ಗ್ರಾಮದಲ್ಲಿ ಮೂಲ ಸೌಕರ್ಯ ಭಾಗ್ಯವಿಲ್ಲ,ಜ್ವರದ ಭೀತಿಯಲ್ಲಿ ಜನ
ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನಾದ್ಯಂತ ದಿನೇ ದಿನೇ ಹೆಚ್ಚುತ್ತಿರುವ ಡೆಂಗ್ಯೂ ಹಾಗೂ ವಿವಿಧ ರೀತಿಯ ಜ್ವರಗಳಿಂದ ಜನ ಪಟ್ಟಣದ ಸಾರ್ವಜನಿಕ ಆಸ್ಪಯತ್ರೆಯಲ್ಲಿ ಸಾಲುಗಟ್ಟಿ ಬೆಳಿಗ್ಗೆಯಿಂದ ಸಂಜೆವರೆಗೆ ಕಾದು ಚಿಕಿತ್ಸೆ ಪಡೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಹದಗೆಟ್ಟ ನೈರ್ಮಲ್ಯ ವ್ಯವಸ್ಥೆಯಿಂದ ತಾಲ್ಲೂಕಿನ ಮರಿದಾಸನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಲುಮೇ ಹಟ್ಟಿ ಗ್ರಾಮದಲ್ಲಿ ನಾಯಕ ಸಮುದಾಯದ 80 ಕ್ಕೂ ಹೆಚ್ಚು ಮನೆಗಳಿದ್ದರೂ ಸಹ ಸಿ.ಸಿ. ರಸ್ತೆ., ಚರಂಡಿ,ಬೀದಿ ದೀಪಗಳ ಭಾಗ್ಯವಂತೂ ಇಲ್ಲವೇ ಇಲ್ಲ ಇಲ್ಲಿಯ ಗ್ರಾಮಸ್ಥರು ಸಂಜೆಯಾದರೆ ಸಾಕು ಕತ್ತಲಲ್ಲೆ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಅದಲ್ಲದೇ ಮಳೆಗಾಲದಲ್ಲಿ ಕಲುಷಿತ ವಾತಾವರಣ ಸೃಷ್ಟಿಯಾಗಿದ್ದು ಎಲ್ಲೆಂದರಲ್ಲಿ ಚರಂಡಿ ನೀರು, ಮಳೆ ನೀರು ನಿಂತು ಫಾರ್ತೇನಿಯಂ ಗಿಡಗಳು ಬೆಳೆದು ಸೊಳ್ಳೆಗಳು ಉತ್ಪತ್ತಿಯಾಗಿ ಜನ ಡೆಂಘೀ ಭೀತಿಯಲ್ಲಿದ್ದಾರೆ.
ತಾಲೂಕಿನ ಮರಿದಾಸನಹಳ್ಳಿ ಗ್ರಾ.ಪಂ ವ್ಯಾಪ್ತಿಯ ಕುಲುಮೇ ಹಟ್ಟಿ ಗ್ರಾಮದಲ್ಲಿ ಮೂಲಸೌಕರ್ಯಗಳ ಕೊರತೆಯಿಂದ ಜನ ನರಳುವಂತಾಗಿದೆ. ಇದರ ಜೊತೆಗೆ ಗಾಯದ ಮೇಲೆ ಬರೆ ಎಳೆದಂತೆ, ಗ್ರಾ.ಪಂ ಹಾಗೂ ತಾ.ಪಂ ಅಧಿಕಾರಿಗಳಿಗೆ ಎಷ್ಟು ಭಾರಿ ಮನವಿ ಸಲ್ಲಿಸಿದರು ಕ್ಯಾರೇ ಎನ್ನದೆ ನಿರ್ಲಕ್ಷ್ಯವಹಿಸಿ ಈ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಗ್ರಾಮಸ್ಥರು
ಸಿ.ಸಿ ರಸ್ತೆ, ಚರಂಡಿಗಳೇ ವ್ಯವಸ್ಥೆ ಇಲ್ಲ ತಾಲ್ಲೂಕಿನ ಮರಿದಾಸನಹಳ್ಳಿ ಗ್ರಾ.ಪಂ ವ್ಯಾಪ್ತಿಯ ಕುಲುಮೇ ಹಟ್ಟಿ ಗ್ರಾಮದಲ್ಲಿ ಸಿ.ಸಿ ರಸ್ತೆ, ಚಂಡಿಗಳೇ ಇಲ್ಲಾ ಮಳೆ ಬಂದರೆ ಹೊಲ, ತೋಟಗಳಿಂದ ನೀರು ನೇರವಾಗಿ ಗ್ರಾಮದಲ್ಲಿಯೇ ಬಂದು ನಿಲ್ಲುತ್ತಿವೆ, ಈ ಕಲುಷಿತ ವಾತಾವರಣದಲ್ಲಿ ಸೊಳ್ಳೆಗಳು ಹುಟ್ಟಿ ಜನರ ಜೀವ ಹಿಂಡುತ್ತಿವೆ. ನೀರು ನಿಂತಲ್ಲೆ ನಿಂತು ಪಾಚಿಗಟ್ಟಿದ್ದು ಇದೇ ನೀರಲ್ಲಿ ಬಡಾವಣೆಯ ವೃದ್ಧರು, ಮಹಿಳೆಯರು ಮಕ್ಕಳು ನಡೆದುಕೊಂಡು ಹೋಗುವುದರಿಂದ ಜನರಲ್ಲಿ ಅನಾರೋಗ್ಯದ ಭೀತಿ ಹೆಚ್ಚಾಗಿದೆ. ಗ್ರಾಮದಲ್ಲಿ ಕುಡಿಯುವ ಹಾಗೂ ನಿತ್ಯ ಬಳಕೆಯ ನೀರು ಹಿಡಿಯಲು ಹೋಗಿ ಚೇಳು ಕಡಿತದಿಂದ ಸಮಸ್ಯೆ ಅನುಭವಿಸುತ್ತಿದ್ದಾರೆ. ನಲ್ಲಿಗಳ ಸುತ್ತಲೂ ಪಾರ್ಥೇನಿಯಂ ಗಿಡಗಳಿಂದ ಸುತ್ತುವರಿದಿದೆ. ಸ್ವಚ್ಚಗೊಳಿಸುವಂತೆ ಅನೇಕ ಬಾರಿ ಮನವಿ ಮಾಡಿಕೊಂಡಿದ್ದಾರೆ.
