ರಾಯಚೂರು:ಇಂದು ಬೆಳಿಗ್ಗೆ ಮಾನ್ವಿ ತಾಲೂಕಿನ ಕಪಗಲ್ ಗ್ರಾಮದ ಹತ್ತಿರ ಶಾಲೆಯ ವಿದ್ಯಾರ್ಥಿಗಳನ್ನು ತುಂಬಿದ ಬಸ್ಸು ಹಾಗೂ ಸರ್ಕಾರಿ ಬಸ್ಸು ಗಳ ಮಧ್ಯೆ ನಡೆದ ಅಪಘಾತಕ್ಕೆ ಇಬ್ಬರು ವಿದ್ಯಾರ್ಥಿಗಳ ಸಾವುಗಳಾಗಿರುವುದು ಮನಸ್ಸಿಗೆ ಬಹಳ ನೋವು ತಂದಿದೆ ಇನ್ನುಳಿದ ವಿದ್ಯಾರ್ಥಿಗಳು ಗಾಯಗಳೊಂದಿಗೆ ರಾಯಚೂರಿನ ರಿಮ್ಸ್ ಆಸ್ಪತ್ರೆಯಲ್ಲಿ ದಾಖಲಾಗಿರುವುದು ಚಿಕಿತ್ಸೆ ನಡೆಯುತ್ತಿದೆ. ಇದು ತುಂಬಾ ದುಃಖದ ವಿಷಯ! ಮತ್ತು
ದುರಂತ ಸಾವಿಗೀಡಾದ ಮಕ್ಕಳ ಆತ್ಮಕ್ಕೆ ಶಾಂತಿ ಸಿಗಲಿ ಮತ್ತು ಗಾಯಾಳುಗಳಿಗೆ ಶೀಘ್ರ ಸ್ವಾಸ್ಥ್ಯ ಸಿಗಲಿ ಹಾಗೂ ಪಾಲಕರಿಗೆ ದುಃಖವನ್ನು ಭರಿಸುವ ಶಕ್ತಿಯನ್ನು ಆ ಪರಮಾತ್ಮ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಜವಳಗೇರೆಯಿಂದ ಮಾನ್ವಿ ಮುಖಾಂತರ ರಾಯಚೂರು ವರೆಗೆ ರಸ್ತೆ ತುಂಬಾ ಹದಗಟ್ಟಿದೆ ಹೊಸ ರಸ್ತೆ ನಿರ್ಮಾಣದ ನೆಪವಾಗಿ ಹಳೆಯ ರಸ್ತೆ ತಗ್ಗು ಗುಂಡಿಗಳಿಂದ ಕೂಡಿದ್ದು ಗುಂಡಿಗಳನ್ನ ಮುಚ್ಚದೆ ಪ್ಯಾಚ್ ವರ್ಕ್ ಮಾಡದೆ ಹಾಗೆಯೇ ರಸ್ತೆ ಕಾಮಗಾರಿ ಮುಂದುವರೆದಿರುವುದು ಈ ಅಪಘಾತಕ್ಕೆ ಕಾರಣವಾಗಿದೆ ಎಂದು ಅಪಘಾತ ಸ್ಥಳ ತೋರಿಸಿಕೊಡುತ್ತಿದೆ ಸಂಬಂಧ ಪಟ್ಟ ಅಧಿಕಾರಿಗಳು ಈ ಕಡೆ ಗಮನ ಕೊಟ್ಟು ರಸ್ತೆ ದುರಸ್ತಿಗೊಳಿಸಿ ಇಂತಹ ದುರ್ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕು ಸಾವುಗೀಡಾದ ವಿದ್ಯಾರ್ಥಿಗಳ ಕುಟುಂಬಸ್ಥರಿಗೆ ಮತ್ತು ಗಾಯಾಳುಗಳ ಕುಟುಂಬಸ್ಥರಿಗೆ ಸರಕಾರ ಪರಿಹಾರ ನೀಡಬೇಕು ಮತ್ತು ವಿದ್ಯಾರ್ಥಿಗಳ ಚಿಕಿತ್ಸೆಗೆ ಉತ್ತಮ ವ್ಯವಸ್ಥೆ ಮಾಡಬೇಕು ಎಂದು ವೆಲ್ಫೇರ್ ಪಾರ್ಟಿ ಆಗ್ರಹಿಸುತ್ತದೆ ಜೊತೆಗೆ ಬಸ್ಸು ಚಾಲಕರ ಅಟ್ಟಹಾಸಕ್ಕೆ ಖಂಡನೆಯೊಂದಿಗೆ ವಾಹನದ ಚಾಲಕನದು ತಪ್ಪಾ ಅಥವಾ ಸರಕಾರಿ ಬಸ್ ಚಾಲಕನದು ತಪ್ಪಾ ಅಂದ್ರೆ?
