ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಶರಣಬಸವೇಶ್ವರ ಪುರಾಣ ಮಂಗಲೋತ್ಸವ, ಸಾಮೂಹಿಕ ವಿವಾಹ

ಗದಗ ಜಿಲ್ಲಾ ರೋಣ ತಾಲೂಕ ಮಲ್ಲಾಪೂರ ಗ್ರಾಮದ ಕದಳಿ ಮಠದಲ್ಲಿ ಶರಣಬಸವೇಶ್ವರ ಪುರಾಣ ಮಂಗಲೋತ್ಸವ ಹಾಗೂ ಉಚಿತ ಸರ್ವಧರ್ಮ ಸಾಮೂಹಿಕ ವಿವಾಹ ದಿ.04-09-2024 ರಂದು ಬುಧವಾರ ಜರುಗಿತು. ಮುಂಜಾನೆ 6.00 ಗಂಟೆಗೆ ರುದ್ರಾಭಿಷೇಕ, 8.00 ಗಂಟೆಗೆ ಕುಂಭಮೇಳ, ಸುಮಂಗಲಿಯರಿಂದ ಆರತಿ, ಶರಣಬಸವೇಶ್ವರ ಭಾವಚಿತ್ರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಿತು.ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಾಜಿ ಶಾಸಕರಾದ ಬಿ.ಆರ್.ಯಾವಗಲ್ಲ ರವರು ಮಾತನಾಡಿ ಉಚಿತ ಸಾಮೂಹಿಕ ವಿವಾಹವನ್ನು ಮಾಡುವುದರಿಂದ ಅನಗತ್ಯ ಖರ್ಚನ್ನು ತಡೆದು ಆರ್ಥಿಕ ಮಿತವ್ಯಯ ಸಾಧಿಸಬಹುದು ಎಂದು ತಿಳಿಸಿದರು. ಸರ್ವರೂ ಕೂಡಿ ಇಂತಹ ಕಾರ್ಯ ಮಾಡುವುದರಿಂದ ಸಮಾಜದಲ್ಲಿ ಸಾಮರಸ್ಯ ನೆಲೆಯೂರಲು ಸಾಧ್ಯ ಎಂದು ಹೇಳಿದರು.ಸಾನಿಧ್ಯ ವಹಿಸಿದ್ದ ಸಿದ್ದರಾಮ ದೇವರು ಶಾಖಾಮಠ ಶಿವಯೋಗಮಂದಿರ ನಿಡಗುಂದಿಕೊಪ್ಪ ಪೂಜ್ಯರು ಇಂದಿನ ಆಧುನಿಕ ತಂತ್ರಜ್ಞಾನ ಯುಗದಲ್ಲಿ ಉಚಿತ ಸಾಮೂಹಿಕ ವಿವಾಹದಲ್ಲಿ ಸಾಮಜದಲ್ಲಿ ಭಾವೈಕ್ಯತೆ ಮೂಡಲು ಸಾಧ್ಯವಾಗುತ್ತದೆ ಹಾಗೂ ಜನರಲ್ಲಿ ಸೇವಾ ಮನೋಭಾವನೆ ಮೂಡುತ್ತದೆ. ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನೆಹರು ಕಂಬಳಿ, ಶಂಕರ ಕಳಿಗೋಣ್ಣವರ, ಗುರುಮಲ್ಲಯ್ಯ ಪುರಾಣಿಕಮಠ, ಬಸಯ್ಯ ಶಾಸ್ತ್ರಿ ಭಿಕ್ಷಾವತಿಮಠ, ಶಂಕ್ರಯ್ಯ ಹಿರೇಮಠ, ಗ್ರಾ.ಪಂ ಅಧ್ಯಕ್ಷರಾದ ಎಚ್ ವಾಯ್ ಹುಲ್ಲೂರ, ಉಪಾಧ್ಯಕ್ಷರು ಕರೆವ್ವ ಚಲವಾದಿ, ರಾಜಶೇSರಯ್ಯ ಪುರಾಣಿಕಮಠ, ಮಹೇಶ ಸತ್ತಿಗೇರಿ, ಶರಣಪ್ಪ ರಬ್ಬನಗೌಡ, ಎಸ್ ಎಸ್ ಅರಹುಣಸಿ, ಮುತ್ತಪ್ಪ ಉಗಲಾಟ, ಬಸವಂತಪ್ಪ ಶಿರೋಳ, ಸಿದ್ದು ಸತ್ತಿಗೇರಿ ಮುಂತಾದವರು ಉಪಸ್ಥಿತರಿದ್ದರು.

ವರದಿ ನಿಂಗರಾಜ ತಾಳಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