ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಗುಡೂರ ಎಸ್ ಎನ್ ಗ್ರಾಮದ ಹಲವಾರು ಸಮಸ್ಯೆಗಳ ಪೈಕಿ ಮುಖ್ಯವಾದ ಸಮಸ್ಯೆ ಎಂದರೆ ಬಸ್ ಬಾರದ ಊರು. ಕರುನಾಡ ಕಂದ ಪತ್ರಿಕೆಯ ಸೆಪ್ಟೆಂಬರ್ ೧,೨೦೨೪ ರ ಸಂಚಿಕೆಯಲ್ಲಿ ” ಬಸ್ ಕಾಣದ ನಮ್ಮೂರು.. ಬರೋದು ಹೇಗೆ ಬೀಗರು…?ಎಂಬ ಶೀರ್ಷಿಕೆಯಡಿ ವರದಿ ಪ್ರಕಟಗೊಂಡಿರುವುದನ್ನು ಗಮನಿಸಿ ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳಾದ ಡಿಟಿಓ ರವೀಂದ್ರ ಡಿಗ್ಗಿ,ಡಿ.ಸಿ ಗಂಗಾಧರ್ ,ಕಲಬುರಗಿ ಡಿ ಎಮ್ ಕೃಷ್ಣ ದೊಡಮನಿ, ಜೇವರ್ಗಿ ತಾಲೂಕಿನ ಶಾಸಕರು,ಕೆ.ಕೆ.ಆರ್.ಡಿ.ಬಿ ಅಧ್ಯಕ್ಷರಾದ ಡಾ. ಅಜಯ್ ಸಿಂಗ್ ರವರು ಗ್ರಾಮಕ್ಕೆ ಬಸ್ ಇಲ್ಲದೆ ಇರುವುದರಿಂದ ಆಗಿರುವ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಗ್ರಾಮಕ್ಕೆ ಬಸ್ ವ್ಯವಸ್ಥೆಯನ್ನು ಕಲ್ಪಿಸಿದ್ದಾರೆ.
ದಿನಾಂಕ ೧೪-೦೯-೨೦೨೪ ರಂದು ಗ್ರಾಮಕ್ಕೆ ಆಗಮಿಸಿ, ಗ್ರಾಮದ ಸರ್ವ ಸದಸ್ಯರೆಲ್ಲರೂ ಪೂಜೆ ಮತ್ತು ಪುನಸ್ಕಾರಗಳನ್ನು ಮಾಡಿ ಸುಮಾರು 30 ರಿಂದ 40 ಜನ ಗುಡೂರು ಎಸ್ ಎನ್ ದಿಂದ ನೇದಲಗಿ ವರೆಗೆ ಪ್ರಯಾಣವನ್ನು ಮಾಡುವ ಮೂಲಕ ಚಾಲನೆ ನೀಡಿದರು.
ಈ ಹಿಂದೆ ಗ್ರಾಮಕ್ಕೆ ಜೇವರ್ಗಿ ಡಿಪೋ ಮ್ಯಾನೇಜರ್ ಜೆಟ್ಟೆಪ್ಪ ದೊಡಮನಿ ರವರು ಆಗಮಿಸಿ ರಸ್ತೆಯನ್ನು ಸರ್ವೇ ಮಾಡಿ ಕೆಲವು ಸಲಹೆ ಸೂಚನೆಗಳನ್ನು ತಿಳಿಸಿದ್ದಾರೆ. ಮುಖ್ಯವಾಗಿ ಬಸ್ ಪ್ರಯಾಣದ ಮಾರ್ಗ ಮತ್ತು ಸಮಯವನ್ನು ನೇದಲಗಿಯಿಂದ ಬೆಳಿಗ್ಗೆ 7:30 ನಿಮಿಷಕ್ಕೆ ಆಗಮಿಸಿ ಮುರಗಾನೂರ ಮತ್ತು ಗುಡೂರ ಎಸ್ ಎನ್ ಗೆ ವ್ಹಾಯಾ ಮಾಡಿಕೊಂಡು ಪುನಃ ಜೇವರ್ಗಿಗೆ ತಲುಪಿ ಸಾಯಂಕಾಲ 6:30 ಕ್ಕೆ ಮತ್ತೆ ನೇದಲಗಿಯಿಂದ ಎರಡು ಗ್ರಾಮಕ್ಕೆ ವ್ಹಾಯಾ ಮಾಡಿಕೊಂಡು ಜೇವರ್ಗಿಗೆ ತಲುಪುತ್ತದೆ ಎಂದು ಹೇಳಿದರು.
ನಂತರದ ಮುಂದಿನ ದಿನಮಾನಗಳಲ್ಲಿ ಸಮಯದ ಹೊಂದಾಣಿಕೆಯನ್ನು ಸರಿಪಡಿಸಿಕೊಳ್ಳೋಣ ಎಂದು ಹೇಳಿದರು ಈ ಸಂದರ್ಭದಲ್ಲಿ ಗ್ರಾಮಸ್ಥರಾದ ವೇ.ಮೂರ್ತಿ ಶ್ರೀ ಶಿವರುದ್ರಯ್ಯ ಮಠ, ನೀಲಕಂಠಯ್ಯ ಮಠ, ಮಡಿವಾಳಯ್ಯ ಮಠ,ಸುದರ್ಶನ ಹಿರೇಮಠ,ಸಿದ್ದಯ್ಯ ಹಿರೇಮಠ, ಬಸವಂತ್ರಾಯಗೌಡ ಮಾಲಿ ಪಾಟೀಲ್, ಗ್ರಾಮ ಪಂಚಾಯತಿ ಸದಸ್ಯರಾದ ಮಹಾಂತೇಶ್ ಮಾಲಿ ಪಾಟೀಲ್,ಶರಣಗೌಡ ಮಾಲಿ ಪಾಟೀಲ್ ದಳಪತಿ, ರಾಜುಗೌಡ ಪೊಲೀಸ್ ಪಾಟೀಲ್, ಮಾಂತೇಶ್ ಪೊಲೀಸ್ ಪಾಟೀಲ್, ಮಾರುತಿ ಕಡಕೋಳ,ಭಗವಂತ್ರಾಯ ಪಾಟೀಲ್,ಮಾಳಪ್ಪ ಬಸಪ್ಪ ಪೂಜಾರಿ,ರುದ್ರಗೌಡ ಮಾಲಿ ಪಾಟೀಲ್ ,ಮಾಳಪ್ಪ ಪೂಜಾರಿ ಗುರಪ್ಪ,ಉಮೇಶ ಮಾಲಿ ಪಾಟೀಲ್,ರೇವಣಸಿದ್ಧ ಕುಂಬಾರ್,ರಾಜು ಜಾಗಿರದಾರ ಹಾಗೂ ಕೆ.ಎಸ್.ಆರ್.ಟಿ.ಸಿ. ಸಿಬ್ಬಂದಿಗಳು ಜೊತೆಗಿದ್ದರು.
ವರದಿ: ಚಂದ್ರಶಾಗೌಡ ಮಾಲಿ ಪಾಟೀಲ್(ಗುಡೂರ ಎಸ್ ಎನ್)