ತಮ್ಮ ಮನಸ್ಸನ್ನು ಸಂಪೂರ್ಣವಾಗಿ ಹತೋಟಿಗೆ ತಂದು ಮುಂದಿನ ದಿನಗಳಲ್ಲಿ ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳಿ:ಶಾಸಕ ಎಂ.ಆರ್ ಮಂಜುನಾಥ್.
ಚಾಮರಾಜನಗರ ಜಿಲ್ಲೆಯ ಹನೂರು
ತಾಲ್ಲೂಕಿನ ವಾಸವಿ ಕಲ್ಯಾಣ ಮಂಟಪದಲ್ಲಿ ಜಗದ್ಗುರು ಶ್ರೀ ವೀರ ಸಿಂಹಾಸನ ಮಹಾಸಂಸ್ಥಾನ ಮಠ ಹಾಗೂ ಶ್ರೀ ಸುತ್ತೂರು ಜೆಎಸ್ಎಸ್ ಮಹಾ ವಿಧ್ಯಾಪೀಠ ಮೈಸೂರು ಇವರ ಸಹಯೋಗದೊಂದಿಗೆ ಉಚಿತ ಕುಡಿತ ಬಿಡಿಸುವ ಶಿಬಿರ ಆಯೋಜಿಸಿದ್ದು ಸುತ್ತೂರು ಶ್ರೀಗಳ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಚಾಲನೆ ನೀಡಿ ನಂತರ ಮಾತನಾಡಿದ ಶಾಸಕರಾದ ಎಂ.ಆರ್. ಮಂಜುನಾಥ್
ಜನರ ಆರೋಗ್ಯ ಮತ್ತು ಬದುಕಿನಲ್ಲಿ ಕುಡಿತದಿಂದ ಹಾನಿಕಾರಕವಾಗಿರುತ್ತದೆ ಎಂಬುದನ್ನು ಎಲ್ಲಾ ಗಣ್ಯ ವ್ಯಕ್ತಿಗಳ ತಮ್ಮ ಅನಿಸಿಕೆಗಳನ್ನು ತಿಳಿಸಿದ್ದಾರೆ .ದಿನ ನಿತ್ಯ ತಮ್ಮಬಳಿ ಬರುವ ವ್ಯಕ್ತಿಗಳಿಗೆ ತಿಳುವಳಿಕೆಗಳನ್ನು ಹೆಳುತ್ತ ನಿಮ್ಮ ಈ ದುಶ್ಚಟದಿಂದ ಮಹಿಳೆಯರಿಗೆ ಬಹಳ ನೋವಿದೆ ,ಮಹಿಳೆಯರ ಮನಸ್ಥಿತಿಯನ್ನು ಬದಾಲಾಯಿಸಿ ಅವರ ಮನ ಪರಿವರ್ತನೆ ಮಾಡಬೇಕು ,ಸರ್ಕಾರದ ಆದಾಯ ಜೊತೆಯಲ್ಲಿ ಸಾಮಾನ್ಯ ಜನರ ಜೀವನದಲ್ಲಿ ಬಹಳಷ್ಟು ಏರುಪೇರಾಗುತ್ತಿದೆ ಇದರ ಕಡೆ ಸರ್ಕಾರಗಳು ಗಮನ ಹರಿಸಬೇಕು ,ನಮಗೆ ಭಗವಂತ ಕೊಟ್ಟಿರುವ ದೇಹವನ್ನು ಸಂಪೂರ್ಣವಾಗಿ ಹತೋಟಿಗೆ ತಂದು ಮುಂದಿನ ದಿನಗಳಲ್ಲಿ ಜೀವನ ಶೈಲಿಯನ್ನು ಬದಲಾಯಿಸಿಕೊಂಡು ನಡೆಯಬೇಕು ಎಂದರು ಇದಲ್ಲದೆ ಸ್ವಾಮೀಜಿಗಳನ್ನು ಮಾನವ ರೂಪದಲ್ಲಿ ನಮ್ಮಬಳಿಗೆ ಕಳುಹಿಸಿದ್ದಾರೆ ಎಂದು ಸ್ವಾಮೀಜಿಗಳಿಗೆ ಧನ್ಯವಾದಗಳನ್ನು ತಿಳಿಸಿದರು.
ಇದೇ ಸಂದರ್ಭದಲ್ಲಿ ಶ್ರೀ ಸುತ್ತೂರು ಮಠದ ಶಿವರಾತ್ರಿ ದೇಶೀಕೇಂದ್ರ ಸ್ವಾಮಿಗಳು,ಸಾಲೂರು ಬೃಹನ್ ಮಠದ ಶಾಂತಮಲ್ಲಿಕಾರ್ಜುನ ಸ್ವಾಮಿಗಳು,ರಾಮಪುರದ ಬಸಣ್ಣ ಸ್ವಾಮಿಗಳು, ಸ್ವಾಮಿ ಮಲೈ ಮಹದೇಶ್ವರ ಬೆಟ್ಟದ ಪ್ರಾಧಿಕಾರದ ಕಾರ್ಯದರ್ಶಿ ರಘು,ಮಾಜಿ ಶಾಸಕಿ ಪರಿಮಳ ನಾಗಪ್ಪ, ದತ್ತೇಶ್ ಕುಮಾರ್,ನಿಶಾಂತ್,ಪಟ್ಟಣ ಪಂಚಾಯತಿ ಅಧ್ಯಕ್ಷರಾದ ಮುಮ್ತಾಜ್ ಬಾನು ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ವರದಿ ಉಸ್ಮಾನ್ ಖಾನ್