ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಎನ್ ಎಸ್ ಎಸ್ ಗಾಂಧೀಜಿಯವರ ಕನಸಿನ ಕೂಸು : ಡಾ. ಗಣಪತಿ ಲಮಾಣಿ

ಕೊಪ್ಪಳ:ರಾಷ್ಟ್ರೀಯ ಸೇವಾ ಯೋಜನೆಯು ಮಹಾತ್ಮಾ ಗಾಂಧೀಜಿಯವರ ಸರ್ವೋದಯ ಸಿದ್ದಾಂತಕ್ಕೆ ಸಂಬಂಧಿಸಿದೆ. ಇದು ಗಾಂಧೀಜಿಯವರ ಕನಸಿನ ಕೂಸಗಿತ್ತು ಎಂದು ಕಾಲೇಜಿನ ಪ್ರಾಚಾರ್ಯರಾದ ಡಾ. ಗಣಪತಿ ಲಮಾಣಿಯವರು ಹೇಳಿದರು.

ನಗರದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಮಂಗಳವಾರ ದಂದು ರಾಷ್ಟ್ರೀಯ ಸೇವಾ ಯೋಜನೆ (ಎನ್ ಎಸ್ ಎಸ್) ಯ ಸಂಸ್ಥಾಪನೆ ದಿನಚರಣೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.

ಅವರು ಮುಂದುವರೆದು ಮಾತನಾಡುತ್ತಾ ಭಾರತ ವಿಶೇಷವಾದ ದೇಶ, ನಮ್ಮ ದೇಶ ಕೃಷಿ ಪ್ರಧಾನ ದೇಶ,ಸರ್ವೋದಯ ಎಂದರೆ ಎಲ್ಲರೂ ಅಭಿವೃದ್ಧಿ ಎಂದರ್ಥ. ವಿದ್ಯಾರ್ಥಿಗಳು ಎನ್ ಎಸ್ ಎಸ್, ಕ್ರೀಡೆ, ಸ್ಕೌಟ್ಸ್ ಅಂಡ್ ಗೈಡ್ಸ್ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಿ. ಎಲ್ಲರೂ ಸೇವೆ ಮನೋಭಾವನೆ ಬೆಳಸಿಕೊಳ್ಳಿ. ಹಳ್ಳಿ ಜನರ ಸ್ವಭಾವವನ್ನು ಅರ್ಥ ಮಾಡಿಕೊಳ್ಳಿ. ಎನ್ ಎಸ್ ಎಸ್ ವಾರ್ಷಿಕ ವಿಶೇಷ ಶಿಬಿರಗಳಿಂದ ಹೆಚ್ಚು ಜ್ಞಾನ ಬರುತ್ತದೆ. ಎನ್ ಎಸ್ ಎಸ್ ನ ಮೂಲ ಉದ್ದೇಶ ಕೇವಲ ಸ್ವಚ್ಛಗೊಳಿಸುವುದಲ್ಲ. ಇತರರಲ್ಲಿ ಸ್ವಚ್ಛತಾ ಮನೋಭಾನೇಯನ್ನು ಬೆಳೆಸುವುದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಇತಿಹಾಸ ವಿಭಾಗದ ಸಹಾಯಕ ಪ್ರಾದ್ಯಾಪಕರಾದ ಶ್ರೀ ಮತಿ ನಾಗರತ್ನ ತಮ್ಮಿನಾಳ ಅವರು ಮಾತನಾಡುತ್ತಾ ಎನ್ ಎಸ್ ಎಸ್ ಅಂದ್ರೆ ಸೇವೆ ಎಂದರ್ಥ. ಹಾಗೆಯೇ ವಿದ್ಯಾಭ್ಯಾಸ ಪಡೆದು ನೀವು ಸೇವಾ ಮನೋಭಾವನೆಯನ್ನು ಬೆಳಸಿಕೊಳ್ಳಿ. ನಗರದಲ್ಲಿರವಷ್ಟು ಸ್ವಚ್ಛತೆ ಗ್ರಾಮೀಣ ಪ್ರದೇಶದಲ್ಲಿ ಇಲ್ಲ. ಗ್ರಾಮೀಣಭಿವೃದ್ಧಿಯೇ ದೇಶ ಅಭಿವೃದ್ಧಿ. ಎನ್ ಎಸ್ ಎಸ್ ನಿಂದ ಶಿಸ್ತು, ಸಂಯಮ, ಜ್ಞಾನ ಬರುತ್ತದೆ. ಸ್ವಚ್ಛತೆ ಕುರಿತು ತಿಳುವಳಿಕೆ ಬರುತ್ತದೆ ಎಂದು ಅವರು ಹೇಳಿದರು.

ಕಾಲೇಜಿನ ಕನ್ನಡ ವಿಭಾಗದ ಸಹ ಪ್ರಾಧ್ಯಪಕರಾದ ಡಾ. ಹುಲಿಗೆಮ್ಮ ಅವರು ಸಂಸ್ಕೃತಿ ಮತ್ತು ಸ್ವಚ್ಛತೆ ಎನ್ನುವುದು ಆಚರಣೆಯಲ್ಲಿ ಇರುತ್ತದೆ. ಸ್ವಚ್ಛತೆ ಇದೆ ಅಂದ್ರೆ ನಮ್ಮ ಮನಸ್ಸು ಕೂಡಾ ನಿರ್ಮಲವಾಗಿ ಇರುತ್ತದೆ. ಎಲ್ಲರೂ ಎನ್ ಎಸ್ ಎಸ್ ಶ್ರಮದಾನದಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳಬೇಕು. ನಮ್ಮ ಸುತ್ತ ಮುತ್ತ ಇರುವ ಅವರಣದ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು. ಈ ರೀತಿ ಆಚರಣೆಗಳನ್ನು ಮಾಡುವುದರಿಂದ ನಮಗೆ ಅವುಗಳ ಕುರಿತು ಮಾಹಿತಿ ದೊರೆಯುತ್ತದೆ ಎಂದು ಅವರು ಹೇಳಿದರು.