ಪ್ರತ್ಯಕ್ಷದರ್ಶಿಗಳು ಮಾತ್ರ ಹೇಳಬಲ್ಲರು ಆದರೆ ಕರ್ನಾಟಕ ರಸ್ತೆ ಸಾರಿಗೆ ಬಸ್ಸುಗಳನ್ನು ಚಾಲಕರು ಮನಸೋ ಇಚ್ಛೆ ಓಡಿಸುತ್ತಿದ್ದಾರೆ, ಬಹುತೇಕ ಇಂತಹ ವಿಷಯಗಳಲ್ಲಿ ರಸ್ತೆ ಸಾರಿಗೆ ವಾಹನಗಳ ಚಾಲಕರದೇ ತಪ್ಪಿರುತ್ತದೆ ಎಂದು ನಮ್ಮ ಭಾವನೆ! ಅವರಿಗೆ ಯಾರದೇ ಜೀವದ ಹಂಗೇ ಇಲ್ಲ! ರಸ್ತೆಗಳು ಅವರಿಗಾಗಿ ಮಾತ್ರ ಇವೆ ಎನ್ನುವ ರೀತಿಯಲ್ಲಿ ಬಸ್ಸುಗಳನ್ನು ಚಾಲನೆ ಮಾಡುತ್ತಿದ್ದಾರೆ! ಹಲವಾರು ದುರಂತಗಳು ಕೇವಲ ಅವರ ಒಂದು ನಿರ್ಲಕ್ಷ್ಯ ದಿಂದ ಮಾತ್ರ ಆಗಿವೆ.
ಅವರಿಗೆ ಎಷ್ಟೇ ಸಮಯದ ಒತ್ತಡವಿರಲಿ ಪಾದಾಚಾರಿಗಳನ್ನು ದ್ವಿಚಕ್ರ ವಾಹನದ ಸವಾರರನ್ನು ಆಟೋ ಸವಾರರನ್ನು ಗಮನದಲ್ಲಿಟ್ಟುಕೊಂಡು ಮತ್ತು ಶಾಲಾ ವಾಹನಗಳ ಬಗ್ಗೆ ನಿಗಾ ವಹಿಸಿ ಸಾರಿಗೆ ಬಸ್ಸುಗಳನ್ನು ಓಡಿಸಬೇಕಾದ ಜವಾಬ್ದಾರಿ ಅವರ ಮೇಲೆ ಇದೆ.
ಸಂಬಂಧ ಪಟ್ಟ ಅಧಿಕಾರಿಗಳು ನಿಗಾ ವಹಿಸಬೇಕು ಜೊತೆಗೆ ಖಾಸಗಿ ಶಾಲೆಗಳು ತಮ್ಮ ಶಾಲಾ ಬಸ್ಸುಗಳ ಸ್ವಚ್ಛತೆಯ ಬಗ್ಗೆ ಮುನ್ನೆಚ್ಚರಿಕೆ ಕ್ರಮವಹಿಸಿ ಡ್ರೈವರ್ ಗಳನ್ನ ಇಡುವಾಗ ಅವರ ಹಿಂದಿನ ಸಂಪೂರ್ಣ ಮಾಹಿತಿ ತಿಳಿದುಕೊಂಡು ಉತ್ತಮ ಅನುಭವಿ ಡ್ರೈವರ್ ಗಳನ್ನ ಇಡಬೇಕು ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಆಗ್ರಹಿಸುತ್ತದೆ ಎಂದು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.