ಸಂಜೆಯಾದ ಪರಿಸ್ಥಿತಿ: ಸಂಜೆಯಾಗುತ್ತಿದ್ದಂತೆ ಗ್ರಾಮದಲ್ಲಿ ಬೀದಿ ದೀಪಗಳು ಸರಿಪಡಿಸದ ಕಾರಣ ಗ್ರಾಮಸ್ಥರು ಕತ್ತಲಲ್ಲೇ ಕಾಲದೂಡುವಂತಾಗಿದೆ, ರಾತ್ರಿಯಾದರೆ ಸಾಕು ಮನೆಯಿಂದ ಹೊರ ಬರಲು ಹಾವು ಚೇಳುಗಳ ಕಾಟದಿಂದ ಹೊರಬರದಂತಾಗಿದೆ, ದಾಳಿ ಇಡುವ ಸೊಳ್ಳೆಗಳ ಕಾಟದಿಂದ ತಪ್ಪಿಸಿಕೊಳ್ಳಲು ಜನ ನಿತ್ಯ ಸಂಜೆ ಮನೆಗಳಲ್ಲಿ ಹೊಂಗೆ ಸೊಪ್ಪಿನಿಂದ ಹೊಗೆ ಹಾಕಿಕೊಳ್ಳುತ್ತಿದ್ದಾರೆ. ಅನುಕೂಲಸ್ಥರು ತಮ್ಮ ಮನೆಗಳಲ್ಲಿ ಸೊಳ್ಳೆ ಪರದೆ ಕಟ್ಟಿಕೊಳ್ಳುವುದು, ಫ್ಯಾನುಗಳನ್ನು ಬಳಸಿ ಸೊಳ್ಳೆಗಳನ್ನು ಓಡಿಸುತ್ತಾರೆ. ಆದರೆ ಬಡವರು, ಕೂಲಿ ಕಾರ್ಮಿಕರ ಪರಿಸ್ಥಿತಿ ದೇವರಿಗೆ ಪ್ರೀತಿ ಎನ್ನುವಂತಾಗಿದೆ.
ಡೆಂಗ್ಯೂ ಪ್ರಕರಣ: ನೈರ್ಮಲ್ಯ ಸಮಸ್ಯೆ ಮತ್ತು ಕಲುಷಿತ ವಾತಾವರಣದಿಂದಾಗಿ ಸೊಳ್ಳೆಗಳು ಹುಟ್ಟಿಕೊಂಡು ಜನರಿಗೆ ಕಚ್ಚುತ್ತಿರುವ ಪರಿಣಾಮ ಗ್ರಾಮದಲ್ಲಿ ಈಗಾಗಲೇ 1 ಡೆಂಗ್ಯೂ ಪ್ರಕರಣ ದಾಖಲಾಗಿ ತಾಲ್ಲೂಕು ಆಸ್ಪತ್ರೆ, ಜಿಲ್ಲಾ ಆಸ್ಪತ್ರೆ, ಬೆಂಗಳೂರಿಗೆ ಹೋಗಿ ಗುಣಪಡಿಸಿಕೊಂಡು ಬಂದಿದ್ದಾರೆ. ಗ್ರಾಮದ ಅನೇಕ ಜನರಲ್ಲಿ ಟೈಫಾಯ್ಡ್ ಜ್ವರ ವಾಂತಿ ಬೇದಿ ಲಕ್ಷಣಗಳು ಕಾಣಿಸಿಕೊಳ್ಳುತ್ತಿದೆ.
ವರದಿ ಪಾವಗಡ ಕೆ ಮಾರುತಿ ಮುರಳಿ