ಹನೂರು :ಭೀಮ್ ಸೇನಾ ಸಂಘಟನೆಯು ಅನ್ಯಾಯದ ವಿರುದ್ಧ ಧ್ವನಿ ಎತ್ತುವ ಮೂಲಕ ಸಂಘಟನೆ ನೌಕರರಿಗೆ ಅನ್ಯಾಯವಾದವರಿಗೆ ನಾಯ್ಯವನ್ನು ಕೊಡಿಸುವಲ್ಲಿ ನಮ್ಮ ಸಂಘ ಯಶಸ್ವಿಯಾಗಿ ಮುಂದೆ ನಡೆಯುತ್ತಿದೆ ಮುಂದೆಯೂ ಸಹಾ ನಿಮ್ಮೆಲ್ಲರ ಜೊತೆ ಸಂಘಟನೆ ಇರುತ್ತದೆ ಎಂದು ಭೀಮ್ ಸೇನಾ ಕರ್ನಾಟಕ ರಾಜ್ಯ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಭರತ್ ಬಳ್ಳಾರಿ ತಿಳಿಸಿದರು.
ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಭೀಮ್ ಸೇನಾ ರಾಜ್ಯ ಸರ್ಕಾರಿ ನೌಕರರ ಕ್ಷೇಮಾಭಿವೃದ್ಧಿ ಸಂಘ ಹನೂರು ತಾಲೂಕು ಹನೂರು ಶಾಖೆ ಪದಾಧಿಕಾರಿಗಳ ಪದಗ್ರಹಣ ಸಂಘದ ಉದ್ಘಾಟನೆ ಕಾರ್ಯಕ್ರಮದಲ್ಲಿ ಬುದ್ಧ ಬಸವ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ನಂತರ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ರಾಜ್ಯ ವ್ಯಾಪ್ತಿಯಲ್ಲಿ ಸಂಘಟನೆ ಮಾಡುತ್ತಾ ಬಂದಿದ್ದೇವೆ ನಮ್ಮ ಸಮುದಾಯ ನೌಕರರಿಗೆ ಇನ್ನೂ ಸಹ ತೊಂದರೆಯಾಗುತ್ತಿದೆ ನಮ್ಮ ಸಂಘಟನೆ ತಾಯಿ ಇದ್ದಂತೆ ಈ ಸಂಘಟನೆ ನಮ್ಮೆಲ್ಲರ ಸಂಘಟನೆ ಎಂದು ತಿಳಿದುಕೊಂಡಾಗ ಮಾತ್ರ ಸಂಘಟನೆ ಬೆಳವಣಿಗೆ ಸಾಧ್ಯ ಎಂದು ತಿಳಿಸಿದರು.
ಮನೋರಖ್ಖಿತ ಭಂತೇಜಿ ರವರು ಮಾತನಾಡುತ್ತಾ ಭೀಮ್ ಸೇನಾ ಸಂಘಟನೆಯು ಸಮುದಾಯದ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಿ ಹೋರಾಟ ಮಾಡುವ ಮೂಲಕ ನೊಂದ ಜನರ ಧ್ವನಿಯಾಗಿದೆ. ಸಂಘಟನೆಯ ಬಲಿಷ್ಠವಾಗಿ ಬೆಳೆಯಲು ಪ್ರತಿಯೊಬ್ಬರ ಸಹಕಾರ ಮುಖ್ಯ ಈ ನಿಟ್ಟಿನಲ್ಲಿ ಎಲ್ಲರೂ ಸಂಘಟಿತರಾಗಿ ಹೋರಾಡಬೇಕು ಎಂದು ಸಲಹೆ ನೀಡಿದರು.
ನೂತನವಾಗಿ ಆಯ್ಕೆಯಾದ ಭೀಮ್ ಸೇನಾ ರಾಜ್ಯ ಸರ್ಕಾರಿ ನೌಕರರ ಕ್ಷೇಮಾಭಿವೃದ್ಧಿ ಸಂಘ ಹನೂರು ತಾಲ್ಲೂಕು ಘಟಕದ ಪದಾಧಿಕಾರಿಗಳು:
ಪುರುಷ ಘಟಕದ ಪದಾಧಿಕಾರಿಗಳು:-
ಅಧ್ಯಕ್ಷರಾಗಿ ರಮೇಶ್,
ಪ್ರಧಾನ ಕಾರ್ಯದರ್ಶಿ ನಂಜುಂಡಯ್ಯ, ಉಪಾಧ್ಯಕ್ಷರಾದ ಪಶುಪತಿ,
ಖಜಾಂಚಿ ಕೆ ಶಿವಕುಮಾರ್,
ಕಾರ್ಯಧ್ಯಕ್ಷ ಕೆಂಚಪ್ಪ,
ಸಹ ಕಾರ್ಯದರ್ಶಿಯಾಗಿ ವೆಂಕಟೇಶ್,
ಬಿ ಮಧುಸೂದನ,
ಸಂಘಟನಾ ಕಾರ್ಯದರ್ಶಿಯಾಗಿ ಕೆ .ಮಧುಸೂದನ್, ರಮೇಶ್, ಆಯ್ಕೆಯಾಗಿದ್ದಾರೆ.
ಮಹಿಳಾ ಘಟಕದ ಪದಾಧಿಕಾರಿಗಳು: ಅಧ್ಯಕ್ಷೆ ಹೆಚ್ ಎಸ್ ಸಾವಿತ್ರಿ, ಉಪಾಧ್ಯಕ್ಷೆ ಶಿವಮ್ಮ, ಪ್ರಧಾನ ಕಾರ್ಯದರ್ಶಿ ರೂಪ ಶ್ರೀ, ಖಜಾಂಚಿ ಸೊಸೈಮರಿ, ಸಹ ಕಾರ್ಯದರ್ಶಿ ಮಹಾದೇವಮ್ಮ, ಸಂಘಟನಾ ಕಾರ್ಯದರ್ಶಿ ಸುಧಾ ಮಣಿ ಆಯ್ಕೆಯಾಗಿದ್ದಾರೆ.
ಈ ಸಂದರ್ಭದಲ್ಲಿ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಇಂದ್ರಕುಮಾರಿ ಭೀಮ್ ಸೇನಾ ಕರ್ನಾಟಕ ರಾಜ್ಯ ನೌಕರರ ಕ್ಷೇಮಾಭಿವೃದ್ಧಿ ಸಂಘ , ಪ್ರಧಾನ ಕಾರ್ಯದರ್ಶಿ ದೇವರಾಜಯ್ಯ, ಚಾ. ನಗರ ಜಿಲ್ಲಾಧ್ಯಕ್ಷರಾದ ಬಸವರಾಜು, ಪ್ರಾಂಶುಪಾಲರಾದ ದೇವರಾಜ್ ಚಾ. ನಗರ, ಮಂಡ್ಯ ಜಿಲ್ಲಾಧ್ಯಕ್ಷರಾದ ಮುತ್ತುರಾಜು, ಹಾಗೂ ಸರ್ಕಾರಿ ನೌಕರರ ಹಾಗೂ ಶಾಲಾ ಶಿಕ್ಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ವರದಿ ಉಸ್ಮಾನ್ ಖಾನ್