ಕಲಬುರಗಿ: ಜೇವರ್ಗಿ ಆರಕ್ಷಕ ಠಾಣೆ ವತಿಯಿಂದ ಗೌರಿ-ಗಣೇಶ ಹಾಗೂ ಈದ್ ಮಿಲಾದ ಹಬ್ಬದ ಪ್ರಯುಕ್ತ ಆರಕ್ಷಕ ಕಛೇರಿ ಆವರಣದಲ್ಲಿ “ಶಾಂತಿ ಸಭೆ” ಹಮ್ಮಿಕೊಳ್ಳಲಾಯಿತು.
ಸಭೆಯ ಅಧ್ಯಕ್ಷ ಸ್ಥಾನ ವಹಿಸಿದ ಸಹಾಯಕ ಪೊಲೀಸ್ ಆಯುಕ್ತರಾದ (ACP) ಬಿಂದುಮಣಿ ಅವರು ಸರ್ಕಾರದ ಮುಖ್ಯ ಮಾರ್ಗಸೂಚಿಗಳಾದ ಗಣೇಶ ಮೂರ್ತಿ ಪ್ರತಿಸ್ಥಾಪನೆ ಮಾಡಬೇಕಾದರೆ ಮೊದಲು ಅನುಮತಿ ಪಡೆದುಕೊಳ್ಳಬೇಕು,ಮಣ್ಣಿನಿಂದ ಮಾಡಿದ ಗಣೇಶನನ್ನು ಪ್ರತಿಸ್ಥಾಪನೆ ಮಾಡಬೇಕು,ಯಾವುದೇ ರೀತಿಯಾದ ಕೋಮು-ಗಲಭೆಗಳಾಗದ ಹಾಗೆ ಶಾಂತಿಯುತವಾಗಿ ಮೂರ್ತಿ ಪ್ರತಿಸ್ಥಾಪನೆ ಮಾಡಬೇಕು ನಂತರ ವಿಸರ್ಜನೆ ಮಾಡುವ ದಿನ ಯಾವುದೇ ರೀತಿ ಅಹಿತಕರ ಘಟನೆ ನಡೆಯದಂತೆ, ನಿಯಮಗಳನ್ನು ಮೀರದೆ ವಿಸರ್ಜನೆ ಮಾಡಬೇಕು ಮತ್ತು ಮೂರ್ತಿ ಪ್ರತಿಷ್ಠಾಪನೆ ಮಾಡುವಾಗ ಮತ್ತು ವಿಸರ್ಜನೆ ಮಾಡುವ ದಿನಗಳಲ್ಲಿ ಏನಾದರೂ ಸಹಾಯ ಅಥವಾ ಮೂಲಭೂತ ಸೌಕರ್ಯಗಳನ್ನು ಪಡೆಯಲು ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಂದ ಕೇಳಿ ಪಡೆಯಬಹುದು ಎಂದು ಸವಿವರವಾಗಿ ಹೇಳಿದರು.
ಇದೇ ಸಂದರ್ಭದಲ್ಲಿ ವೃತ್ತ ಪೊಲೀಸ್ ನೀರಿಕ್ಷಕ (CPI) ರವರಾದ ರಾಜೇಸಾಬ್ ನದಾಫ್ ಸರ್ ರವರು ಗಣೇಶ ಮಂಡಳಿಯವರಿಗೆ ಹಾಗೂ ಸಾರ್ವಜನಿಕರಿಗೆ ಸರ್ಕಾರದ ನೀತಿ- ನಿಯಮಗಳನ್ನು ಅನುಸರಿಸಬೇಕು ಮತ್ತು ಬೇರೆ -ಬೇರೆ ಜಿಲ್ಲೆ ಮತ್ತು ರಾಜ್ಯಗಳ ಹಾಗೆ ನಮ್ಮ ಜೇವರ್ಗಿಯಲ್ಲೂ ಶಾಂತಿಯುತವಾಗ,ಅರ್ಥಪೂರ್ಣವಾಗಿ, ನಿಯಮಬದ್ದವಾಗಿ ಆಚರಿಸೋಣ ಎಂದು ಹೇಳಿದರು.ಶಾಂತಿ ಸಭೆಯಲ್ಲಿ ವಿವಿಧ ಸಂಘಟನಾ ಅಧ್ಯಕ್ಷರನ್ನು,ಗಣೇಶ ಮಂಡಳಿಯವರ,ಸಾರ್ವಜನಿಕರ ಅಭಿಪ್ರಾಯ ಮತ್ತು ಹೇಳಿಕೆಗಳನ್ನು ಆಲಿಸಿದರು.ನಿರೂಪಣೆಯನ್ನು ಶ್ರೀ ಗಜಾನಂದ ಪೊಲೀಸ್ ಉಪ ನಿರೀಕ್ಷಕ(PSI)ರವರಾದ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.
ಶಾಂತಿ ಸಭೆಯಲ್ಲಿ ಆರಕ್ಷಕ ಸಿಬ್ಬಂದಿ ವರ್ಗದವರು,ವಿವಿಧ ಸಂಘಟನೆಗಳ ಅಧ್ಯಕ್ಷರು,ಪದಾಧಿಕಾರಿಗಳು,ಗಣೇಶ ಯುವಕ ಮಂಡಳಿಯವರು,ಸಾರ್ವಜನಿಕರು,ಪತ್ರಕರ್ತರು ಹಾಗೂ ಇತರರಿದ್ದರು.
ವರದಿ: ಚಂದ್ರಶೇಖರ ಪಾಟೀಲ್(ಜೇವರ್ಗಿ)