ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಡಣಾಪೂರ ಗ್ರಾಮದ ಶರಣಬಸವೇಶ್ವರ ದೇವಸ್ಥಾನದಲ್ಲಿ ಜ್ಞಾನ ಮಿತ್ರ ಟ್ಯೂಷನ್ ಕ್ಲಾಸಸ್ ವತಿಯಿಂದ ಏಳು ದಿನದ ಯೋಗ ಸಪ್ತಾಹ ಶಿಬಿರ
ಹಮ್ಮಿಕೊಳ್ಳಲಾಗಿತ್ತು.
ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಸೇಡಂ ಮತ್ತು ಭಗತ್ ಸಿಂಗ್ ಯೋಗ ಕೇಂದ್ರ ಸಿದ್ದಾಪೂರ ಇವರ ನೇತೃತ್ವದಲ್ಲಿ ವೃಕ್ಷ ರಕ್ಷ ಸೇವಾ ಬಳಗ ಡಣಾಪೂರ ಇವರ ಸಹಯೋಗದಲ್ಲಿ 7 ದಿನದ ಯೋಗ ಸಪ್ತಾಹ ಶಿಬಿರ ಹಮ್ಮಿಕೊಂಡು ಏಳುದಿನಲ್ಲಿ ಶಾಲೆಯ ಮಕ್ಕಳಿಗೆ ಹಾಗೂ ಗ್ರಾಮದವರಿಗೆ ಯೋಗ ಆಸನಗಳು ,ಬಾಡಿ ಎಕ್ಸೈಸುಗಳು ,ಪ್ರಾಣಾಯಾಮ , ಮುದ್ರೆಗಳ ಪ್ರಾಣಾಯಾಮ ಯೋಗದ ಪರಿಚಯ ಯೋಗದಿಂದ ಅನುಕೂಲಗಳ ಬಗ್ಗೆ ಸವಿಸ್ಥಾರವಾಗಿ ಏಳು ದಿನದ ಶಿಬಿರದಲ್ಲಿ ತಿಳಿಸಲಾಯಿತು.
ಸೋಮವಾರಕ್ಕೆ ಏಳು ದಿನದ ಕಾರ್ಯಕ್ರಮವನ್ನು ಅಮ್ಮಿಕೊಂಡು ಭಾಗಿಯಾದ ಮಕ್ಕಳಿಗೆ ಸರ್ಟಿಫಿಕೇಟ್ ವಿತರಣೆ ಮಾಡಲಾಯಿತು.
ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ,ಮರಿಸ್ವಾಮಿ ಕೆ ಭಗತ್ ಸಿಂಗ್ ಯೋಗ ಕೇಂದ್ರ ಸಿದ್ದಾಪೂರ ಅವರು ವಹಿಸಿಕೊಂಡು ಕೊತ್ತಲ ಬಸವೇಶ್ವರ ಸೇಡಂ ಅವರು ಭಾರತಿಯ ಸಂಸ್ಕೃತ ಉತ್ಸವದ ಕಾರ್ಯಕ್ರಮದ ಬಗ್ಗೆ ಬಗ್ಗೆ ಮಕ್ಕಳಿಗೆ ತಿಳಿಸಿದರು ಹಾಗೂ ಯೋಗದ ಮಹತ್ವ ಮತ್ತು ಜೀವನದಲ್ಲಿ ನಿತ್ಯ ಅಳವಡಿಸಿಕೊಳ್ಳುವುದರಿಂದ ನಮಗೆ ರೋಗಗಳು ದೂರವಾಗುತ್ತವೆ ,ದೇಹ ಮತ್ತು ಮನಸನ್ನು ಕೇಂದ್ರೀಕೃತ ಮಾಡಿಕೊಳ್ಳಲು ಸಹಕಾರಿಯಾಗಲಿದೆ ,ಧ್ಯಾನ ಇನ್ನಿತರ ಸರಳ ಆಸನಗಳನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದರು.
ಈ ಸಂದರ್ಭದಲ್ಲಿ ನಮ್ಮ ದೇಶದ ಪ್ರತಿನಿಧಿಯಾಗಿ ಶ್ರೀಲಂಕಾದಲ್ಲಿ ಭಾಗಿಯಾಗಿ ಶ್ರೀಲಂಕಾದಲ್ಲಿ ನಡೆದ ಯೋಗ ಸಮ್ಮೇಳನದಲ್ಲಿ ಯೋಗ ಪ್ರದರ್ಶನ ಮಾಡಿದ ಮರಿಸ್ವಾಮಿ ಕೆ ಅವರಿಗೆ ವೃಕ್ಷ ರಕ್ಷ ಯೋಗ ಬಳಗದಿಂದ ಗೌರವ ಪೂರ್ವಕ ಸನ್ಮಾನ ಮಾಡಲಾಯಿತು.
ಈ ವೇಳೆಯಲ್ಲಿ ಮುಖ್ಯ ಅಥಿತಿಗಳಾದ ಯೋಗ ಸಾಧಕರಾದ ಮರಿಸ್ವಾಮಿ. ಕೆ ಸಿದ್ದಾಪೂರ ಹಾಗೂ ನಿತ್ಯ ಯೋಗ ನಡೆಸಿಕೊಟ್ಟ ಬಸವರಾಜ ,ರಾಘವೇಂದ್ರ ಹನುಮೇಶ ಭಾವಿಕಟ್ಟಿ, ಯೋಗ ಶಿಕ್ಷಕರು ಹಾಗೂ ಮುತ್ತುರಾಜ ,ಬಸವರಾಜ ವಿದ್ಯಾರ್ಥಿಗಳು ಉಪಸ್ಥಿತಿ ಇದ್ದರು.