ಕೊಪ್ಪಳ:ಮಹಾತ್ಮಾ ಗಾಂಧೀಜಿಯವರು ಸರ್ವೋದಯ ಸಿದ್ಧಾಂತವನ್ನು ಪ್ರತಿಪಾದಿಸಿದರು. ಸರ್ವೋದಯ ಅಂದ್ರೆ ಎಲ್ಲರೂ ಅಭಿವೃದ್ಧಿ ಎಂದರ್ಥ. ವಿದ್ಯಾರ್ಥಿಗಳು ಗಾಂಧೀಜಿಯವರ ವಿಚಾರಗಳನ್ನು ತಿಳಿದುಕೊಳ್ಳಬೇಕು ಎಂದು ಕಾಲೇಜಿನ ಪ್ರಾಚಾರ್ಯ ಡಾ. ಗಣಪತಿ ಲಮಾಣಿಯವರು ಹೇಳಿದರು.
ಕೊಪ್ಪಳದ ನಗರದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಬುಧುವಾರದಂದು ಮಹಾತ್ಮಾ ಗಾಂಧೀಜಿ ಮತ್ತು ಲಾಲ್ ಬಹುದ್ದೂರ್ ಶಾಸ್ತ್ರೀ ಜಯಂತಿಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ನಮ್ಮ ದೇಶದ ಸ್ವಾತಂತ್ರಕ್ಕಾಗಿ ಮಹಾತ್ಮಾ ಗಾಂಧೀಜಿ ಮತ್ತು ಲಾಲ್ ಬಹುದ್ದೂರ್ ಶಾಸ್ತ್ರೀ ಅವರು ತಮ್ಮ ತನು, ಮನ ಮತ್ತು ಧನದಿಂದ ಹೋರಾಟ ಮಾಡಿದ್ದಾರೆ ಇವರಿಬ್ಬರೂ ಸರಳ ಮತ್ತು ಪ್ರಾಮಾಣಿಕ ವ್ಯಕ್ತಿತ್ವ ಹೊಂದಿದವವರು.
ಗಾಂಧೀಜೀವರು ಸತ್ಯಾಗ್ರಹ, ಸತ್ಯ ಮತ್ತು ಅಹಿಂಸ ತತ್ವಗಳನ್ನು ಇಡಿ ಜಗತ್ತಿಗೆ ಕೊಡುಗೆ ನೀಡಿದ್ದಾರೆ.
ವಿದ್ಯಾರ್ಥಿಗಳು ಶ್ರಮದಾನದಂತಹ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು. ಎಲ್ಲರೂ ಸೇವೆ ಮನೋಭಾವನೆ ಬೆಳಸಿಕೋಳ್ಳಬೇಕು. ಗ್ರಾಮೀಣ ಅಭಿವೃದ್ಧಿಯೇ ದೇಶದ ಅಭಿವೃದ್ಧಿ ಅಂತ ಗಾಂಧೀಜಿಯವರು ಹೇಳಿದ್ದಾರೆ. ಆದ್ದರಿಂದ ನಾವು ಹಳ್ಳಿ ಜನರ ಬದುಕು ಮತ್ತು ಅವರ ಸ್ವಭಾವವನ್ನು ಅರ್ಥ ಮಾಡಿಕೊಳ್ಳಬೇಕು.
ನಮ್ಮ ದೇಶದ ಎರಡನೇ ಪ್ರಧಾನಿ ಲಾಲ್ ಬಹುದ್ದೂರ್ ಶಾಸ್ತ್ರಿಯವರು ಅತ್ಯಂತ ಪ್ರಾಮಾಣಿಕ ಮತ್ತು ಸರಳ ವ್ಯಕ್ತಿತ್ವ ಹೊಂದಿರುವವರು. ಅವರು ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದರು. ಅವರು ಮರಣ ಹೊಂದಿದಾಗ ಅವರ ಬ್ಯಾಂಕ್ ಖಾತೆಯಲ್ಲಿ ಕೇವಲ 315 ರೂಪಾಯಿಗಳು ಮಾತ್ರ ಇದ್ದವು ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕರಾದ ಡಾ. ಹುಲಿಗೆಮ್ಮ, ಡಾ. ಪ್ರದೀಪ್ ಕುಮಾರ್, ಡಾ ಮಲ್ಲಿಕಾರ್ಜುನ, ಡಾ. ನರಸಿಂಹ, ಡಾ. ಅಶೋಕ ಕುಮಾರ್, ಶ್ರೀ ಮತಿ ಸುಮಿತ್ರ ಎಸ್. ವಿ, ಕಾಲೇಜಿನ ಭೋದಕೇತರ ಸಿಬ್ಬಂದಿಗಳಾದ ಅಲ್ಲಾಬಕ್ಷಿ, ಹನುಮಪ್ಪ, ಶ್ರೀ ಮತಿ ಲಕ್ಷ್ಮಿ ಎ. ಕೆ, ಶ್ರೀ ಮತಿ ರುಕ್ಕಮ್ಮ, ಗವಿಸಿದ್ದಪ್ಪ ಅಜ್ಜ ಹಾಗೂ ವಿದ್ಯಾರ್ಥಿಗಳು ಇದ್ದರು.
ಗಾಂಧೀಜಿಯವರ ಜಯಂತಿ ಅಂಗವಾಗಿ ಕಾಲೇಜು ಆವರಣದಲ್ಲಿ ವಿದ್ಯಾರ್ಥಿಗಳು ಮತ್ತು ಕಾಲೇಜಿನ ಎಲ್ಲಾ ಭೋದಕ ಮತ್ತು ಭೋದಕೇತರ ಸಿಬ್ಬಂದಿಗಳು ಶ್ರಮದಾನ ಮಾಡಿದರು.
ಕಾರ್ಯಕ್ರಮವನ್ನು ಡಾ. ಹುಲಿಗೆಮ್ಮ ನಿರೂಪಿಸಿ, ಸ್ವಾಗತಿಸಿದರು. ಡಾ. ಪ್ರದೀಪ್ ಕುಮಾರ್ ವಂದಿಸಿದರು.