ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸಿ ನ್ಯಾಯಯುತವಾಗಿ ತೀರ್ಪು ನೀಡಬೇಕು:ಸಿ.ಆರ್.ಪಿ. ನಾಗೇಂದ್ರ ನಾಯ್ಕ.ಎನ್.
ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ಮರಿದಾಸನಹಳ್ಳಿ ಕ್ಲಸ್ಟರ್ ವ್ಯಾಪ್ತಿಯ ತಿಪ್ಪಯ್ಯನದುರ್ಗ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಶಿಕ್ಷಣ ಇಲಾಖೆ ಕ್ಲಸ್ಟರ್ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಶಾಲೆಗಳಿಂದ ಪುಟಾಣಿ ಮಕ್ಕಳು ವೇಷಭೂಷಣಗಳನ್ನು ಹಾಕಿಕೊಂಡು ಖುಷಿಯಿಂದ ಪಾಲ್ಗೊಂಡು ಗ್ರಾಮದ ಪ್ರಮುಖ ಬೀದಿಗಳಲ್ಲಿ ಕುಂಭ ಮತ್ತು ಕಳಸಗಳನ್ನು ಹೊತ್ತು ಗ್ರಾಮಸ್ಥರನ್ನು ಮತ್ತು ಮುಖ್ಯ ಅತಿಥಿಗಳನ್ನು ಸ್ವಾಗತಿಸಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ತಿಪ್ಪಯ್ಯನದುರ್ಗ ಗ್ರಾಮದ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀ ಯುತ ಶಿವಲಿಂಗಪ್ಪ ನವರು ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಗ್ರಾಮದ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಕಾರ್ಯಕ್ರಮ ಆಯೋಜಿಸಿದ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಮತ್ತು ಶಿಕ್ಷಕರಿಗೆ ಅಭಿನಂದನೆ ಸಲ್ಲಿಸಿದರು ನಂತರ ಮಕ್ಕಳಿಗೆ ಶಿಕ್ಷಣ ಎಷ್ಟು ಮುಖ್ಯವೂ ಕಲೆ ಮತ್ತು ಕ್ರೀಡೆ ಕೂಡಾ ಅಷ್ಟೇ ಮುಖ್ಯ ಅದ್ದರಿಂದ ಇಲ್ಲಿ ಸೇರಿರುವ ಎಲ್ಲಾ ಮಕ್ಕಳು ತಮ್ಮ ಪ್ರತಿಭೆಯನ್ನು ಹೊರ ಹಾಕಬೇಕೆಂದು ಮಕ್ಕಳಿಗೆ ಉತ್ತೇಜನ ತುಂಬಿದರು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕ್ಲಸ್ಟರ್ ಸಿ.ಆರ್.ಪಿ ಗಳಾದ ನಾಗೇಂದ್ರ ನಾಯ್ಕ ಎನ್ ರವರು ಪ್ರಾಸ್ಥಾವಿಕ ಭಾಷಣ ಮಾಡುತ್ತಾ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವದಲ್ಲಿ ಭಾಗವಹಿಸಿದ ಎಲ್ಲಾ ಶಾಲಾ ಮಕ್ಕಳಿಗೆ ಮತ್ತು ಶಿಕ್ಷಕರಿಗೆ ಅಭಿನಂದನೆ ಸಲ್ಲಿಸಿ, ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಮಕ್ಕಳಿಗೂ ಅವರ ಪ್ರತಿಭೆಗೆ ತಕ್ಕಂತೆ ನ್ಯಾಯಯುತವಾದ ತೀರ್ಪನ್ನು ನೀಡಬೇಕೆಂದು ಶಿಕ್ಷಕರಿಗೆ ಕಿವಿಮಾತು ಹೇಳಿದರು.
ಈ ಕಾರ್ಯಕ್ರಮದಲ್ಲಿ ರಾಜ್ಯ ಉತ್ತಮ ಮುಖ್ಯಶಿಕ್ಷಕ ಪ್ರಶಸ್ತಿ ಪಡೆದ ರಾಜಗೋಪಾಲ್ ಮತ್ತು ಉತ್ತಮ ಸಿ.ಆರ್.ಪಿ ಪ್ರಶಸ್ತಿ ಪಡೆದ ನಾಗೇಂದ್ರ ನಾಯ್ಕ ಎನ್. ಮತ್ತು ಸಾಹಿತಿಗಳಾದ ಮುರ್ಖನಪ್ಪ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ರಾಜಗೋಪಾಲ್ ಮುಖ್ಯ ಶಿಕ್ಷಕರು ಜಿ.ಹೆಚ್.ಎಸ್ (ಎಮ್.ಡಿ.ಎಸ್), ಅಕ್ಕಲಪ್ಪ ಬಡ್ತಿ ಮುಖ್ಯ ಶಿಕ್ಷಕರು, ನಾಗಲತಾ, ಪೃಥ್ವಿರಾಜ್ ವರದಿಗಾರರು, ನಂದೀಶ್ ನಾಯ್ಕ್ ವರದಿಗಾರರು ಮತ್ತು ಚನ್ನಮಲ್ಲಿಕಾರ್ಜುನ ಪ್ರಭಾರ ಮುಖ್ಯ ಶಿಕ್ಷಕರು ಬಿ. ಹೊಸಹಳ್ಳಿ ಹಾಗೂ ಶಾಲಾ ಎಸ್.ಡಿ.ಎಮ್.ಸಿ. ಅಧ್ಯಕ್ಷರಾದ ಉಮೇಶ್ ಟಿ ಕೆ. ಹಾಗೂ ಪ್ರಭಾರ ಮುಖ್ಯ ಶಿಕ್ಷಕರು ಪುರುಷೋತ್ತಮ್ ಹಾಗೂ ಕ್ಲಸ್ಟರ್ ವ್ಯಾಪ್ತಿಯಲ್ಲಿನ ಎಲ್ಲಾ ಮುಖ್ಯ ಶಿಕ್ಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ವರದಿಗಾರರು-ಪೃಥ್ವಿರಾಜ್ ಜಿ.ವಿ