ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ ಬೊಮ್ಮತನಹಳ್ಳಿ ಗ್ರಾಮದ ಸರ್ವೆ ನಂಬರ್ 180/7 ರಲ್ಲಿರುವ 1 ಎಕರೆ ಜಮೀನಿಗೆ ದಾರಿ ಇದ್ದರೂ ಸಹ ಕಾನೂನು ಬಾಹಿರವಾಗಿ ದೌರ್ಜನ್ಯದಿಂದ ಅಡ್ಡಲಾಗಿ ಫೆನ್ಸಿಂಗ್ ಮಾಡಿದ್ದಾರೆಂದು ಸುದ್ದಿಗಾರೊಂದಿಗೆ ಮಾತನಾಡಿ ಲಕ್ಷ್ಮೀನರಸಪ್ಪ ರವರು ರವಿಂದ್ರ ರೆಡ್ಡಿ ವಿರುದ್ದ ಆರೋಪಿಸಿದ್ದಾರೆ.
ಲಕ್ಷ್ಮೀನರಸಪ್ಪ 28/01/2021 ರಲ್ಲಿ ಜಮೀನಿನ ಮೂಲ ಖಾತೆದಾರರಾದ ವಿಜಯಲಕ್ಷ್ಮೀ ಮಗ ಬಾಬು ಎನ್ನುವವರಿಂದ 1 ಎಕರೆ ಜಮೀನು ಕ್ರಯ ಪಡೆಯುವ ಸಮಯದಲ್ಲಿ ಸರ್ವೆ ನಂ 180/5 ರಲ್ಲಿರುವ 2 ಎಕರೆ ಜಮೀನಿನ ಪೂರ್ವದ ಹದ್ದುಬಸ್ತಿನಲ್ಲಿ 14 ಅಡಿ ದಾರಿ ಬಿಡುವಂತೆ ಕ್ರಯದಲ್ಲಿ ನಮೂದಿಸಿ ಜಮೀನು ಕ್ರಯ ಪಡೆದಿರುತ್ತಾರೆ. ರವೀಂದ್ರ ರೆಡ್ಡಿ ಎನ್ನುವವರು 180/7 ರಲ್ಲಿರುವ 2 ಎಕರೆ ಜಮೀನು ಕ್ರಯ ಮಾಡಿಕೊಂಡು ಇಲ್ಲಾ ಸಲ್ಲದ ಸುಳ್ಳು ಕೇಸುಗಳನ್ನು ನಮ್ಮ ಮೇಲೆ ಹಾಕುತಿದ್ದಾರೆ.ದೌರ್ಜನ್ಯದಿಂದ ದಾರಿಗೆ ಅಡ್ಡಲಾಗಿ ಫೆನ್ಸಿಂಗ್ ಮಾಡಿ ನಮಗೆ ನಮ್ಮ ಜಮೀನಿಗೆ ಹೋಗಲು ದಾರಿ ಬಿಡದೆ ತುಂಬಾ ತೊಂದರೆ ಉಂಟು ಮಾಡುತ್ತಿದ್ದಾರೆಂದು ಲಕ್ಷ್ಮೀನರಸಪ್ಪ ಆರೋಪಿಸಿದ್ದಾರೆ.
ಏನಿದು ಪ್ರಕರಣ: ನಂತರ 180/7 ರ ಜಮೀನನ್ನು ಮೂಲಕ ಖಾತೆದಾರರಾದ ವಿಜಯಲಕ್ಷ್ಮೀ ಮತ್ತು ಬಾಬು ಅವರು ಉಳಿದ 2 ಎಕರೆ ಜಮೀನು ಮುತ್ತುರಾಯಪ್ಪ ರವರಿಗೆ ಕ್ರಯ ಮಾಡಿಕೊಂಡಿದ್ದಾರೆ. ಇವರಿಂದ ನಮಗೆ ಸಮಸ್ಯೆ ಆಗಿಲ್ಲ ಮೂರನೇ ಪಾರ್ಟಿಯಾಗಿ ರವೇಂದ್ರ ರೆಡ್ಡಿಯವರು ಮುತ್ತಾರಾಯಪ್ಪ ನವರ ಬಳಿ 08/04/2022 ರಂದು 180/7 ರ 2 ಎಕರೆ ಜಮೀನು ಕ್ರಯ ಪಡೆದ ನಂತರ ದಾರಿ ಸಮಸ್ಯೆಯಾಗಿದೆ.
ಈ ಬಗ್ಗೆ ರಾಜ್ಯ ಕಂದಾಯ ಇಲಾಖೆಯವರಿಗೆ ಮನವಿ ಸಲ್ಲಿಸಲಾಗಿತ್ತು. ಇದರ ಬಗ್ಗೆ ಜಿಲ್ಲಾಧಿಕಾರಿಗಳಿಗೆ ದಾರಿ ದೂರಿನ ಬಗ್ಗೆ ಸಮಸ್ಯೆ ಸರಿಪಡಿಸುವಂತೆ ಪತ್ರ ಬರೆದಿದೆ ಜಿಲ್ಲಾಧಿಕಾರಿಗಳಿಂದ ಪಾವಗಡ ತಹಶೀಲ್ದಾರ್ ವರಿಗೆ ಈ ಬಗ್ಗೆ ಪತ್ರ ಬಂದಿದೆ. ತಹಶೀಲ್ದಾರ್ ರವರು ಸ್ಥಳ ಪರಿಶೀಲನೆ ಮಾಡಿ ಸರ್ವೆ ನಂ 180/5 ರ ಜಮೀನಿಗೆ ಹೋಗಲು ನಕ್ಷೇ ಕೂಡ ತಯಾರಿ ಆದೇಶ ಮಾಡಿದ್ದರು. ನಂತರ ರಾಜಕೀಯ ಒತ್ತಡದಿಂದ ಕೋರ್ಟಿನಲ್ಲಿ ಕೇಸ್ ನಡಿತಿದೆ ಎಂದು ಆದೇಶವನ್ನು ಹಿಂಡೆಯುವಾಗ ಜಮೀನನಲ್ಲಿ ಯಥಾ ಸ್ಥಿತಿ ಕಾಪಾಡಿಕೊಳ್ಳುಲು ಆದೇಶ ಹಿಂಡೆದಿರುವುದರಲ್ಲಿ ನಮೂದಿಸಿದ್ದಾರೆ. ಆದರೆ ರವೀಂದ್ರೆ ರೆಡ್ಡಿ ರವರು ಏಕಾಏಕಿ ಕಾನೂನು ಬಾಹಿರವಾಗಿ ದೌರ್ಜನ್ಯದಿಂದ ಜಮೀನಿಗೆ ಹೋಗಲು ದಾರಿ ಬಿಡದೆ ದಾರಿಗೆ ಅಡ್ಡಲಾಗಿ ಕಲ್ಲು ಮುಳ್ಳು ತಂತಿ ಹಾಕಿ ತುಂಬಾ ತೊಂದರೆ ಉಂಟು ಮಾಡುತ್ತಿದ್ದಾರೆಂದು ಲಕ್ಷ್ಮೀನರಸಪ್ಪ, ನಲ್ಲಪ್ಪಾ ಆರೋಪಿಸಿದ್ದಾರೆ.
ವರದಿ :ಕೆ.ಮಾರುತಿ ಮುರಳಿ