ಕಾಲೇಜಿನ ದೈಹಿಕ ಶಿಕ್ಷಣ ಭೋದಕರಾದ ಡಾ. ಪ್ರದೀಪ್ ಕುಮಾರ್ ಅವರು ಮಾತನಾಡುತ್ತಾ ಪ್ರತಿಯೊಬ್ಬರಲ್ಲಿ ಸೇವಾ ಮನೋಭಾವನೆ ಇರಬೇಕು. ನಮ್ಮ ಕಾಲೇಜಿನ ಆವರಣವನ್ನು ಸ್ವಚ್ಛತೆ ಕಾಪಾಡಿಕೊಳ್ಳುವುದು ನಮ್ಮ ಕರ್ತವ್ಯ ಹಾಗೂ ನಮ್ಮ ಜವಾಬ್ದಾರಿ ಕೂಡ ಹೌದು. ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಗುಣವನ್ನು ಅಳವಡಿಸಿಕೊಳ್ಳಬೇಕು. ನಾವು ಸೇವೆ ಮನೋಭಾವನೆ ಬೆಳಸಿಕೊಂಡರೆ ಅದು ನಮ್ಮ ಜೀವನದ ಉದ್ದಕ್ಕೂ ನಮಗೆ ದಾರಿ ದೀಪವಾಗುತ್ತದೆ. ನಾವು ಇನ್ನೊಬ್ಬರಿಗೆ ಸಹಾಯ ಮಾಡುವುದೇ ಸೇವೆ ಎಂದರ್ಥ ಸೇವೆ ಮಾಡಲು ಸಿಕ್ಕ ಅವಕಾಶಗಳನ್ನು ಬಳಸಿಕೊಳ್ಳಬೇಕು ಎಂದು ಹೇಳಿದರು.

ಕಾಲೇಜಿನ ಗ್ರಂಥಾಪಾಲಕರಾದ ಡಾ. ಮಲ್ಲಿಕಾರ್ಜುನ ಅವರು ಮಾತನಾಡುತ್ತಾ ನಮ್ಮ ದೇಶದಲ್ಲಿ ಎನ್ ಎಸ್ ಎಸ್ ಘಟಕಗಳು 1969 ಸೆಪ್ಟೆಂಬರ್ 24 ರಲ್ಲಿ ಪ್ರಾರಂಭ ಆಯಿತು. ಇದು ಗಾಂಧೀಜಿಯವರ ಕನಸಿನ ಕೂಸಗಿತ್ತು. ಗ್ರಾಮಗಳು ಉದ್ದಾರ ಆದ್ರೆ ಮಾತ್ರ ದೇಶ ಉದ್ದಾರ ಆಗುತ್ತದೆ. ಎನ್ ಎಸ್ ಎಸ್ ನ ಘೋಷ ವ್ಯಾಖ್ಯಾ ನಾನು ನನಗಾಗಿ ಅಲ್ಲ ನಾನು ನಿಮಗಾಗಿ ಎಂಬುದು. ಎನ್ ಎಸ್ ಎಸ್ ವಿದ್ಯಾರ್ಥಿಗಳು ಗ್ರಾಮೀಣ ಜನತೆಗೆ ಸ್ವಚ್ಛತೆ ಕುರಿತು ಅರಿವು ಮೂಡಿಸಬೇಕು. ನೀವು ಅರೋಗ್ಯವನ್ನು ಕಾಪಾಡಿಕೊಳ್ಳಿ. ನಮ್ಮ ಮನೆ ಮತ್ತು ಕಾಲೇಜುನ್ನು ಸ್ವಚ್ಛತೆ ಇಟ್ಟುಕೊಳ್ಳಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಎನ್ ಎಸ್ ಎಸ್ ಘಟಕದ ಸಂಚಾಲಕಾರದ ಡಾ. ನರಸಿಂಹ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ವಾಣಿಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಶ್ರೀ ವಿಠೋಬಾ ಎಸ್, ರಾಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಗವಿಸಿದ್ದಪ್ಪ ಮುತ್ತಾಳ, ಭೋಗೋಳ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಅಶೋಕ ಕುಮಾರ್, ಸ್ಕೌಟ್ ಅಂಡ್ ಗೈಡ್ಸ್ ಸಂಚಾಲಕರಾದ ಶ್ರೀ ಮತಿ ಸುಮಿತ್ರಾ ಎಸ್. ವಿ, ಭೋಗೋಳ ಶಾಸ್ತ್ರ ವಿಭಾಗದ ಉಪನ್ಯಾಸಕರಾದ ಶ್ರೀ ಶ್ರೀಕಾಂತ್ ಹಾಗೂ ವಿದ್ಯಾರ್ಥಿನಿಯರು, ಕಾಲೇಜಿನ ಭೋದಕ ಭೋದಕೇತರ ಸಿಬ್ಬಂದಿಗಳು ಇದ್ದರು.
ಡಾ. ನರಸಿಂಹ ನಿರೂಪಿಸಿ ,ಸ್ವಾಗತಿಸಿದರು. ಶ್ರೀಕಾಂತ್ ಸಿಂಗಾಪುರ್ ವಂದಿಸಿದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