ಪಾವಗಡ:ಪಟ್ಟಣದ ಪುರಸಭೆಯ ಆವರಣದಲ್ಲಿ ಏರ್ಪಡಿಸಿದ್ದ ಪೌರ ಕಾರ್ಮಿಕ ದಿನಾಚರಣೆಯನ್ನು ಉದ್ದೇಶಿಸಿ ಪೌರ ಕಾರ್ಮಿಕರು ತಮ್ಮ ಆರೋಗ್ಯ ಬದಿಯಿಟ್ಟು ಸಮಾಜದ ಆರೋಗ್ಯಕ್ಕೆ ಕಂಕಣ ಬದ್ಧರಾಗಿರುತ್ತಾರೆ ಎಂದು ಪುರಸಭೆಯ ಅಧ್ಯಕ್ಷ ಪಿ ಎಚ್ ರಾಜೇಶ್ ತಿಳಿಸಿದರು.
ಪೌರಕಾರ್ಮಿಕರು ದಿನನಿತ್ಯ ಗಾಳಿ, ಮಳೆ, ಬಿಸಿಲು, ಚಳಿ ಎನ್ನದೆ, ದಿನ ನಿತ್ಯ ನಸುಕಿನ ಜಾವದಿಂದ ಸ್ವಚ್ಛತಾ ಕಾರ್ಯ ಕೈಗೊಳ್ಳುವ ಪೌರ ಕಾರ್ಮಿಕರು ನೈಜ ಕಾಯಕಯೋಗಿಗಳು ಎಂದರು.
ಕಾರ್ಯಕ್ರಮ ಉದ್ದೇಶಿಸಿ ಶಾಸಕ ಹೆಚ್ ವಿ ವೆಂಕಟೇಶ್ ಮಾತನಾಡಿ ಪೌರಕಾರ್ಮಿಕರು ಸ್ವಚ್ಛತಾ ರೂವಾರಿಗಳು, ಸಂದಿಗ್ಧ ಸ್ಥಿತಿಯಲ್ಲಿಯೂ ತಮ್ಮ ಜೀವದ ಹಂಗನ್ನು ತೊರೆದು ಬಿಡುವಿಲ್ಲದ ನೈರ್ಮಲೀಕರಣ ಕಾರ್ಯ ಮಾಡಿದ್ದು ಶ್ಲಾಘನೀಯ
ದೊಡ್ಡ ವ್ಯಕ್ತಿ ಮತ್ತು ಉನ್ನತ ಹುದ್ದೆಯಲ್ಲಿರುವವರನ್ನು ಸತ್ಕರಿಸುವುದು, ಗೌರವಿಸುವುದು ದೊಡ್ಡ ಕಾರ್ಯವಲ್ಲ,ಪೌರ ಕಾರ್ಮಿಕರಂತಹ ವ್ಯಕ್ತಿಗಳನ್ನು ಪ್ರತಿವರ್ಷ ಗೌರವಿಸುವುದು ಜನಮೆಚ್ಚುವ ಕಾರ್ಯವಾಗಿದೆ ಪೌರ ಕಾರ್ಮಿಕರ ಹಿತ ಕಾಪಾಡಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಪುರಸಭಾ ಅಧ್ಯಕ್ಷರಾದ ರಾಜೇಶ್, ಉಪಾಧ್ಯಕ್ಷರಾದ ಗೀತಾ ಹನುಮಂತರಾಯಪ್ಪ ,ಸದಸ್ಯರುಗಳಾದ ಸುದೇಶ್ ಬಾಬು,ರವಿ, ವೆಂಕಟರವಣಪ್ಪ, ಮಹಮ್ಮದ್ ಇಮ್ರಾನ್, ರಾಮಾಂಜಿನಪ್ಪ ,ಜಾಹ್ನವಿ ವಿಶ್ವನಾಥ್,ಸುಧಾ ಲಕ್ಷ್ಮಿ ,ಧನಲಕ್ಷ್ಮಿ,ಗೊರ್ತಿನಾಗರಾಜ್,ಸಿ.ಎನ್. ರವಿ,ವೇಲುರಾಜು,ಗಂಗಮ್ಮ, ವಿಜಯಕುಮಾರ್, ಮಣಿ, ಮುಖಂಡರಾದ ಆರ್.ಎ.ಹನುಮಂತರಾಯಪ್ಪ,ಗುಟ್ಟಹಳ್ಳಿ ಅಂಜಪ್ಪ, ಪ್ರಕಾಶ್, ಯುವ ಮುಖಂಡರಾದ ಕಿರಣ್, ನರಸಿಂಹಮೂರ್ತಿ, ಪುರಸಭಾ ಮುಖ್ಯಾಧಿಕಾರಿ ಜಾಫರ್ ಷರಿಫ್, ಆರೋಗ್ಯಾಧಿಕಾರಿ ಶಂಷುದ್ದೀನ್, ಸೇರಿದಂತೆ ಪುರಸಭಾ ಸಿಬ್ಬಂದಿ ಹಾಜರಿದ್ದರು.
ವರದಿ:ಕೆ. ಮಾರುತಿ ಮುರಳಿ