ಹೊನ್ನಾಳಿ: ಉತ್ತರ ಕರ್ನಾಟಕ ಜನರ ಜೀವನಾಡಿ ಕಳಸಾ ಬಂಡೂರಿ ಹಾಗೂ ಮಹದಾಯಿ ನದಿ ನೀರಿನ ಜೋಡಣೆ ಯೋಜನೆ ಜಾರಿಗೆ ಆಗ್ರಹಿಸಿ
ಕರ್ನಾಟಕ ರಕ್ಷಣಾ ವೇದಿಕೆ ಶ್ರೀಯುತ ಪ್ರವೀಣ್ ಕುಮಾರ್ ಶೆಟ್ಟಿರವರ ಸಾರಥ್ಯದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಕಳೆದ 20 ವರ್ಷಗಳಿಂದ ಇವರ ನೇತೃತ್ವದಲ್ಲಿ ನಾಡು- ನುಡಿ,ಭಾಷೆ, ಕನ್ನಡಿಗರ ಪರವಾಗಿ ಅನೇಕ ವಿವಿಧ ವಿಶೇಷ ಹೋರಾಟ ಮತ್ತು ಪಾದಯಾತ್ರೆಯಂತಹ ಕ್ರಾಂತಿಕಾರಿ ಹೋರಾಟ ಮಾಡುತ್ತಲೇ, ಇಡೀ ರಾಜ್ಯಾದ್ಯಾಂತ ತಮ್ಮದೇ ಆದ ಚಾಪು ಮೂಡಿಸಿರುವ ಕನ್ನಡಿಗರ ಬೆನ್ನೆಲುಬಾಗಿ ಕನ್ನಡ ಭಾಷೆಯ ಮತ್ತು ನೆಲ-ಜಲದ ಉಳಿವಿಗಾಗಿ ಹಗಲಿರುಳು ಅನ್ನದೇ ಅಂದಿನಿಂದ ಇಂದಿನವರೆಗೂ ಹೋರಾಟ ಮಾಡುತ್ತಲೇ ಬಂದಿರುವ, ಕನ್ನಡದ ವಿಚಾರದಲ್ಲಿ ಕನ್ನಡಕ್ಕೆ ಹಾಗೂ ಕನ್ನಡಿಗರಿಗೆ ತೊಂದರೆಯಾದರೆ ಮೊದಲು ಅವರ ಪರವಾಗಿ ನಿಲ್ಲುವ ಏಕೈಕ ಸಂಘಟನೆ ಎಂದರೆ ಅದು ಕರ್ನಾಟಕ ರಕ್ಷಣಾ ವೇದಿಕೆಯ ಶ್ರೀಯುತ ಪ್ರವೀಣ್ ಕುಮಾರ್ ಶೆಟ್ಟಿ ಮತ್ತು ಅವರ ಸಂಘಟನೆಯಾಗಿರುತ್ತದೆ. ಅದೇ ರೀತಿ ಸರಳತೆಯಿಂದ ಜೀವನ ಸಾಗಿಸುತ್ತಾ ಇಡೀ ರಾಜ್ಯದ ಉದ್ದಗಲಕ್ಕೂ ಸಂಚರಿಸಿ ಯುವಪಡೆ ಕಟ್ಟಿರುವ ಶ್ರೀಯುತ ಪ್ರವೀಣ್ ಕುಮಾರ್ ಶೆಟ್ಟಿರವರು
ಮತ್ತೊಮ್ಮೆ ಕ್ರಾಂತಿಕಾರಿ ಹೋರಾಟವನ್ನು ಹಮ್ಮಿಕೊಂಡಿದ್ದಾರೆ ನಿಮಗೆ ತಿಳಿದಿರುವಂತೆ ಬಹುದಿನಗಳಿಂದ ನೆನೆಗುದಿಗೆ ಬಿದ್ದಿರುವ ಉತ್ತರ ಕರ್ನಾಟಕ ಜನರ ಜೀವನಾಡಿ ಕಳಸ ಬಂಡೂರಿ ಹಾಗೂ ಮಹದಾಯಿ ನದಿಗಳ ನೀರಿನ ಜೋಡಣೆ ಯೋಜನೆ ಜಾರಿಗೆ ಆಗ್ರಹಿಸಿ “ಕೇಂದ್ರ ಮತ್ತು ರಾಜ್ಯ ಸರ್ಕಾರದ ಗಮನಕ್ಕೆ ತರುವ ಸಲುವಾಗಿ ಇದೆ ತಿಂಗಳು 19-09-2024 ರಿಂದ 20-09-2024ರಂದು ನರಗುಂದ ತಾಲ್ಲೂಕಿನಿಂದ ಗದಗ ಜಿಲ್ಲೆಯವರೆಗೆ 2 ದಿನಗಳ ಐತಿಹಾಸಿಕ ಪಾದಯಾತ್ರೆ ಕಾರ್ಯಕ್ರಮವನ್ನು ನಮ್ಮ ಕ.ರ.ವೇ.ರಾಜ್ಯಾಧ್ಯಕ್ಷರಾದ ಶ್ರೀಯುತ ಪ್ರವೀಣ್ ಕುಮಾರ್ ಶೆಟ್ಟಿ ಮತ್ತು ರಾಜ್ಯ-ಜಿಲ್ಲಾ ತಾಲ್ಲೂಕು ಮುಖಂಡರು ಹಾಗೂ ಪದಾಧಿಕಾರಿಗಳು 45 ಕಿಲೋ ಮೀಟರ್ ದೂರ ಪಾದಯಾತ್ರೆ ಮಾಡುವುದರ ಜೊತೆಗೆ ಗದಗ ಜಿಲ್ಲಾಧಿಕಾರಿಗಳಿಗೆ ಮನವಿ ನೀಡುವ ಮುಖಾಂತರ ಈ ಕಳಸಾ ಬಂಡೂರಿ ಮಹದಾಯಿ ಯೋಜನೆ ಜಾರಿಗೆ ಒತ್ತಾಯಿಸುವಂತೆ ಈ ಹೋರಾಟ ಹಮ್ಮಿಕೊಳ್ಳಲಾಗಿರುತ್ತದೆ. ಈ ಹೋರಾಟಕ್ಕೆ ಹೊನ್ನಾಳಿ ತಾಲ್ಲೂಕು ಘಟಕದ ಅಧ್ಯಕ್ಷರಾದ ಶ್ರೀನಿವಾಸ್.ಎಸ್. ಹಾಗೂ ಪ್ರಮುಖ ಕ.ರ.ವೇ ಮುಂಚೂಣಿ ಮುಖಂಡರ ಜೊತೆಗೂಡಿ ಹೊನ್ನಾಳಿ ತಾಲ್ಲೂಕು ಘಟಕದ ವತಿಯಿಂದ 20 ಸದಸ್ಯರನ್ನು ಮಿನಿ ಬಸ್ (ವಾಹನ) ಮಾಡಿಕೊಂಡು 19-09-2024 ರ ಬೆಳಗ್ಗೆ 6 ಗಂಟೆಗೆ ನರಗುಂದ ಪಾದಯಾತ್ರೆ ನಡೆಯುವ ಸ್ಥಳಕ್ಕೆ ಸಮಯಕ್ಕೆ ಸರಿಯಾಗಿ ಪಾಲ್ಗೊಂಡು ತದನಂತರ ಅಲ್ಲಿ ನಡೆಯುವ ಪಾದಯಾತ್ರೆ ಹೋರಾಟದಲ್ಲಿ ಭಾಗಿಯಾಗುತ್ತೇವೆ ಎಂದರು.
ಈ ಸಂದರ್ಭದಲ್ಲಿ ಹರೀಶ್ ಜನನಿ, ಲಕ್ಷ್ಮಿಕಾಂತ್ ಅಣ್ಣಪ್ಪ ಪ್ರೇಮ್ ಕುಲ್ಲರಹಳ್ಳಿ ಭಾಸ್ಕರ್ ಶಿವು ಹಾಲೇಶ್, ಬೀರೇಶ್, ದರ್ಶನ್, ಪ್ರಶಾಂತ್ ಹಾಗೂ ಇನ್ನೂ ಇತರರಿದ್ದರು
ವರದಿ ಪ್ರಭಾಕರ್ ಡಿ ಎಂ