ಕಲಬುರಗಿ/ಸುರಪುರ :ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಚಿಕ್ಕನಹಳ್ಳಿ ಗ್ರಾಮದ ವ್ಯಕ್ತಿ ಲಕ್ಷ್ಮಣ್ ನಾಯಕ್ ಹಾಗೂ ಭೂಮಿಕಾ ಇವರು ಕಡು ಬಡವರಿಗಿದ್ದು ಕೂಲಿ ಕೆಲಸದ ನಿಮಿತ್ತ ಬೆಂಗಳೂರಿಗೆ ಆಗಮಿಸಿದ್ದರು.
ಕಳೆದ ಒಂದು ವಾರದ ಹಿಂದೆ ಯಲಹಂಕದ ಹತ್ತಿರ ಜೋಪಡಿ ಹಾಕಿಕೊಂಡು ಕೆಲಸ ಮಾಡುವ ವೇಳೆ ಮೂರು ವರ್ಷದ ಮಗು ಯಲ್ಲಪ್ಪ (3) ಎದುರುಗಡೆ ಬಿಲ್ಡಿಂಗ್ ಕಾಮಗಾರಿ ಕೆಲಸ ನಡೆಯುವ ಸಂದರ್ಭದಲ್ಲಿ ಆಕಸ್ಮಿಕವಾಗಿ ಆಟವಾಡಲು ಹೋಗಿ ಬಾಲಕ ಮೇಲಿಂದ ನೀರಿನ ಟ್ಯಾಂಕ್ ಗೆ ಬಿದ್ದು ಮೃತಪಟ್ಟ ಘಟನೆ ನಡೆದಿದ್ದು ಈ ವಿಷಯ ತಿಳಿದು ಕಟ್ಟಡದ ಮಾಲಿಕ ಡಾ.ಲಕ್ಷ್ಮಣ್ ರವರು ಅಂದು ಮಾನವೀಯತೆ ದೃಷ್ಟಿಯಿಂದ ಬೆಂಗಳೂರಿನಿಂದ ಸ್ವಗ್ರಾಮ ಚಿಕ್ಕನಹಳ್ಳಿ ಗ್ರಾಮಕ್ಕೆ ಅಂಬುಲೆನ್ಸ್ ವ್ಯವಸ್ಥೆ ಮಾಡಿ ಕಳುಹಿಸಿ ಕೊಡುವ ಮೂಲಕ ಮಗುವಿನ ಅಂತ್ಯ ಸಂಸ್ಕಾರಕ್ಕೆ 35 ಸಾವಿರ ರೂಪಾಯಿಗಳನ್ನು ನೀಡಿ ಮಾನವೀಯತೆ ಮೆರೆದರು.ಇಂದು ಬೆಂಗಳೂರಿನ ಶಿವಾಜಿನಗರದ ನಮ್ಮ ಕರ್ನಾಟಕ ಸೇನೆ ಕೇಂದ್ರ ಕಛೇರಿಯಲ್ಲಿ ರಾಜ್ಯಾಧ್ಯಕ್ಷರಾದ ಎಂ.ಬಸವರಾಜ್ ಪಡುಕೋಟೆಯವರ ಸಮ್ಮುಖದಲ್ಲಿ ಕಟ್ಟಡದ ಮಾಲೀಕರಿಂದ ಮಗುವಿನ ಕುಟುಂಬಕ್ಕೆ 2 ಲಕ್ಷ ರೂಪಾಯಿ ಪರಿಹಾರ ಮೊತ್ತವನ್ನು ವಿತರಿಸುವ ಮೂಲಕ ಬಡ ಕುಟುಂಬದ ಕಣ್ಣೀರು ಒರೆಸಿದ್ದಾರೆ.
ಈ ಸಂದರ್ಭದಲ್ಲಿ ಮಗುವಿನ ತಂದೆ ಲಕ್ಷ್ಮಣ ಹಾಗೂ ತಾಯಿ ಭೂಮಿಕಾ ನಮ್ಮ ಕರ್ನಾಟಕ ಸೇನೆ ರಾಜ್ಯಾಧ್ಯಕ್ಷರಾದ ಎಂ.ಬಸವರಾಜ್ ಪಡುಕೋಟೆ, ಹನುಮಂತ ಹೆಳವರ ತಳ್ಳಳ್ಳಿ,ಚಂದಾ ಹುಸೇನಿ ಮಾಲಗತ್ತಿ, ಕಟ್ಟಡದ ಮಾಲೀಕ ಡಾ.ಲಕ್ಷ್ಮಣ್, ಚಿತ್ರನಟ ರಘು ಪಡುಕೋಟೆ ಸೇರಿದಂತೆ ಇತರರು ಇದ್ದರು.
ಇಂದು ಮೃತ ಬಾಲಕನ ಕುಟುಂಬಕ್ಕೆ ಪರಿಹಾರ ವಿತರಿಸುವಲ್ಲಿ ನೆರವಾಗಿದ್ದೇವೆ, ಹಲವು ವರ್ಷಗಳಿಂದ ನಮ್ಮ ಕರ್ನಾಟಕ ಸೇನೆ ಹೋರಾಟ ಮಾಡುತ್ತಾ ಬಂದಿದ್ದು ,ಈ ಹಿಂದಿನಿಂದಲೂ ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಭಾಗದ ಹಲವು ಕಟ್ಟಡ ಕಾರ್ಮಿಕರ ಕುಟುಂಬಗಳಿಗೆ ಪರಿಹಾರ ಕೊಡಿಸುವಲ್ಲಿ ನೆರವಾಗಿದ್ದೇವೆ. ಮುಂದೆಯೂ ಕೂಡಾ ನಮ್ಮ ಕರ್ನಾಟಕ ಸೇನೆಯ ಕಾರ್ಯ ಹೀಗೆ ಮುಂದುವರೆಯಲಿದೆ ಎಂದು ಎಂ. ಬಸವರಾಜ್ ಪಡುಕೋಟೆ,ನಮ್ಮ ಕರ್ನಾಟಕ ಸೇನೆ ರಾಜ್ಯಾಧ್ಯಕ್ಷರು ಹೇಳಿದರು.