ಸರ್ವಸವನ್ನು ತ್ಯಾಗ ಮಾಡಿ
ನಿತ್ಯ ಮನುವಾದಿಗಳೊಂದಿಗೆ
ಸಂಘರ್ಷ ಮಾಡಿ ಗಳಿಸಿಕೊಟ್ಟ
ಸಮಾನತೆ ಉಳಿಸಿಕೊಳ್ಳಲಾಗಲಿಲ್ಲ,
ನಿಮ್ಮ ಜೀವನದ ಆದರ್ಶ
ತತ್ವ ಸಿದ್ದಾಂತಗಳನ್ನು ಮರೆತು
ಸ್ವಾಭಿಮಾನ ಬದುಕನ್ನು ಕಟ್ಟಿಕೊಳ್ಳದೆ
ಮತ್ತೆ ಗುಲಾಮರಾಗಿದ್ದೇವೆ ನಾವು,
ಶತ ಶತಮಾನಗಳಿಂದಲೂ ಆಳವಾಗಿ
ಬೇರೂರಿದ ಗುಲಾಮಗಿರಿಯಿಂದ
ಸ್ವತಂತ್ರರನ್ನಾಗಿ ಮಾಡಿದ್ದರೂ
ಮತ್ತೆ ಗುಲಾಮರಾಗಿದ್ದೇವೆ ನಾವು,
ಮೀಸಲಾತಿಯ ಬೆವರಿನ ಫಲವನ್ನು
ಉಂಡ ನೌಕರರು ರಾಜಕಾರಣಿಗಳು
ಸಮುದಾಯದ ಹಿತವನ್ನು ಬಯಸದೆ
ಸ್ವಾರ್ಥಿಗಳಾಗಿ ಮರೆಯುತ್ತಿರುವರನ್ನು,
ತಮ್ಮ ತಮ್ಮ ವೈಯಕ್ತಿಕ ಪ್ರತಿಷ್ಠೆ
ನಾಯಕತ್ವಕ್ಕಾಗಿ ನೂರೆಂಟು ಬಣಗಳಾಗಿ
ಒಡೆದು ಹಂಚಿ ಹೋಗಿದ್ದೇವೆ
ಒಟ್ಟುಗೂಡಲಾಗದೆ ನಾವುಗಳು,
-ವೀರೇಶ ಎಚ್ ಕೊಂಕಲ್ ,ಯುವ ಬರಹಗಾರರು