ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಅಗರಖೇಡ ಗ್ರಾಮದ ನಮ್ಮೂರ ಸರಕಾರಿ ಕನ್ನಡ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯ ಮೂರು ಕೋಣೆಗಳು ಮಳೆಯಿಂದ ಸೋರುತ್ತಿದ್ದು ಹಾಗೂ ಕೋಣೆಗಳು ಬಿರುಕು ಬಿಟ್ಟಿದ್ದು ವಿದ್ಯಾರ್ಥಿನಿಯರು ಬಯಲಲ್ಲಿ ಕುಳಿತುಕೊಂಡು ಪಾಠ ಕೇಳಬೇಕಾದ ಸಂದರ್ಭ ಬಂದಿದೆ. ವಿದ್ಯಾರ್ಥಿಗಳಿಗೆ ಏನಾದರೂ ಅನಾಹುತ ಸಂಭವಿಸಿದರೆ ಅಥವಾ ಆರೋಗ್ಯದಲ್ಲಿ ಏರುಪೇರಾದರೆ ಯಾರು ಜವಾಬ್ದಾರರು? ಶಾಲೆಯ ಕೋಣೆಗಳು ಬಿರುಕು ಬಿಟ್ಟಿದ್ದು ಒಂದು ವೇಳೆ ಕೋಣೆಗಳು ಬಿದ್ದು ಏನಾದರೂ ಅನಾಹುತ ಸಂಭವಿಸಿದರೆ ಅದಕ್ಕೆ ಹೊಣೆಗಾರರು ಯಾರು? ಒಟ್ಟು ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿನಿಯರ ಸಂಖ್ಯೆ 356, ಅಗರಖೇಡ ಗ್ರಾಮ ಇರುವುದು ಇಂಡಿಯಿಂದ ಕೇವಲ 22 ಕಿ.ಮೀ ಅಂತರದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳೇ ತಾವು ಒಂದು ಸಲ ಈ ಶಾಲೆಗೆ ಯಾಕೆ ಭೇಟಿ ನೀಡಬಾರದು. ಶಾಲೆಯಲ್ಲಿ ಕಲಿಯುತ್ತಿರುವ ಪುಟಾಣಿಗಳನ್ನು ಒಮ್ಮೆ ನೋಡಿ, ಶಾಲೆಯ ಪರಿಸ್ಥಿತಿಯನ್ನು ಕಣ್ತುಂಬ ನೋಡಿ, ನೋಡಿದ ಮೇಲೆ ತಮಗೆ ಏನಾದರೂ ಆ ಕೋಣೆಗಳ ರಿಪೇರಿ ಅಥವಾ ಹೊಸ ಕಟ್ಟಡ ಕಟ್ಟಬೇಕು ಎನಿಸಿದರೆ ಕಟ್ಟಿಸಬಹುದು. ಇಲ್ಲವಾದಲ್ಲಿ ಶಾಲೆಗೆ ರಜೆ ಘೋಷಿಸಿ ವಿದ್ಯಾರ್ಥಿಗಳಿಗೆ ಮನೆಗೆ ಕಳುಹಿಸಿ. ಕೋಣೆಗಳು ರಿಪೇರಿ ಅಥವಾ ಹೊಸ ಕಟ್ಟಡವಾದ ಮೇಲೆ ಶಾಲೆ ಪ್ರಾರಂಭ ಮಾಡಿ. ಶಾಲೆಯ ಸ್ಥಳವು ಬಹಳ ಇಕ್ಕಟ್ಟ ವಾಗಿದ್ದು ಆದುದರಿಂದ ಶಾಲೆಯನ್ನು ಬೇರಡೆ ಸ್ಥಳಾಂತರ ಮಾಡಿ,ಸರ್ಕಾರಿ ಶಾಲೆಗಳಿಗೆ ಅನ್ನಭಾಗ್ಯ, ಪುಸ್ತಕ ಭಾಗ್ಯ, ಕ್ಷೀರಭಾಗ್ಯ, ಸಮವಸ್ತ್ರ ಭಾಗ್ಯ, ಶೂ ಭಾಗ್ಯ, ಕುಳಿತುಕೊಳ್ಳಲು ಕುರ್ಚಿ ಭಾಗ್ಯ ಎಲ್ಲಾ ಕೊಡ್ತಾ ಇದ್ದೀರಾ ಆದರೆ ಕೋಣೆಗಳ ಭಾಗ್ಯ ಯಾಕೆ ಕೊಡುತ್ತಿಲ್ಲ ಅಧಿಕಾರಿಗಳೇ? ಶಾಲೆಯಲ್ಲಿ ಏನಾದರೂ ಅನಾಹುತ ಸಂಭವಿಸಿದರೆ ಅಲ್ಲಿರುವ ಶಿಕ್ಷಕರ ಗತಿ ಪರಿಸ್ಥಿತಿ ಏನಾಗಬಾರದು ಸ್ವಲ್ಪವಾದರೂ ಯೋಚನೆ ಮಾಡಿದ್ದೀರಾ??
ತಾವು ಎಸಿ ರೂಮಿನಲ್ಲಿ ಕುಳಿತುಕೊಂಡು ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳಿಗೆ ಮಳೆಯಿಂದ ಸೋರುತ್ತಿರುವ ಕೋಣೆಯಲ್ಲಿ ಕೂಡಿಸುವುದು ಇದು ಯಾವ ನ್ಯಾಯರೀ?
ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಶಾಲೆಗೆ ಭೇಟಿ ನೀಡಿ ಮುಂದೆ ಆಗುವ ಅನಾಹುತಗಳನ್ನು ತಪ್ಪಿಸಿ. ಇಲ್ಲವಾದಲ್ಲಿ ಮುಂದಾಗುವ ಅನಾಹುತಕ್ಕೆ ತಾವೇ ನೇರ ಹೊಣೆಗಾರರಾಗುತ್ತಿರಿ.
ವರದಿ ಮನೋಜ್ ನಿಂಬಾಳ