ಪಾವಗಡ ಪಟ್ಟಣದ ಐತಿಹಾಸಿಕ ಕೋಟೆ ಗೋಡೆ ಕುಸಿತ ವಿವಾದ ತಾಲ್ಲೂಕು ಕಚೇರಿ ಮುಂಭಾಗದಲ್ಲಿ ಕಾನೂನು ಕ್ರಮ ವಿಳಂಬ ವಿರೋಧಿಸಿ 2 ನೇ ದಿನದ ಪ್ರತಿಭಟನೆ ಸ್ಥಳಕ್ಕೆ ಬೇಡಿಕೆ ವಿವರಣೆ ಪಡೆಯಲು ಆಗಮಿಸಿದ ಪಾವಗಡ ಪುರಸಭೆ ಮುಖ್ಯಾಧಿಕಾರಿ ಜಾಫರ್ ಮಾತನಾಡುತ್ತ ದೂರು ಸಂಬಂಧ ಕಟ್ಟಡ ಮಾಲೀಕರಿಗೆ 3 ನೋಟಿಸ್ ನೀಡಲಾಗಿದ್ದು,ಶೀಘ್ರದಲ್ಲಿ ಕಟ್ಟಡ ಕಾಮಗಾರಿ ಅನುಮತಿ ರದ್ದು ಮಾಡಲಾಗುವುದು ಹಾಗೂ ಧರಣಿ ನಿರತರು ಕೋಟೆಯ ಸ್ಮಾರಕ ಕಲ್ಲುಗಳನ್ನು ನಾಶಪಡಿಸಿರುವ ಕಟ್ಟಡ ಮಾಲೀಕರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲು ಪಟ್ಟು ಹಿಡಿದಾಗ ಕೋಟೆ ಸ್ಮಾರಕ ಗಳು ಪುರಸಭೆ ವ್ಯಾಪ್ತಿಗೆ ಒಳಪಟ್ಟಿಲ್ಲ ಎಂದಾಗ ಧರಣಿ ನಿರತರು ಆಕ್ರೋಶ ವ್ಯಕ್ತಪಡಿಸಿದರು ನಂತರ ಧರಣಿ ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ವರದರಾಜ್ ಧರಣಿ ನಿರತರ ಬೇಡಿಕೆ ಆಲಿಸಿ, ಕೋಟೆ ಸ್ಮಾರಕ ನಾಶ ಸಂಬಂಧ ಮೇಲಾಧಿಕಾರಿಗಳ ಗಮನಕ್ಕೆತಂದು ಸಂಜೆಯೊಳಗೆ ಧರಣಿ ನಿರತರಿಗೆ ಮಾಹಿತಿ ನೀಡಿ ಮೇಲಾಧಿಕಾರಿಗಳ ಆದೇಶದ ಮೇರಿಗೆ ಅಗತ್ಯ ಕ್ರಮ ಕೈಗೊಲ್ಲುವುದಾಗಿ ತಿಳಿಸಿದರು. ಧರಣಿ ನಿರತರ ಬೇಡಿಕೆ ಬಗೆಹರಿಯುವ ತನಕ ಧರಣಿ ಮುಂದುವರಿಸುವುದಾಗಿ ತಿಳಿಸಿ, ಸಂಬಂದಿಸಿದ ಅಧಿಕಾರಿಗಳು ವಿಳಂಬ ಮಾಡಿದ್ದಲ್ಲಿ ಪ್ರತಿಭಟನೆ ಅಹೋರಾತ್ರಿ ಧರಣಿ, ಉಪವಾಸ ಸತ್ಯಾಗ್ರಹ ಆರಂಭಿಸುವುದಾಗಿ ಧರಣಿ ನಿರತ ಕನ್ನಮೆಡಿ ಕೃಷ್ಣಮೂರ್ತಿ, ವಾಲ್ಮೀಕಿ ಜಾಗೃತಿ ವೇದಿಕೆ ಸಂಚಾಲಕ ಬೇಕರಿ ನಾಗರಾಜ್ ತಿಳಿಸಿದರು.
ವರದಿ ಪಾವಗಡ.ಕೆ.ಮಾರುತಿ ಮುರಳಿ