ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಮೂವರು ಶಿಕ್ಷಕರಿಗೆ ಕಲಾಶಿಸಂ ಪ್ರತಿಷ್ಠಾನದ’ಮಕ್ಕಳ ಸ್ನೇಹಿ ಶಿಕ್ಷಕ’ ಪ್ರಶಸ್ತಿ

ಮುಂಡರಗಿಯ ಕಲಾ ಶಿಕ್ಷಣ ಸಂಸ್ಕೃತಿ ಪ್ರತಿಷ್ಠಾನವು ಶಿಕ್ಷಕ ದಿನಾಚರಣೆಯ ಅಂಗವಾಗಿ ರಾಜ್ಯದ ಮೂರು ಜನ ಶಿಕ್ಷಕರಿಗೆ ,’2024ರ ಮಕ್ಕಳ ಸ್ನೇಹಿ ಶಿಕ್ಷಕ’ ರಾಜ್ಯ ಮಟ್ಟದ ಪ್ರಶಸ್ತಿ ನೀಡಿ ಗೌರವಿಸುತ್ತಿದ್ದು ಶಿವಮೊಗ್ಗದ ಲಕ್ಷ್ಮಿ ಎಸ್., ಗುಲ್ಬರ್ಗಾದ ರವೀಂದ್ರ ರುದ್ರವಾಡಿ, ಗದಗ ಜಿಲ್ಲೆಯ ನಾಗನಗೌಡ ಮೇಟಿ ಆಯ್ಕೆಯಾಗಿದ್ದಾರೆ.ಪ್ರಶಸ್ತಿಯು 5000 ನಗದು ಪುರಸ್ಕಾರದೊಂದಿಗೆ ಪ್ರಶಸ್ತಿ ಫಲಕ ನೀಡಿ ಗೌರವಿಸಲಾಗುವುದೆಂದು ಪ್ರತಿಷ್ಠಾನದ ಅಧ್ಯಕ್ಷ ಡಾ.ನಿಂಗು ಸೊಲಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಯಾವುದೇ ರೀತಿ ಅರ್ಜಿ ಹಾಕಿಸಿಕೊಳ್ಳದೇ ರಾಜ್ಯಾದ್ಯಂತ ಇರುವ ನಮ್ಮ ಗೆಳೆಯರು, ಆಯಾ ಭಾಗದ ಅಧಿಕಾರಿಗಳು, ಶಿಕ್ಷಕರೊಂದಿಗೆ ಮಾತುಕತೆ ನಡೆಸಿ ಮಕ್ಕಳ ಸ್ನೇಹಿಯಾಗಿ ನಾವಿನ್ಯಯುತ ಸೃಜನಾತ್ಮಕ ಪ್ರಯೋಗ, ಚಟುವಟಿಕೆಗಳೊಂದಿಗೆ ಕಾರ್ಯ ಮಾಡುತ್ತಿರುವ ಶಿಕ್ಷಕರನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು ಇದೇ ಸೆಪ್ಟಂಬರ್ 21 ರಂದು ಮುಂಡರಗಿಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ರವೀಂದ್ರ ರುದ್ರವಾಡಿ: ಕಲಬುರ್ಗಿ ಜಿಲ್ಲೆಯ ಆಳಂದ ತಲೂಕಿನ ನಂದಗೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ರವೀಂದ್ರ ರುದ್ರವಾಡಿಯವರು ಶಾಲಾ ಅಂಗಳದಲ್ಲಿ ಪರಿಸರ ಸಂರಕ್ಷಣೆ, ಸಾಹಿತ್ಯ ಮೇಳ, ಪುಸ್ತಕ ಮೇಳ, ದೇಸೀ ಆಹಾರ ಮೇಳ, ವಿಜ್ಞಾನ ಮೇಳ ಹೀಗೆ ಹಲವು ರೀತಿಯ ಸೃಜನಾತ್ಮಕ ಹಾಗೂ ಪ್ರಾಯೋಗಿಕ ಕಾರ್ಯಕ್ರಮಗಳನ್ನು ಸಂಘಟಿಸಿದ್ದಲ್ಲದೇ ಮಕ್ಕಳಲ್ಲಿ ಸೃಜನಾತ್ಮಕ ಬರಹ ಕೌಶಲ ಮೂಡಿಸುವಲ್ಲಿ ನಿರಂತರ ಕಾರ್ಯ ಚಟುವಟಿಕೆಗಳನ್ನು ಅನುಷ್ಠಾನ ಮಾಡುತ್ತ ಬಂದಿದ್ದಾರೆ. ಮಕ್ಕಳ ಬರಹದ ‘ಅಂಕುರ’ ಕವನ ಸಮಕಲನ ಸಮಪಾದಿಸಿ ಪ್ರಕಟಿಸಿದ್ದಾರೆ.

