂ ಒಬ್ಬೊಬ್ಬರಾಗಿ ಓಡಾಡುವ ಹಾಗಿಲ್ಲ ಸಂಜೆ ಸಮಯಕ್ಕೆ ಹೊಲದಲ್ಲಿ ಯಾರೂ ಇರಬೇಡಿ ಎಂದು ಡಿವೈ ಅರ್ ಎಫ್ ಒ ಶಿವಯೋಗಿ ತಿಳಿಸಿದರು.
ಚಿರತೆ ಸೆರೆಗೆ ಇಂದು ಅನುಮಾನಾಸ್ಪದ ಜಾಗದ ಹತ್ತಿರ ಬೊನ್ ಇಟ್ಟಿದ್ದಾರೆ.ಈ ಸಂದರ್ಭದಲ್ಲಿ ದಿಡಗೂರಿನ ಗ್ರಾಮಸ್ಥರು ಮತ್ತು ಗ್ರಾಮ ಪಂಚಾಯಿತಿ ಸದಸ್ಯರು , ರಾಜಪ್ಪ, ಹನುಮಂತಪ್ಪ, ವೆಂಕಟೇಶ್, ಉಮೇಶ್, ಪಾಲಾಕ್ಷ,ಅರಣ್ಯ ಇಲಾಖೆ ಸಿಬ್ಬಂದಿ ,R FO ಕಿಶೋರ ನಾಯ್ಕ, ಆಶಾ, ಚನ್ನಪ್ಪ, ಮೌನೇಶ್ ಹಾಜರಿದ್ದರು.
ವರದಿ ಪ್ರಭಾಕರ್ ಡಿ ಎಂ