ಬೀದರ್: ನಗರದ ಶ್ರೀ ವೆಂಕಟೇಶ್ವರ ಶಿಕ್ಷಣ ಸಂಸ್ಥೆ ಸಂಚಾಲಿತ ಸಪ್ತಗಿರಿ ಗ್ರೂಪ್ ಆಫ್ ಇನ್ಸ್ ಟ್ಯೂಷನ್ ವತಿಯಿಂದ ಗಣೇಶ ಉತ್ಸವ ನಿಮಿತ್ಯ ಪೂಜ್ಯ ಚನ್ನಬಸವ ಪಟ್ಟದೇವರು ರಂಗಮಂದಿರದಲ್ಲಿ ಸಾಂಸ್ಕ್ರತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಜಿಲ್ಲೆಯ ಖ್ಯಾತ ಹಾಸ್ಯ ಕಲಾವಿದರಾದ ವೈಜಿನಾಥ ಸಜ್ಜಶೆಟ್ಟಿ ಗಾಯಕಿ ಅಂಜಲಿ ಅವರಿಂದ ಸಂಗೀತ ಗಾಯನ, ತುಕಾರಾಮ ನಾಗುರೆ ಅವರು ಜಾದೂ ಪ್ರದರ್ಶಿಸಿ ಮಕ್ಕಳನ್ನು ರಂಜಿಸಿದರು ಹಾಗೂ
ಶಾಲಾ ಕಾಲೇಜು ವಿದ್ಯಾರ್ಥಿಗಳ ವಿವಿಧ ಕಲಾ ತಂಡಗಳಿಂದ ನಾಟಕ, ನ್ರೃತ್ಯ, ಸಂಗೀತ, ಮಿಮಿಕ್ರಿ, ಸುಳ್ಳು ವಾರ್ತೆ ಹೀಗೆ ಇತರೆ ಪ್ರದರ್ಶನಗಳನ್ನು ಪ್ರಸ್ತುತ ಪಡಿಸಿದರು.
ಈ ಸಂದರ್ಭದಲ್ಲಿ ಕಾಲೇಜಿನ ಹಿರಿಯ ಉಪನ್ಯಾಸಕರಾದ ಅನಿಲಕುಮಾರ ಜಾದವ ಹಾಗೂ ಸಾಗರ ಪಡಸಲೆ ಕಾರ್ಯ ಕ್ಷಮತೆಗಾಗಿ ಅವರಿಗೆ ಸಂಸ್ಥೆಯ ಅಧ್ಯಕ್ಷ ಶ್ರೀನಿವಾಸ್ ಡಿ. ತಾಂದಳೆ, ಕಾರ್ಯದರ್ಶಿ ಶ್ರೀ ಗೋಪಾಲ್ ಡಿ. ತಾಂದಳೆ, ಕಾಲೇಜಿನಲ್ಲಿ ಪ್ರಾಚಾರ್ಯ ಶ್ರೀ ಗೋವಿಂದ ಡಿ. ತಾಂದಳೆ ಅವರು ಶಾಲು ಹೊದಿಸಿ ಸನ್ಮಾನ ಮಾಡಿದರು.
