ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಎಚ್. ಹೊಸೂರು ಗ್ರಾಮದಲ್ಲಿ ಜಿಲ್ಲಾ ಕಾನೂನು ಸೇವಾ ಸಮಿತಿಯ ಆದೇಶದ ಮೇರೆಗೆ ತಾಲೂಕು ಕಾನೂನು ಸೇವಾ ಸಮಿತಿ ,ನ್ಯಾಯವಾದಿಗಳ ಸಂಘ, ಗ್ರಾಮ ಪಂಚಾಯಿತಿ ಹಿರೇಮ್ಯಾಗೇರಿ ಮತ್ತು ತಾಲೂಕಿನ ಎಲ್ಲಾ ಇಲಾಖೆಗಳ ಆಶ್ರಯದಲ್ಲಿ ಎಚ್. ಹೊಸೂರು ಗ್ರಾಮವನ್ನು ವ್ಯಾಜ್ಯಮುಕ್ತ, ತ್ಯಾಜ್ಯ ಮುಕ್ತ ಗ್ರಾಮವನ್ನಾಗಿ ಮಾಡುವ ಅಭಿಯಾನವು ಎಲ್ಲಾ ಇಲಾಖೆಗಳ ಅಧಿಕಾರಿಗಳ ಮತ್ತು ಗೌರವಾನ್ವಿತ ನ್ಯಾಯಾಧೀಶರ ವಕೀಲರ ಸಂಘದ ಅಧ್ಯಕ್ಷರ ಸಮ್ಮುಖದಲ್ಲಿ ಯಶಸ್ವಿಯಾಗಿ ನೆರವೇರಿತು.
ಇದೇ ಸಂದರ್ಭದಲ್ಲಿ ಗರ್ಭಿಣಿಯರಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಸೀಮಂತ ಕಾರ್ಯಕ್ರಮ ಜರುಗಿತು.
ಈ ಕಾರ್ಯಕ್ರಮದಲ್ಲಿ ತಾಲೂಕಿನ ತಹಶೀಲ್ದಾರ ಬಸವರಾಜ್ ಚನ್ನಳ್ಳಿ, ತಾಲೂಕ ಪಂಚಾಯಿತಿ ಇ.ಓ. ಸಂತೋಷ್ ಬಿರಾದಾರ್,ಸಿಪಿಐ ಮೌನೇಶ್ವರ ಪಾಟೀಲ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಬೆಟದೇಶ್, ಬಿಇಓ ಎಸ್.ಪಾಟೀಲ್, ತಾಲೂಕ ವೈದ್ಯಾಧಿಕಾರಿಗಳು, ಪಶು ಇಲಾಖೆಯವರು, ಕೃಷಿ ಇಲಾಖೆಯವರು,ಅ.ಪ.ರ.ಸರ್ಕಾರಿ ವಕೀಲರು
ಮಲ್ಲನಗೌಡ ಎಸ್.ಪಾಟೀಲ,
ಹಿರಿಯ ವಕೀಲರಾದ ರಾಜಶೇಖರ್ ನಿಂಗೋಜಿ, ಸಿಎಸ್ ಬನಪ್ಪ ಗೌಡ, ಎಸ್ಎಸ್ ಮಾದೇನೂರು, ಪ್ರವೀಣ್ ಮಧುಗ ,ಪಿಆರ್ ಹಿರೇಮಠ, ಹನುಮಂತಪ್ಪ ಕಮ್ಮಾರ್ ಸೇರಿದಂತೆ ಗ್ರಾಮಸ್ಥರು ಹಾಗೂ ಎಲ್ಲಾ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ವರದಿ-ಮೌನೇಶ. ಹೆಚ್.ಮದ್ಲೂರು