ಶಿವಮೊಗ್ಗ: ಪಂಚಾಯತ್ ರಾಜ್ ಇಲಾಖೆ ಭಾರತ ಸರ್ಕಾರ ಕಮ್ಯುನಿಟಿ ರೇಡಿಯೋ ಅಸೋಸಿಯೇಷನ್ ಹಾಗೂ ರೇಡಿಯೋ ಶಿವಮೊಗ್ಗ ಸಹಯೋಗದಲ್ಲಿ ನಡೆಯುತ್ತಿರುವ ಜನತಾ ಜಾಗೃತಿ ಅಂಗವಾಗಿ ನೈರ್ಮಲ್ಯ ಗ್ರಾಮ ಪಂಚಾಯ್ತಿಯ ಕುರಿತಾದ ಕಾರ್ಯಕ್ರಮ ಸೆ.12ರಂದು ಪ್ರಸಾರವಾಯಿತು. ಇದೇ ಕಾರ್ಯಕ್ರಮ ಸೆ.14ರಂದು ಮಧ್ಯಾಹ್ನ 3ಕ್ಕೆ ಮರುಪ್ರಸಾರವಾಗಲಿದೆ.
ಶಿವಮೊಗ್ಗ ಜಿಲ್ಲೆಯ, ಶಿವಮೊಗ್ಗ ತಾಲೂಕಿನ ಅಬ್ಬಲಗೆರೆ ಗ್ರಾಮ ಪಂಚಾಯಿತಿಯಲ್ಲಿ ಜನತಾ ಜಾಗೃತಿ ಕಾರ್ಯಕ್ರಮ ನಡೆಸಲಾಯಿತು. ರೇಡಿಯೋ ಶಿವಮೊಗ್ಗ ಇದನ್ನು ಆಯೋಜಿಸಿತ್ತು.
ರೇಡಿಯೋದಲ್ಲಿ ಪ್ರಸಾರವಾಗುತ್ತಿರುವ ಕಾರ್ಯಕ್ರಮಗಳು, ಅದರಲ್ಲೂ ವಿಶೇಷವಾಗಿ ಜನತಾ ಜಾಗೃತಿ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಲಾಯಿತು. ಜನತಾ ಜಾಗೃತಿಯಲ್ಲಿ ಇದುವರೆಗೂ ಪ್ರಸಾರವಾದ ಕಾರ್ಯಕ್ರಮಗಳು, ಅದರ ವಿವರಣೆ ನೀಡಲಾಯಿತು. ಜನತಾ ಜಾಗೃತಿ ಕಾರ್ಯಕ್ರಮದ ಉದ್ದೇಶ, ಗ್ರಾಮ ಪಂಚಾಯ್ತಿಗಳ ಸಶಕ್ತೀಕರಣ, ಸುಸ್ಥಿರ ಪ್ರಗತಿಗೆ ಪೂರಕವಾಗುವ ಅನೇಕ ಅಂಶಗಳನ್ನು ಚರ್ಚಿಸಲಾಯಿತು. ಗ್ರಾಮಸ್ಥರು ಹಾಗೂ ಗ್ರಾಮ ಪಂಚಾಯ್ತಿಯ ಸದಸ್ಯರು ತಮ್ಮ ಅಮೂಲ್ಯ ಸಲಹೆಗಳನ್ನು ನೀಡಿದರು.
ಒಟ್ಟಾರೆ ಈ ಕಾರ್ಯಕ್ರಮದ ಮುಖ್ಯ ಉದ್ದೇಶ ಜನಜಾಗೃತಿ ಮೂಡಿಸುವ ಕಾರ್ಯಕ್ರಮವಾಗಿದೆ. ಇಂತಹ ಕಾರ್ಯಕ್ರಮ ಅಗತ್ಯವಿತ್ತು ಎಂದು ತಿಳಿಸಿದ ಜನರು ಜನತಾ ಜಾಗೃತಿ ಕಾರ್ಯಕ್ರಮದ ಉದ್ದೇಶವನ್ನು ಶ್ಲಾಘಿಸಿದರು. ಪಂಚಾಯತ್ ರಾಜ್ ಇಲಾಖೆ ಭಾರತ ಸರ್ಕಾರ ಕಮ್ಯುನಿಟಿ ರೇಡಿಯೋ ಅಸೋಸಿಯೇಷನ್ ಹಾಗೂ ರೇಡಿಯೋ ಶಿವಮೊಗ್ಗ ಈ ಪ್ರಯತ್ನ ನಮ್ಮೆಲ್ಲರ ಸಹಕಾರವಿರಲಿದೆ ಎಂದರು.
