ವಿಜಯಪುರ:ಪರಿಶಿಷ್ಟ ಜಾತಿ ವಿಭಾಗದ
ಅಧ್ಯಕ್ಷರಾದ ರಮೇಶ್ ಗುಬ್ಬೇವಾಡ ರವರು ಪತ್ರಿಕಾ ಮಾಧ್ಯಮದವರ ಜೊತೆ ಮಾತನಾಡುತ್ತಾ
ಮಾಜಿ ಸಚಿವ ಹಾಗೂ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಮುನಿರತ್ನ ಅವರು ದಲಿತರು ಮತ್ತು ದಲಿತ ಹೆಣ್ಣುಮಕ್ಕಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವುದನ್ನು ತೀವ್ರವಾಗಿ ಖಂಡಿಸಿದರು ಹಾಗೂ ಸರ್ಕಾರ ಅವರನ್ನು ತ್ವರಿತವಾಗಿ ಬಂಧಿಸಿದ್ದಕ್ಕೆ ರಾಜ್ಯಸರ್ಕಾರಕ್ಕೆ ಅಭಿನಂದನೆಗಳನ್ನ ಸಲ್ಲಿಸಿದರು.
ಬಿಬಿಎಂಪಿ ಗುತ್ತೆದಾರ ಚೆಲುವರಾಜ ಅವರಿಗೆ ಬಿಜೆಪಿ ಶಾಸಕ ಮುನಿರತ್ನ ಅವರು ಹಣವನ್ನು ನೀಡುವಂತೆ ಒತ್ತಾಯಿಸಿದ್ದಾರೆ ಹಣವನ್ನು ನೀಡಲು ನನ್ನ ಹತ್ತಿರ ಇಲ್ಲ ಅಂದಾಗ ನಿಮ್ಮ ಹೆಣ್ಣು ಮಕ್ಕಳನ್ನು ನಿನ್ನ ಹೆಂಡತಿಯನ್ನು ತಂದು ಬಿಡು ಎಂದಿದ್ದು ನಾಗರಿಕ ಸಮಾಜ ತಲೆ ತಗ್ಗಿ ಸುವಂತ ವಿಚಾರ ಆದ್ದರಿಂದ ಇಂತಹ ನೀಚ ಪ್ರವೃತ್ತಿ ಹಾಗೂ ಜಾತಿ ನಿಂದಕರಿಗೆ ಕಠಿಣ ಶಿಕ್ಷೆ ಆಗಬೇಕು ಹಾಗು ಇಂತವರಿಗೆ ಕಠಿಣ ಶಿಕ್ಷೆ ಆಗುತ್ತೆ ಅನ್ನುವುದು ಕರ್ನಾಟಕದಿಂದಲೇ ಇಡೀ ದೇಶಕ್ಕೆ ಸಂದೆಶ ಹೋಗಬೇಕು ಎಂದು ಹೇಳಿದರು
ಸಂಸ್ಕಾರ ಸಂಸ್ಕೃತಿ ಬಗ್ಗೆ ಮಾತನಾಡುವ ಬಿಜೆಪಿ ನಾಯಕರು ತಮ್ಮದೇ ಪಕ್ಷದ ಶಾಸಕರ ಮಾತುಗಳ ಸಾಕ್ಷಿ ನಿಮ್ಮ ಪಕ್ಷದ ಸಂಸ್ಕೃತಿ ಎಂತಹದು ಎಂದು ತಿಳಿಯಲು ಹಿಂದೂಗಳು ನಾವೆಲ್ಲರೂ ಒಂದು ಎನ್ನುವುದು ಕೇವಲ ಚುನಾವಣೆ ಸಮಯದಲ್ಲಿ ನೆನಪಿರುತ್ತದೆ ಎಂದು ಕಾಣಿಸುತ್ತದೆ ಬಿಜೆಪಿಯವರಿಗೆ ಚುನಾವಣೆ ಮುಗಿದ ಕೂಡಲೇ ದಲಿತರು ಶೋಷಿತರನ್ನು ಹಿಂದೂವಾಗಿ ಮನುಷ್ಯನಾಗಿ ತಮ್ಮಂತೆ ಅವರು ಮನುಷ್ಯರು ಎನ್ನುವ ಮನಸ್ಥಿತಿ ಬಿಜೆಪಿಗರಿಗೆ ಇಲ್ಲ ಮನುವಾದಿ ಸಂಸ್ಕೃತಿ ಬಿಜೆಪಿಯವರದ್ದಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಮಾಧ್ಯಮ ವಕ್ತಾರರಾದ ಸಂಜೀವ ಚವ್ಹಾಣ ಎಲ್ಲವನ್ನೂ ಸ್ವಾಗತಿಸಿ ಶಾಸಕ ಮುನಿರತ್ನ ಅವರಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಹೇಳಿದರು.ಈ ಪತ್ರಿಕಾ ಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಪದಾಧಿಕಾರಿಗಳಾದ ಸಿದ್ದು ತೋಟದ
ರಾಜು ಪವಾರ್, ಕೃಷ್ಣಾ ಲಮಾಣಿ,
ಯುವರಾಜ ಭಜಂತ್ರಿ, ರಾಘವೇಂದ್ರ ವಡವಡಗಿ, ಬಾಬು ಗುಡಮಿ,ಸತೀಶ್ ದೂಡಮನಿ, ಪರಶುರಾಮ ಪಾರನ್ನವರ, ವಿಠ್ಠಲ ಸಂದಿಮನಿ ಉಪಸ್ಥಿತರಿದ್ದರು.