ಕಲಬುರ್ಗಿ : ನಗರದ ರಾಮ ಮಂದಿರ ಬಳಿ ಡಾ. ವಿಷ್ಣು ಸೇನಾ ಸಮಿತಿ ಕಲಬುರ್ಗಿ ವಿಷ್ಣು ಮಹೇಶ್ ರವರ ನೇತೃತ್ವದಲ್ಲಿ ಸಾಹಸ ಸಿಂಹ ಅಭಿನಯ ಭಾರ್ಗವ ಡಾ.ವಿಷ್ಣುವರ್ಧನ್ ರವರ 74ನೇ ಹುಟ್ಟುಹಬ್ಬವನ್ನು ಬಹಳ ವಿಜೃಂಭಣೆಯಿಂದ ಜ್ಯೋತಿಗೊಳಿಸುವುದರ ಮೂಲಕ ಉದ್ಘಾಟಿಸಲಾಯಿತು.
ಈ ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿ ಶ್ರೀ ಯಲ್ಲಪ್ಪ ನಾಯ್ಕೋಡಿ ಮಹಾಪೌರರು ಮಹಾನಗರ ಪಾಲಿಕೆ ಕಲ್ಬುರ್ಗಿ ಇವರು ಮಾತನಾಡಿ ಸೃಜನಶೀಲತೆಯ ವ್ಯಕ್ತಿತ್ವವುಳ್ಳ ನಟರಾಗಿದ್ದರು. ಅವರ ಸಿನಿಮಾಗಳು ಸ್ಪೂರ್ತಿದಾಯಕವಾಗಿರ ತಕ್ಕಂಥ ಸಿನಿಮಾಗಳಾಗಿದ್ದು. ನಾಡಿನ ಹಲವಾರು ಜನರಿಗೆ ಆದರ್ಶ ಪುರುಷರಾಗಿದ್ದಾರೆ. ನಮ್ಮ ಕಲಬುರ್ಗಿ ನಗರದಲ್ಲಿ ವಿಷ್ಣು ಮಹೇಶ್ ಅವರು ಅನೇಕ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು ಯಾವಾಗಲೂ ನಾವು ಅವರಿಗೆ ಬೆಂಬಲಿಸುತ್ತೇವೆಂದು ಹೇಳಿದರು.
ಕಲ್ಬುರ್ಗಿ ಜಿಲ್ಲೆಯ ಮಹಾನಗರ ಸದಸ್ಯರಾದ ಬಸವರಾಜ್ ಬಿರಾಳ ಮಾತನಾಡಿ ಜಿಲ್ಲೆಯಲ್ಲಿ ಡಾ.ವಿಷ್ಣು ಸೇನಾ ಸಮಿತಿಯು ಆದರ್ಶ ಕೆಲಸಗಳು ಮಾಡುತ್ತಾ ಸಾಧನೆಗೈದ ಸಾಧಕರಿಗೆ ಸನ್ಮಾನ ಪ್ರಶಸ್ತಿಗಳ ನೀಡುವುದರ ಮೂಲಕ ಅನೇಕ ಸಾಧಕರಿಗೆ ಇನ್ನೂ ಹೆಚ್ಚು ಹೆಚ್ಚು ಕೆಲಸಗಳನ್ನು ಮಾಡುವಂತೆ ಪ್ರೋತ್ಸಾಹ ನೀಡುತ್ತಿದ್ದು ಹೀಗೆ ಈ ಕೆಲಸ ಮುಂದುವರಿಯಲಿ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು ವಿಶೇಷವಾಗಿ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂಅನ್ನದಾಸೋಹಕಾರ್ಯಕ್ರಮವನ್ನು ನಡೆಸಿಕೊಡಲಾಯಿತು.
ಈ ಸಂದರ್ಭದಲ್ಲಿ ಶ್ರೀ ಎಲ್ಲಪ್ಪ ನಾಯ್ಕೋಡಿ ಮಹಾಪೌರರು ಮಹಾನಗರ ಪಾಲಿಕೆ ಕಲ್ಬುರ್ಗಿ ಶ್ರೀ ಬಸವರಾಜ್ ಬಿರಾಳ ಸದಸ್ಯರು ಮಹಾನಗರ ಪಾಲಿಕೆ ಕಲ್ಬುರ್ಗಿ. ಸುರೇಶ್ ಹೊನಗುಡಿ ಅಧ್ಯಕ್ಷರು ಕರ್ನಾಟಕ ರಕ್ಷಣಾ ವೇದಿಕೆ ಕಲಬುರ್ಗಿ ಉತ್ತರ. ಆನಂದ್ ದೊಡ್ಮನಿ. ಜನಾರ್ದನ್ ಹುಲಿಮನಿ. ನೀಲಕಂಠ ಬಿರಾದರ. ಡಾ. ವಿಷ್ಣು ಸೇನಾ ಸಮಿತಿಯ ಕಲಬುರ್ಗಿ ಜಿಲ್ಲೆಯ ಎಲ್ಲಾ ತಾಲೂಕ ಅಧ್ಯಕ್ಷರು ಹಾಗೂ ಡಾಕ್ಟರ್ ವಿಷ್ಣುವರ್ಧನ್ ಅಭಿಮಾನಿಗಳು ಈ ಕಾರ್ಯಕ್ರಮದಲ್ಲಿ ಹಾಜರಿದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.