ಈ ಜನತಾ ಜಾಗೃತಿ ಕಾರ್ಯಕ್ರಮದಲ್ಲಿ ಅಬ್ಬಲಗೆರೆ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹೆಚ್.ರಾಜಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪಾಧ್ಯಕ್ಷ ರಾಜಶೇಖರಪ್ಪ ಕೆಲವು ಸಲಹೆ ನೀಡಿದರು ಅಬ್ಬಲಗೆರೆಯ ಗ್ರಾಮಸ್ಥರು ಜನಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ರೇಡಿಯೋ ಶಿವಮೊಗ್ಗದ ಸಂಯೋಜಕ ಗುರುಪ್ರಸಾದ್ ಕಾರ್ಯಕ್ರಮದ ಮುಖ್ಯ ಉದ್ದೇಶದ ಬಗ್ಗೆ ಮಾತನಾಡಿದರು ರೇಡಿಯೋ ಶಿವಮೊಗ್ಗದ ಆರ್ ಜೆ ಶ್ರೀಧರ್ ಆರೋಗ್ಯದ ಕುರಿತು ಗ್ರಾಮಸ್ಥರಿಗೆ ಸಲಹೆ ನೀಡಿದರು. ಆರ್ ಜೆ ಮಹಾಲಕ್ಷ್ಮೀ ಸ್ವಾಗತಿಸಿ, ವಂದಿಸಿದರು.
ನೈರ್ಮಲ್ಯ ಗ್ರಾಮ ಪಂಚಾಯ್ತಿಯ ಕುರಿತಾದ ಕಾರ್ಯಕ್ರಮ ಸೆ.14ರಂದು ಮಧ್ಯಾಹ್ನ 3ಕ್ಕೆ ಮರುಪ್ರಸಾರವಾಗಲಿದ್ದು, ನಿಮ್ಮ ಮೊಬೈಲ್ ಗಳಲ್ಲೇ ಕೇಳಬಹುದಾಗಿದೆ. ಈ ಜನತಾ ಜಾಗೃತಿ ಕಾರ್ಯಕ್ರಮದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಗ್ರಾಮ ಪಂಚಾಯ್ತಿಗಳು 72591 76279 ಈ ಸಂಖ್ಯೆಗೆ ಸಂಪರ್ಕಿಸಬಹುದು.
ಪರಿಸರ ಅಧ್ಯಯನ ಕೇಂದ್ರ, ಕೊಡಚಾದ್ರಿ ಇಂಟಿಗ್ರೆಟೆಡ್ ಡೆವೆಲೆಪ್ಮೆಂಟ್ ಸೊಸೈಟಿ (ಕಿಡ್ಸ್) ಸಂಸ್ಥೆಗಳು ಈ ಕಾರ್ಯಕ್ರಮಕ್ಕೆ ಸಹಕರಿಸಿವೆ. ರೇಡಿಯೋ ಶಿವಮೊಗ್ಗ ಆಪ್ ನ್ನು ಗೂಗಲ್ ಪ್ಲೇ ಸ್ಟೋರ್ ಅಥವಾ ಆಪಲ್ ಸ್ಟೋರ್ ಗಳ ಮುಖಾಂತರ ಡೌನ್ಲೋಡ್ ಮಾಡಿಕೊಂಡು, ದಿನದ 24 ಗಂಟೆಗಳ ಪ್ರಸಾರವನ್ನು ಆನಂದಿಸಬಹುದು ಎಂದು ರೇಡಿಯೋ ಶಿವಮೊಗ್ಗದ ನಿಲಯ ನಿರ್ದೇಶಕ ಜಿ.ಎಲ್. ಜನಾರ್ದನ್ ಕೋರಿರುತ್ತಾರೆ.
ವರದಿ : ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