ಸಪ್ತಗಿರಿ ಕಾಲೇಜಿಗೆ ಮೊದ ಮೊದಲು ಸೇರಿದಾಗ ಯಾವಾಗಲಾದರೂ ಮುಗಿಯಿತೋ ಈ ಕಾಲೇಜು ಜೀವನ ಎಂದು ಅನಿಸುತಿತ್ತು ಆದರೆ ದಿನ ಉರುಳಿ ವರ್ಷಗಳು ಕಳೆದು ಅಂತಿಮ ವರ್ಷಕ್ಕೆ ಬಂದಾಗ ಯಾಕಪ್ಪಾ ಇಷ್ಟು ಬೇಗ ಕಾಲೇಜು ಜೀವನ ಮುಗಿಯಿತು ಎಂದೆನಿಸುತ್ತದೆ ಯಾಕಂತ ಹೇಳಿದರೆ ಈ ಸಂಸ್ಥೆ ಬೋಧನೆಯಲ್ಲೂ, ಕ್ರೀಡೆಯಲ್ಲೂ,ಸಾಂಸ್ಕೃತಿಕ ಮನರಂಜನೆಯಲ್ಲೂ ,ಮಕ್ಕಳನ್ನು ಮನರಂಜಿಸುವಲ್ಲಿ ಎತ್ತಿದ ಕೈ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ದಿ.ದಯಾನಂದ ತಾಂದಳೆ ಹಾಗೂ ತಾರಾಬಾಯಿ ತಾಂದಳೆ ಯವರ ಆಶಿರ್ವಾದದಿಂದ ತಾಂದಳೆ ಸಹೊದರು ವಿದ್ಯಾರ್ಥಿ, ಶಿಕ್ಷಕ, ಉಪನ್ಯಾಸಕರನ್ನು ಹುರಿದುಂಬಿಸುತ್ತಾ ,ಪ್ರೋತ್ಸಾಹಿಸುತ್ತಾ ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕಾಗಿ ಹಗಲಿರುಳು ಶ್ರಮಿಸುತ್ತಿರುವುದು ಶ್ಲಾಘನಿಯ, ವರ್ಷದಿಂದ ವರ್ಷಕ್ಕೆ ಒಳ್ಳೆಯ ಫಲಿತಾಂಶ ನೀಡುತ್ತಾ ಸಮಾಜದಲ್ಲಿ ತನ್ನದೆ ಆದ ಸೇವೆ ಸಲ್ಲಿಸುತ್ತಿದೆ ಎಂಬುವುದು ಪೋಷಕರ ಅಭಿಮತವಾಗಿದೆ.
ಈ ಸಂದರ್ಭದಲ್ಲಿ ಉಪನ್ಯಾಸಕರಾದ ಶ್ರೀ ಸಲಾಉದ್ದಿನ, ಕನ್ನಡ ಉಪನ್ಯಸಕರಾದ ಶ್ರೀ ಬಿರೇಶ ಯಾತನೂರ, ಜೀವಶಾಸ್ತ್ರ ಉಪನ್ಯಾಸಕರಾದ ಶ್ರೀ ಡಾ|| ಆಸಿಫ್,ಭೌತಶಾಸ್ತ್ರ ಉಪನ್ಯಾಸಕರಾದ ಶ್ರೀ ಆಸಿಫ್ ಅಲಿ,ರಾಸಾಯನ ಶಾಸ್ತ್ರ ಉಪನ್ಯಾಸಕರಾದ ದತ್ತಾತ್ರಿ ಪಾಟಿಲ್, ಗಣಿತ ಉಪನ್ಯಾಸಕರಾದ ಶ್ರೀ ಚಂದ್ರಕಾಂತ ಝಬಾಡೆ,ಗಣಿತ ಉಪನ್ಯಾಸಕರಾದ ಶ್ರೀ ಗಣೇಶ ರೆಡ್ಡಿ,ರಸಾಯನ ಶಾಸ್ತ್ರ ಉಪನ್ಯಾಸಕಿಯರಾದ ಕು. ಪ್ರಾಜಕ್ತಾ, ಶ್ರೀಮತಿ ಮಮತಾ ಕು. ಏಂಜಲ್ ಅನುಷಾ, ಶ್ರೀ ಬಸವಕಿರಣ, ಶ್ರೀ ನಾಗರಾಜ , ಶ್ರೀ ಪ್ರೇಮಕುಮಾರ, ಡಾ. ರಮೇಶ, ಕು.ದಿವ್ಯ, ಕು. ಸಿಮಾ, ಕು.ಶ್ರಿಲಕ್ಷಿಮಿ, ಇತರ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವರದಿ : ಚಂದ್ರಕಾಂತ ಝಬಾಡೆ