ಲಕ್ಷ್ಮಿ ಎಸ್ : ಲಕ್ಷ್ಮಿಯವರು ಶಿವಮೊಗ್ಗ ಜಿಲ್ಲೆಯ ಭದ್ರಾವತಿಯವರಾಗಿದ್ದು ಸಿರಿಗೆರೆ ಗ್ರಾಮದ ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ರಂಗ ಕಲಾವಿದೆ ನೃತ್ಯ ಹಾಗೂ ಸಂಗೀತ ಕಲಾವಿದೆಯಾಗಿ ಜನಮನ್ನಣೆ ಪಡೆದಿದ್ದು ಮಕ್ಕಳ ಸ್ನೇಹಿಯಾಗಿ ನೃತ್ಯ ಹಾಗೂ ರಂಗ ಚಟುವಟಿಕೆಗಳನ್ನು ರೂಪಿಸಿ ಮಕ್ಕಳಲ್ಲಿ ಭಾಷಾ ಪ್ರೌಢಿಮೆ ಹೆಚ್ಚಿಸಲು ಕಲಾ ಪ್ರತಿಭೆ ಹೊರಹೊಮ್ಮಿಸಲು ನಿರಂತರ ಪ್ರಯತ್ನಿಸುತ್ತ ಬಂದಿದ್ದಾರೆ. ಭಾರತಾಂಬೆ, ಮಾತೆ ಮಂಡೋದರಿ, ಅಂಬೆ, ಕೆಳದಿ ಚೆನ್ನಮ್ಮ, ಉಡುತಡಿ ಮೊದಲಾದ ನಾಟಕಗಳಲ್ಲಿ ಅಭಿನಯಿಸಿ ರಂಗಭೂಮಿಯಲ್ಲೂ ಉತ್ತಮ ಪ್ರತಿಭೆ ಮೆರೆದು ಮಕ್ಕಳ ಸ್ನೇಹಿ ಆದರ್ಶ ಶಿಕ್ಷಕಿಯಾಗಿದ್ದಾರೆ.

ನಾಗನಗೌಡ ಮೇಟಿ: ನಾಗನಗೌಡ ಮೇಟಿಯವರು ಗದಗ ಜಿಲ್ಲೆಯ ಕಣವಿ ಸರಕಾರಿ ಪ್ರೌಢ ಶಾಲೆಯಲ್ಲಿ ಸಮಾವಿಜ್ಞನ ಭೋದಿಸುವ ನಿರಂತರ ಅಧ್ಯನ ಹಾಗೂ ಪ್ರಯೋಗಶೀಲ ಶಿಕ್ಷಕರಾಗಿದ್ದು ಶಾಲೆಯಲ್ಲಿ ವಿದ್ಯಾರ್ಥಿಗಳ ಸ್ವಯಂ ಕಲಿಕೆಗೆ ನೆರವಾಗುವಂತೆ ಸಮಾಜ ವಿಜ್ಞಾನ ಲ್ಯಾಬ್ ನಿರ್ಮಿಸಿಕೊಂಡಿದ್ದಾರೆ. ಶಾಸನಗಳು, ವಾಸ್ತುಸಿಲ್ಪ ಹಾಗೂ ಪ್ರಾಚ್ಯ ವಸ್ತುಗಳ ಅಧ್ಯಯನದಲ್ಲಿ ವಿಶೇಷ ಆಸಕ್ತಿ ಮತ್ತು ಪ್ರಯೋಗಶೀಲಾಗಿದ್ದು ಎನ್.ಸಿ.ಆರ್.ಟಿ ಹಾಗೂ ಡಿ.ಎಸ್.ಇ. ಆರ್.ಟಿ. ಗಳಿಗೆ ಸಮಾಜವಿಜ್ಞಾನ ವಿಷಯದ ‘ಇ’ ಕಂಟೆಂಟ್ ನಿರ್ಮಾಣದಲ್ಲಿ ತಜ್ಞ ಸಮಪನ್ಮೂಲವ್ಯಕ್ತಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ವಿದ್ಯಾರ್ಥಿಗಲಲ್ಲಿ ಹಾಗೂ ಸಮುದಾಯದಲ್ಲಿ ಮತದಾನ ಸಾಕ್ಷರತೆ ಮೂಡಿಸಲು ಅತ್ಯಂತ ಕ್ರಿಯಾತ್ಮಕ ಚಟುವಟಿಕೆಗಳನ್ನು ರುಪಿಸಿ ಅನುಷ್ಠಾನಗೊಳಿಸಿದ್ದಾರೆ.

ವರದಿ : ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