ಬಾಗಲಕೋಟೆ ಜಿಲ್ಲೆಯ ಅವಳಿ ನಗರಗಳು ಎಂದು ಖ್ಯಾತಿ ಪಡೆದ ರಬಕವಿ ಬನಹಟ್ಟಿ ನಗರಗಳಲ್ಲಿ ನೂತನವಾಗಿ ನಿರ್ಮಾಣಗೊಂಡ ಬಸ್ ನಿಲ್ದಾಣಗಳನ್ನು ಸಾರಿಗೆ ಸಚಿವ ಶ್ರೀ ರಾಮಲಿಂಗಾರೆಡ್ಡಿ ಅವರು ರಿಬ್ಬನ್ ಕಟ್ ಮಾಡುವುದರ ಮೂಲಕ ಲೋಕಾರ್ಪಣೆ ಮಾಡಿದರು.
ಈ ಅವಳಿ ನಗರಗಳ ಬಸ್ ನಿಲ್ದಾಣಗಳು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ಸೇರಿದ ಬಾಗಲಕೋಟೆ ಭಾಗದ ರಬಕವಿ ಹಾಗೂ ಬನಹಟ್ಟಿ ಬಸ್ ನಿಲ್ದಾಣಗಳನ್ನು ತಲಾ 1 ಕೋಟಿ 50 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ತೇರದಾಳ ಮತ ಕ್ಷೇತ್ರದ ಶಾಸಕ ಸಿದ್ದು ಸವದಿ ಈ ಅವಳಿ ನಗರಗಳಲ್ಲಿ ನೂತನವಾಗಿ ನಿರ್ಮಾಣಗೊಂಡ ಬಸ್ ನಿಲ್ದಾಣಗಳಿಗೆ ಕಂಪೌಂಡು ಗೋಡೆ ,ಶುದ್ಧ ಕುಡಿಯುವ ನೀರು, ಸುಸಜ್ಜಿತ ಶೌಚಾಲಯಗಳನ್ನು ನಿರ್ಮಾಣ ಮಾಡಲಿಕ್ಕೆ ತಲಾ ನಿಲ್ದಾಣಕ್ಕೆ 75 ಲಕ್ಷ ದಂತೆ ಎರಡು ನಿಲ್ದಾಣಗಳಿಗೆ ಒಂದೂವರೆ ಒಟ್ಟು 1 ಕೋಟಿ 50 ಲಕ್ಷ ರೂಪಾಯಿಗಳನ್ನು ಮಂಜೂರು ಮಾಡಬೇಕು ಹಾಗೂ ನಮ್ಮ ಕ್ಷೇತ್ರದಿಂದ ಎರಡು ಪಲ್ಲಕ್ಕಿ ಬಸ್ ಗಳು ಎರಡು ಎ.ಸಿ ಬಸ್ ಗಳು ನೀಡಬೇಕು ಎಂದು ಸಾರಿಗೆ ಸಚಿವರಲ್ಲಿ ಮನವಿ ಮಾಡಿದರು.
ಬಳಿಕ ಮಾತನಾಡಿದ ಸಾರಿಗೆ ಸಚಿವ ಶ್ರೀರಾಮಲಿಂಗಾ ರೆಡ್ಡಿ ಅವರು ಈ ಭಾಗದಿಂದ ಪಲ್ಲಕ್ಕಿ ಬಸ್, ಎಸಿ ಬಸ್ ಗಳಾಗಲೀ ವಾಯುವ್ಯ ರಸ್ತೆ ಸಾರಿಗೆ ಅಥವಾ ಕೆ ಎಸ್ ಆರ್ ಟಿಸಿ ಸಂಸ್ಥೆಯ ಮೂಲಕ ಈ ಬಸ್ ಗಳನ್ನು ಕ್ಷೇತ್ರದ ಸಾರ್ವಜನಿಕರಿಗೆ ಸೌಕರ್ಯ ಮಾಡುತ್ತೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಅಬಕಾರಿ ಸಚಿವ ಆರ್ ಬಿ ತಿಮ್ಮಪೂರ,ಕೆ.ಎಸ್.ಆರ್.ಟಿ.ಸಿ ನಿಗಮ ಮಂಡಳಿ ಅಧ್ಯಕ್ಷ ಪರಂಗೌಡ್ ಕಾಗೆ ,ಉಪಾಧ್ಯಕ್ಷ ಗದಗದ ಪೀರ್ ಸಾಬ್ ,ನಗರಸಭೆ ಅಧ್ಯಕ್ಷ ವಿದ್ಯಾ ದವಾಡಿ, ನಾಡಗೋಡ್ ಪಾಟೀಲ್ ,ಸಿದ್ದು ಕೊಣ್ಣುರ್, ಚಿದಾನಂದ್ ತೆಗ್ಗಿ, ಮಾಮುನ್ ರಶೀದ್ ಪಾರತನ ಹಳ್ಳಿ, ಅಬೂಬಕ್ಕರ್ ಜಮಖಂಡಿ ,ಮಹಾಲಿಂಗಪುರ ಸಭೆ ಅಧ್ಯಕ್ಷ ಯಲ್ಲನಗೌಡ ಪಾಟೀಲ್ ,ತೇರದಾಳ ಪುರಸಭೆ ಅಧ್ಯಕ್ಷರು ಇನ್ನೂ ಅನೇಕ ನಗರಸಭೆ ಸದಸ್ಯರುಗಳು ,ಮುಖಂಡರುಗಳು ಉಪಸ್ಥಿತರಿದ್ದರು.
ವರದಿ-ಮೆಹಬೂಬ್ ಬಾರಿಗಡ್ಡಿ