ಬಾಗಲಕೋಟೆ / ರಬಕವಿ – ಬನಹಟ್ಟಿ : ಮಂಡ್ಯದಲ್ಲಿ ಜರುಗಲಿರುವ 87ನೇಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡಿಗರೆಲ್ಲರೂ ಭಾಗವಹಿಸಲು ಅರಿವು ಮೂಡಿಸುವ ದೃಷ್ಟಿಯಿಂದ ಕನ್ನಡ ಜ್ಯೋತಿ ಹೊತ್ತ ಕನ್ನಡ ರಥ ರಾಜ್ಯದ ತುಂಬೆಲ್ಲಾ ಸಂಚರಿಸುತ್ತಿದ್ದು ,ಅಕ್ಟೋಬರ್ 6 ರಂದು ಮುಂಜಾನೆ ಆಗಮಿಸಲಿದ್ದು, ಕಾರಣ ರಬಕವಿ ಬನಹಟ್ಟಿ ತಾಲೂಕ ಆಡಳಿತ ಕಚೇರಿಯಲ್ಲಿ ಪೂರ್ವಭಾವಿ ಸಭೆ ನಡೆಯಿತು. ಈ ಭವ್ಯ ಜ್ಯೋತಿ ಹೊತ್ತ ರಥ ಸ್ವಾಗತಿಸಲು ತಾಲೂಕ ಆಡಳಿತವೂ ಸಜ್ಜಾಗಿದೆ. ರಬಕವಿ ನಗರದ ಕಂಠಿ ಬಸವೇಶ್ವರ ಜ್ಯೋತಿ ಹೊತ್ತ ರಥ ಸ್ವಾಗತ ಮಾಡಿಕೊಂಡು ನಗರದ ಹೊಸ ಬಸ್ ನಿಲ್ದಾಣ ಹಾಗೂ ಹಳೆ ಬಸ್ ನಿಲ್ದಾಣ ಮಾರ್ಗವಾಗಿ ಮಹಾಲಿಂಗಪುರ ನಾಕಾ , ಹಜಾರೆ ಸರ್ಕಲ್ , ಹೊಸೂರು ಮಾರ್ಗವಾಗಿ ಬನಹಟ್ಟಿ ನಗರಕ್ಕೆ ಆಗಮಿಸಲಿದ್ದು , ನಗರದ ಎಸ್ ಆರ್ ಎ ಕಾಲೇಜ್ ಮೂಲಕ ಮಹಾತ್ಮಾ ಗಾಂಧಿ ವೃತ್ತದಿಂದ ಹೊರಟು ವೈಭವ ಚಿತ್ರಮಂದಿರದಿಂದ ನಗರದ ನೂಲಿನ ಗಿರಣಿ ವರೆಗೆ ನಡೆಯಲಿದೆ ಎಂದು ರಬಕವಿ ಬನಹಟ್ಟಿ ತಾಲೂಕ ಗ್ರೇಡ್ ಟು -ತಹಶೀಲ್ದಾರ್ ಎಸ್ ಬಿ ಮಾಯಣ್ಣವರ್ ಹಾಗೂ ಎಸ್ ಬಿ ಕಾಂಬಳೆ ಹೇಳಿದರು.
ಈ ಪೂರ್ವಭಾವಿ ಸಭೆ ಸಂದರ್ಭದಲ್ಲಿ ರಬಕವಿ ಬನಹಟ್ಟಿ ತಾಲೂಕ ತಹಶೀಲ್ದಾರರಾದ ಎಸ್ ಬಿ ಕಾಂಬಳೆ, ರಬಕವಿ ಬನಹಟ್ಟಿ ನಗರಸಭೆ ಕಮಿಷನರ್ ಹಾಗೂ ಶಾಲಾ ಕಾಲೇಜುಗಳ ಶಿಕ್ಷಕ – ಶಿಕ್ಷಕಿಯರು , ಮತ್ತು ರಬಕವಿ ಬನಹಟ್ಟಿ ಆಟೋ ಚಾಲಕರ ಅಧ್ಯಕ್ಷರು ಹಾಗೂ ಚಾಲಕರು ಇನ್ನು ಅನೇಕರು ಇದ್ದರು.
ಕನ್ನಡ ಜ್ಯೋತಿ ಹೊತ್ತ ಕನ್ನಡದ ರಥ ಸ್ವಾಗತಿಸಲು ಕನ್ನಡಪರ ಸಂಘಟನೆಗಳಿಗೆ ಕರೆಯದೆ ಇರುವುದು ಖಂಡನೀಯ : ಕ.ರ.ವೇ ಬಿ ಎಸ್ ಜಮಾದಾರ್
ಕನ್ನಡದ ಜ್ಯೋತಿ ಹೊತ್ತ ಕನ್ನಡದ ರಥ ಸ್ವಾಗತಿಸಲು ನಗರದ ಕನ್ನಡ ಪರ ಹೋರಾಟಗಾರರ ಸಂಘಟನೆಗಳಿಗೆ ಪೂರ್ವಭಾವಿ ಸಭೆಗೆ ಕರೆಯದೆ ಇರುವ ತಾಲೂಕ ತಹಶೀಲ್ದಾರ್ ಅನುಪಸ್ಥಿತಿಯಲ್ಲಿ ತಾಲೂಕ ಉಪ ತಹಶೀಲ್ದಾರರಾದ ಎಸ್ ಬಿ ಕಾಂಬಳೆ ಅವರ ನಡೆ ಖಂಡನೀಯವಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ( ನಾರಾಯಣಗೌಡರ ಬಣ ) ತಾಲೂಕ ಕಾರ್ಯದರ್ಶಿ, ಬಿ.ಎಸ್ ಜಮಾದಾರ್ ಅವರು ಆಕ್ರೋಶ ವ್ಯಕ್ತಪಡಿಸಿದರು.
ವರದಿ ಮೆಹಬೂಬ್ ಎಂ ಬಾರಿಗಡ್ಡಿ