ಕಲಬುರಗಿ ಜಿಲ್ಲೆಯ ಬಹುತೇಕ ಎಮ್ ಎಸ್ ಐ ಎಲ್ ಮಳಿಗೆಗಳು ಎಮ್ ಆರ್ ಪಿ ದರಕ್ಕಿಂತಲೂ ₹-5 ರಿಂದ 10 ರೂಪಾಯಿವರೆಗೆ ಮಾರಾಟ ಮಾಡಿ ಹಗಲು ದರೋಡೆ ಮಾಡುತ್ತಿದ್ದಾರೆ ಹಾಗಾಗಿ ಮಾನ್ಯ ತಹಶೀಲ್ದಾರಿಗೆ ಮನವಿಯ ಮೂಲಕ ತಿಳಿಸುವುದೆನೆಂದರೆ ಜೇವರ್ಗಿ ತಾಲೂಕಿನಲ್ಲಿ ಎಲ್ಲಾ MSIL ಮಳಿಗೆಗಳಲ್ಲಿ MRP ದರ ಬಿಟ್ಟು ಒಂದು ಬಾಟಲ್ ನಿಂದ 5 ರಿಂದ 10 ರೂಪಾಯಿ ವರೆಗೆ ಹೆಚ್ಚಿನ ಹಣವನ್ನು ಜನಸಾಮಾನ್ಯ ರಿಂದ ಪಡೆದುಕೊಳ್ಳುತ್ತಿದ್ದು, ಈ ವಿಷಯದ ಕುರಿತು ಯಾರು ತಮ್ಮ ಮೇಲೆ ಆರೋಪ ಮಾಡಿದರು ಏನು ಮಾಡದಂತೆ ಸಂಬಂದ ಪಟ್ಟ MSIL ಅಧಿಕಾರಿಗಳು, MSIL ಜಿಲ್ಲಾ ವ್ಯವಸ್ಥಾಪಕರಿಗೆ ಪ್ರತಿ ತಿಂಗಳಂತೆ ಲಂಚ ನೀಡುತ್ತಿದ್ದಾರೆ.
ಆದ ಕಾರಣ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಮಾನ್ಯರಾದ ತಾವುಗಳು ಜೇವರ್ಗಿ ತಾಲೂಕಿನ ಎಲ್ಲಾ MSIL ಮಳಿಗಿಗಳಲ್ಲಿ MRP ದರ ತೆಗೆದುಕೊಳ್ಳುವಂತೆ ಆದೇಶ ಮಾಡುವ ಕುರಿತು ಮನವಿ ಪತ್ರ ಮೂಲಕ ಕರ್ನಾಟಕ ರಣಧೀರ ಪಡೆ ಮನವಿ ಮಾಡಿ ಕೊಳ್ಳುತ್ತದೆ, ಒಂದು ವೇಳೆ ಕ್ರಮ ಕೈಗೊಳ್ಳದೆ ಹೋದರೆ ರಾಜ್ಯ ಹೆದ್ದಾರಿ ಬಂದ್ ಮಾಡಿ ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ ಎಂದು ಈ ಮೂಲಕ ಮನವಿ ಪತ್ರ ನೀಡಲಾಗುತ್ತಿದೆ ಎಂದು ರಣಧೀರ ಪಡೆ ಅಧ್ಯಕ್ಷ ಹಾಗೂ ಪದಾಧಿಕಾರಿಗಳು ಮಾನ್ಯ ತಹಶಿಲ್ದಾರರ ರವರಿಗೆ ಮನವಿ ಪತ್ರ ನೀಡಿ ಪತ್ರಿಕಾ ಪ್ರಕಟಣೆ ಹೊರಡಿಸಿದರು.
ವರದಿ: ಚಂದ್ರಶೇಖರ ಪಾಟೀಲ್